ಸಣ್ಣದು, ದೊಡ್ಡದು ಅಂತ ಖಾತೆಗಳು ಇಲ್ಲ: ಸಚಿವ ನಾಗೇಶ್

By Kannadaprabha News  |  First Published Aug 9, 2021, 3:41 PM IST

*  ಇವತ್ತು ಖಾತೆಗಳ ವಿಚಾರದಲ್ಲಿ ಹೊಸ ಇಂಪ್ರೆಶನ್ ಕ್ರಿಯೇಟ್ ಆಗಿದೆ 
*  ಕೆಲಸ ಮಾಡೋದಕ್ಕೆ ಎಲ್ಲ ಖಾತೆ ಇದೆ. ಸಮಾಜದ ವ್ಯವಸ್ಥೆ ಸರಿಮಾಡೋದು ನಮ್ಮ ಕರ್ತವ್ಯ 
*  ಹಳಬರು- ಹೊಸಬರು, ವಲಸಿಗರು ಅನ್ನೋದು ಇಲ್ಲಿ ವಿಚಾರವೇ ಇಲ್ಲ 
 


ಯಾದಗಿರಿ(ಆ.09): ಖಾತೆ ವಿಚಾರವಾಗಿ ‘ಕ್ಯಾತೆ’ ತೆಗೆದಿರುವ ಬೊಮ್ಮಾಯಿ ಸಚಿವ ಸಂಪುಟದ ಸದಸ್ಯರಿಗೆ ಬುದ್ಧಿಮಾತು ಹೇಳಿರುವ ರಾಜ್ಯ ಶಿಕ್ಷಣ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್, ಸಣ್ಣದು-ದೊಡ್ಡದು ಅಂತನ್ನೋ ಖಾತೆಗಳು ಇರೋಲ್ಲ. ಸಂವಿಧಾನದ ಆಶಯಕ್ಕೆ ಬದ್ಧರಾಗಿ ಎಲ್ಲರೂ ಒಂದಾಗಿ ಕೆಲಸ ಮಾಡಿದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದರು. 

ಕೋವಿಡ್-19 ಮುಂಜಾಗ್ರತೆ ಕ್ರಮಗಳ ಹಾಗೂ ಪ್ರವಾಹ ಪರಿಸ್ಥಿತಿ ವೀಕ್ಷಣೆಗೆಂದು ಎರಡು ದಿನಗಳ ಕಾಲ ಶನಿವಾರ ಜಿಲ್ಲೆಗೆ ಆಗಮಿಸಿದ್ದ ಅವರು, ಭಾನುವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ತಮ್ಮನ್ನು ಭೇಟಿಯಾದ ‘ಕನ್ನಡಪ್ರಭ‘ದೊಂದಿಗೆ ಮಾತನಾಡಿದ ಅವರು, ಖಾತೆಗಾಗಿ ಅಪಸ್ವರವೆತ್ತಿದ ಸಚಿವ ಆನಂದ್‌ ಸಿಂಗ್ ಬಗ್ಗೆ ಪ್ರತಿಕ್ರಿಯಿಸಿದರು. 

Tap to resize

Latest Videos

undefined

ಒಂದು ಖಾತೆ ತೆಗೆದುಕೊಂಡು ದೇಶ ಉದ್ಧಾರ ಮಾಡೋಕಾಗಲ್ಲ. ಎಲ್ಲ ಖಾತೆಗಳಿಗೂ ಅಷ್ಟೇ ಮಹತ್ವವಿರುತ್ತದೆ. ಸಣ್ಣದು, ದೊಡ್ಡದು ಅಂತೇನಿಲ್ಲ. ಆನಂದ್ ಸಿಂಗ್ ಅತ್ಯಂತ ಒಳ್ಳೆಯ ಮನುಷ್ಯ. ಕೆಲಸ ಮಾಡೋಕೆ ಇದೇ ಖಾತೆ ಬೇಕಂತೇನಿಲ್ಲ, ಸಿಕ್ಕ ಖಾತೆಗಳಲ್ಲಿ ಸಮಾಜದಲ್ಲಿನ ವ್ಯವಸ್ಥೆ ಸರಿಪಡಿಸಲು ಮುಂದಾಗಬೇಕು ಅಷ್ಟೇ ಎಂದರು. 

ಕೊರೋನಾ 3ನೇ ಅಲೆ ಬಗ್ಗೆ ಭಗವಂತನೇ ಹೇಳ್ಬೇಕು: ಸಚಿವ ನಾಗೇಶ್

ದೇಶ ಕಟ್ಟುವಲ್ಲಿ ಒಂದು ಸಿದ್ಧಾಂತವಿದೆ, ಬಿಜೆಪಿ ಈ ಸಿದ್ಧಾಂತಗಳಿಗೆ ಅನುಗುಣವಾಗಿ ನಡೆಯುತ್ತಿದೆ. ಬಿಜೆಪಿ ಮೂಲ ಕಾರ್ಯಕರ್ತರ ಮನಸ್ಥಿತಿಯೂ ಇದಾಗಿದೆ. ಸಿಎಂ ಯಾರಾಗ್ಬೇಕು, ಪಿಎಂ ಯಾರಾಗ್ಬೇಕು, ಯಾರು ಮಿನಿಸ್ಟರ್ ಆಗಬೇಕು ಅನ್ನೋದು ನಿರ್ಧಾರ ಮಾಡುವುದಲ್ಲ. ಒಂದು ಖಾತೆಯಿಂದ ದೇಶ ಇಂಪ್ರೂವ್ ಆಗೋಲ್ಲ. ಎಲ್ಲ ಖಾತೆಗಳಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದರು. 

ಅವತ್ತಿನ ಒಂದು ಕಾಲದಲ್ಲಿ ಖಾತೆಗಳ ವಿಚಾರದಲ್ಲಿ ಮಾನಸಿಕತೆಯೇ ಬೇರೆಯಿತ್ತು. ಹೋಂ ಮಿನಿಸ್ಟರ್ ಬೇಕು, ರೆವೆನ್ಯೂ ದೊಡ್ಡದು ಅಂತಿದ್ರು. ಇವತ್ತು ಹೋಂ (ಗೃಹ) ಬೇಡ, ರೆವೆನ್ಯೂ ಬೇಡ, ಪಿಡಬ್ಲ್ಯುಡಿ ಬೇಕು, ನೀರಾವರಿ ಬೇಕು, ಸೋಷಿಯಲ್ ವೆಲ್‌ಫೇರ್ ದೊಡ್ಡದು ಅಂತಿದ್ದಾರೆ. ಈ ಮಾನಸಿಕತೆ ಇರಬಾರದು. ಕಾನೂನು ಮತ್ತು ಸಂವಿಧಾನ ಇಟ್ಟುಕೊಂಡು ಕಟ್ಟಕಡೆಯ ಮನುಷ್ಯನಿಗೆ ವ್ಯವಸ್ಥೆ ಕಲ್ಪಿಸುವಲ್ಲಿ ಮುಂದಾಗಬೇಕು, ಸಂವಿಧಾನಗಳಿಗೆ ಆಶಯಗಳಿಗೆ ಬದ್ಧರಾಗಿ ಸರ್ಕಾರ ನಡೆಸಬೇಕು. ಮಾಧ್ಯಮಗಳಲ್ಲೂ ಆ ಖಾತೆ ಭಾರಿ, ಈ ಖಾತೆ ಸಣ್ಣದು ಎಂದು ಬಿಂಬಿಸುತ್ತಿರುವುದು ವಿಪರ್‍ಯಾಸ ಎಂದ ಅವರು, ಇವತ್ತು ಖಾತೆಗಳ ವಿಚಾರದಲ್ಲಿ ಹೊಸ ಇಂಪ್ರೆಶನ್ ಕ್ರಿಯೇಟ್ ಆಗಿದೆ ಎಂದರು. ಮಾಧ್ಯಮಗಳೂ ಇದರಲ್ಲಿ ಇಂಪ್ರೆಶನ್ ಕ್ರಿಯೇಟ್ ಮಾಡ್ತಿವೆ ಎಂದರು.

ಶಿಕ್ಷಣ ಖಾತೆ ಬಗ್ಗೆ ಯಾರೂ ಕೇಳಲ್ಲ. ಇದರಲ್ಲಿ ಕಾಂಪ್ಲಿಕೇಶನ್ಸ್ ಇವೆ, ತೊಂದರೆಗಳಿವೆ ಕೋಟ್ಯಂತರ ಜನರ ಇನ್ವಾಲ್ಮೆಂಟ್ ಇದೆ. ನಮಗ್ಯಾಕೆ ಅಂತಾರೆ. ಖಾತೆ ಮುಖ್ಯವಲ್ಲ, ಯಾವದನ್ನು ಹೇಗೆ ನೋಡುತ್ತೇವೆಯೋ ಅನ್ನೋದು ಬಹಳ ಮುಖ್ಯ. ಕೆಲಸ ಮಾಡೋದಕ್ಕೆ ಎಲ್ಲ ಖಾತೆ ಇದೆ. ಸಮಾಜದ ವ್ಯವಸ್ಥೆ ಸರಿಮಾಡೋದು ನಮ್ಮ ಕರ್ತವ್ಯ ಎಂದ ಅವರು, ಅಂತಹ ಅಪಸ್ವರಗಳು ಬಿಜೆಪಿ ಸಿದ್ಧಾಂತಕ್ಕೆ ಮಜುಗರ ತರುತ್ತವೆಯೇ ಎಂದಾಗ, ಮೊದಮೊದಲು ಇದು ಸಹಜ. ಆಮೇಲೆ ಸರಿಯಾಗ್ತದೆ ಎಂದರು. ಹಳಬರು- ಹೊಸಬರು, ವಲಸಿಗರು ಅನ್ನೋದು ಇಲ್ಲಿ ವಿಚಾರವೇ ಇಲ್ಲ ಎಂದರು. 
 

click me!