ಬಿ. ಶ್ರೀರಾಮುಲು ಹಿರಿಯ ಪುತ್ರಿ ರಕ್ಷಿತಾ ಅವರ ವಿವಾಹ ಮೆರವಣಿಗೆ| ಬಳ್ಳಾರಿ ನಗರದಲ್ಲಿ ನಡೆದ ಮೆರವಣಿಗೆ| ಸಾರೋಟದಲ್ಲಿ ಕುಳಿತು ಮೆರವಣಿಗೆಯಲ್ಲಿ ಸಾಗಿದ ಶ್ರೀರಾಮುಲು ದಂಪತಿ, ಪುತ್ರ, ಪುತ್ರಿಯರು|
ಬಳ್ಳಾರಿ(ಮಾ.06): ಆರೋಗ್ಯ ಸಚಿವ ಬಿ. ಶ್ರೀರಾಮುಲು ಹಿರಿಯ ಪುತ್ರಿ ರಕ್ಷಿತಾ ಅವರ ವಿವಾಹ ಮೆರವಣಿಗೆ ನಗರದಲ್ಲಿ ಗುರುವಾರ ರಾತ್ರಿ ಅದ್ದೂರಿಯಾಗಿ ಜರುಗಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿವಾಹದ ಬಳಿಕ ವಿಮಾನದ ಮೂಲಕ ಜಿಂದಾಲ್‌ಗೆ ಬಂದಿಳಿದ ಶ್ರೀರಾಮುಲು ಪುತ್ರಿ ಹಾಗೂ ಕುಟುಂಬ ಸದಸ್ಯರು ನೇರವಾಗಿ ನಗರದ ಶ್ರೀಕುಮಾರಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ, ಪೂಜೆ ಸಲ್ಲಿಸಿದರು. ಶ್ರೀರಾಮುಲು ಕುಟುಂಬ ಸದಸ್ಯರು ಅವರು ಅಳಿಯ ಮನೆಯ ಬೀಗರಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬಳಿಕ ಸಾರೋಟದಲ್ಲಿ ಮೆರವಣಿಗೆ ಶುರುವಾಯಿತು. ಕುಮಾರಸ್ವಾಮಿ ದೇವಸ್ಥಾನದ ಮೂಲಕ ವಾಲ್ಮೀಕಿ ವೃತ್ತದಿಂದ ಹಾಯ್ದು ಸಚಿವ ಬಿ. ಶ್ರೀರಾಮುಲು ನಿವಾಸ ಸೇರಿತು. ಶ್ರೀರಾಮುಲು ದಂಪತಿ, ಪುತ್ರ, ಪುತ್ರಿಯರು ಸಾರೋಟದಲ್ಲಿ ಕುಳಿತು ಮೆರವಣಿಗೆಯಲ್ಲಿ ಸಾಗಿದರು. ವಿವಿಧ ಕಲಾ ತಂಡಗಳು, ಡೊಳ್ಳು, ಕಂಚಿಮೇಳ ಸೇರಿದಂತೆ ಹತ್ತಾರು ಬಗೆಯ ಮಂಗಳವಾದ್ಯಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಸಾವಿರಾರು ಜನರು ಮೆರವಣಿಗೆ ವೀಕ್ಷಿಸಲು ರಸ್ತೆ ಆಸುಪಾಸು ನಿಂತಿದ್ದರು. ಮೆರವಣಿಗೆ ಸರಿಯಾಗಿ 8 ಗಂಟೆಗೆ ಶುರುವಾಗಿ ಸರೀ ರಾತ್ರಿಯವರೆಗೆ ನಡೆಯಿತು. ಮೆರವಣಿಗೆ ಹಿನ್ನೆಲೆಯಲ್ಲಿ ಮನೆಗೆ ಬರುವ ಹಿಂಬಾಲಕರು, ಬೆಂಬಲಿಗರು ಹಾಗೂ ಸ್ನೇಹಿತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.