ಮೊಮ್ಮಗನಿಗೆ ಸರ್ಕಾರಿ ಆಸ್ಪತ್ರೇಲಿ ಚಿಕಿತ್ಸೆ ಕೊಡಿಸಿದ ಸಚಿವ ಆರಗ

By Kannadaprabha News  |  First Published Sep 20, 2021, 7:16 AM IST
  • ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅನಾರೋಗ್ಯಕ್ಕೊಳಗಾದ ತಮ್ಮ ಮೊಮ್ಮಗನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ 
  •  ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಮೂಲಕ ಸರಳತೆ 

ಶಿವ​ಮೊಗ್ಗ (ಸೆ.20): ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅನಾರೋಗ್ಯಕ್ಕೊಳಗಾದ ತಮ್ಮ ಮೊಮ್ಮಗನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಮೂಲಕ ಸರಳತೆ ಮೆರೆದಿದ್ದಾರೆ.

ಒಂದು ವರ್ಷದ ಮೊಮ್ಮಗನಿಗೆ ಸಣ್ಣ ಪ್ರಮಾಣದ ಆರೋಗ್ಯ ವ್ಯತ್ಯಾಸವಾಗಿತ್ತು. ಹೀಗಾಗಿ ತೀರ್ಥಹಳ್ಳಿ ಸರ್ಕಾರಿ ಜೆ.ಸಿ. ಆಸ್ಪತ್ರೆಯಲ್ಲಿ ಆತನನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ.

Tap to resize

Latest Videos

‘ಕನ್ನಡಪ್ರಭ’ ವರದಿ ಪರಿಷತ್‌ನಲ್ಲಿ ಪ್ರತಿಧ್ವನಿ: 'ಅಕ್ರಮ ಬಾಂಗ್ಲನ್ನರ ಪತ್ತೆಗೆ ವಿಶೇಷ ಕಾರ್ಯಪಡೆ, ಜ್ಞಾನೇಂದ್ರ

ತೀರ್ಥಹಳ್ಳಿಯಿಂದ ಬೆಂಗಳೂರಿಗೆ ತೆರಳುವಾಗ ತೀರ್ಥಹಳ್ಳಿ ಜೆ.ಸಿ. ಆಸ್ಪತ್ರೆಗೆ ಭಾನುವಾರ ಭೇಟಿ ನೀಡಿ, ಮೊಮ್ಮಗನ ಆರೋಗ್ಯ ಗಮನಿಸಿದ ಸಚಿವರು ನಂತರ ಕೊರೋನಾ ವಾರ್ಡಿಗೆ ಭೇಟಿ ನೀಡಿ ಹಿತೈಷಿಯೊಬ್ಬರ ಆರೋಗ್ಯ ವಿಚಾರಿಸಿದರು.

ಸಣ್ಣಪುಟ್ಟರಾಜಕಾರಣಿಗಳೂ ಕೂಡ ತಮ್ಮ ಹೆಸರು ಬಳಸಿಕೊಂಡು ಪ್ರತಿಷ್ಠಿತ ಆಸ್ಪತ್ರೆಗಳತ್ತ ಮುಖಮಾಡುವ ಕಾಲದಲ್ಲಿ ಗೃಹ ಸಚಿವರ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

click me!