ಸಿದ್ದರಾಮಯ್ಯ ನಾಲಿಗೆ ಮೇಲೆ ಬಿಗಿ ಹಿಡಿದು ಮಾತನಾಡ್ಬೇಕು: ಸಚಿವ ಶ್ರೀರಾಮುಲು

By Suvarna NewsFirst Published Jan 16, 2021, 2:15 PM IST
Highlights

ಯತ್ನಾಳ್ ಹೇಳಿಕೆ ವಿಚಾರವಾಗಿ ಕನ್ಕ್ಲೂಷನ್‌ಗೆ ಬರುತ್ತೇವೆ| ಆಧಾರ ರಹಿತ ಹೇಳಿಕೆಗಳಿಗೆ ಸಮಜಾಯಿಸಿ ಕೊಡುವ ಅಗತ್ಯವಿಲ್ಲ|  ಯತ್ನಾಳ್ ಬಗ್ಗೆ ನಾನು ಮಾತನಾಡಲು ಹೋಗಲ್ಲ| ಬಿಎಸ್‌ವೈ ದೊಡ್ಡ ಮನುಷ್ಯ ಅವರ ವಿರುದ್ಧ ಹೇಳಿಕೆ ಕೊಡುವಾಗ ಯೋಚಿಸಿ ಕೊಡಬೇಕು| ಯತ್ನಾಳ್ ವಿರುದ್ಧ ಈಗಾಗಲೇ ನಮ್ಮ ರಾಜ್ಯಾಧ್ಯಕ್ಷರು ಒಂದು ನಿರ್ಧಾರ ಕೈಗೊಂಡಿದ್ದಾರೆ: ರಾಮುಲು| 

ಚಿತ್ರದುರ್ಗ(ಜ.16):  ಸಿದ್ದರಾಮಯ್ಯ ಮೇಷ್ಟ್ರು ಆಗೋದಕ್ಕೆ ಹೊರಟಿದ್ದಾರೆ. ಅನೈತಿಕ ಸರ್ಕಾರ ಎಂಬುದಕ್ಕೆ ಅವರಿಗೆ ಯಾವುದೇ ಕ್ವಾಲಿಫಿಕೇಷನ್ ಇಲ್ಲ. ಹೆಚ್.ಡಿ. ದೇವೇಗೌಡರನ್ನ ಸೋಲಿಸಿದ್ದ ಈ ಮನುಷ್ಯ ನೈತಿಕತೆ ಬಗ್ಗೆ ಮಾತನಾಡುತ್ತಿದ್ದಾರೆ. ಹೆಚ್‌ಡಿಡಿ ಬೆನ್ನಿಗೆ ಚೂರಿದ ಹಾಕಿದ ಮನುಷ್ಯ ಅನೈತಿಕತೆ ಬಗ್ಗೆ ಮಾತಾಡ್ತಿದ್ದಾರೆ. ಅಧಿಕಾರ ಕಳೆದುಕೊಂಡು ಮತಿಭ್ರಮಣೆಯಿಂದ ಈ ರೀತಿ ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಬಿ. ಶ್ರೀರಾಮುಲು ಟಾಂಗ್ ಕೊಟ್ಟಿದ್ದಾರೆ. 

ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲೂ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಆಗ್ತಿಲ್ಲ. ಪುಕ್ಕಟೆ ಪಬ್ಲಿಸಿಟಿ ಸಲುವಾಗಿ ಈ ರೀತಿಯಾದ ಹೇಳಿಕೆಗಳನ್ನ ಕೊಡ್ತಿದ್ದಾರೆ. ಸಿಎಂ ಆಗಿದ್ದಂತವರು ನಾಲಿಗೆ ಮೇಲೆ ಬಿಗಿ ಹಿಡಿದು ಮಾತನಾಡಿದ್ರೆ ಚೆನ್ನಾಗಿರುತ್ತೆ ಎಂದು ಹೇಳಿದ್ದಾರೆ.

ಕೋವಿಡ್ ಲಸಿಕೆ ಪಡೆಯಲು ಸ್ಟಾಫ್ ನರ್ಸ್‌ ಹಿಂದೇಟು

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಬಂದಿದ್ದಾರೆ. ಯತ್ನಾಳ್ ಹೇಳಿಕೆ ವಿಚಾರವಾಗಿ ಕನ್ಕ್ಲೂಷನ್‌ಗೆ ಬರುತ್ತೇವೆ. ಆಧಾರ ರಹಿತ ಹೇಳಿಕೆಗಳಿಗೆ ಸಮಜಾಯಿಸಿ ಕೊಡುವ ಅಗತ್ಯವಿಲ್ಲ. ಯತ್ನಾಳ್ ಅವರ ಬಗ್ಗೆ ನಾನು ಮಾತನಾಡಲು ಹೋಗಲ್ಲ. ಬಿಎಸ್‌ವೈ ಅವರು ದೊಡ್ಡ ಮನುಷ್ಯ ಅವರ ವಿರುದ್ಧ ಹೇಳಿಕೆ ಕೊಡುವಾಗ ಯೋಚಿಸಿ ಕೊಡಬೇಕು. ಯತ್ನಾಳ್ ವಿರುದ್ಧ ಈಗಾಗಲೇ ನಮ್ಮ ರಾಜ್ಯಾಧ್ಯಕ್ಷರು ಒಂದು ನಿರ್ಧಾರ ಕೈಗೊಂಡಿದ್ದಾರೆ. ಇವತ್ತು ನಾಳೆ ಅಮಿತ್‌ ಶಾ ಅವರು ಒಂದು ನಿರ್ಧಾರವನ್ನ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ. 
 

click me!