* ತಂದೆಯ ಭರವಸೆಯಂತೆ ಚೆಕ್ ಹಸ್ತಾಂತರಿಸಿದ ಸಿದ್ಧಾರ್ಥ ಸಿಂಗ್
* 5 ಸಾವಿರ ವಿದ್ಯಾರ್ಥಿಗಳ ವಸತಿ ಮತ್ತು ಪ್ರಸಾದ ನಿಲಯ ಕಟ್ಟಡ ನಿರ್ಮಾಣ
* ತಂದೆಯವರು ನೀಡಿದ ಭರವಸೆಯಂತೆ ಮಹಾನ್ ಕಾರ್ಯಕ್ಕೆ ಚೆಕ್ ನೀಡಲಾಗಿದೆ: ಸಿದ್ಧಾರ್ಥ ಸಿಂಗ್
ಕೊಪ್ಪಳ(ಜು.14): ಗವಿಸಿದ್ಧೇಶ್ವರ ಸ್ವಾಮಿಗಳು ಕೈಗೊಂಡಿರುವ 5 ಸಾವಿರ ವಿದ್ಯಾರ್ಥಿಗಳ ವಸತಿ ಮತ್ತು ಪ್ರಸಾದ ನಿಲಯ ಕಟ್ಟಡ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಮಾಡಿದ ವಾಗ್ದಾನದಂತೆ ಅವರ ಪುತ್ರ ಸಿದ್ಧಾರ್ಥ ಸಿಂಗ್ ಬುಧವಾರ ಗುರುಪೌರ್ಣಿಮೆಯಂದು 1.08 ಕೋಟಿ ಚೆಕ್ ನೀಡಿದರು. ಗವಿಸಿದ್ಧೇಶ್ವರ ಸ್ವಾಮಿಗಳ ಗದ್ದುಗೆ ದರ್ಶನ ಪಡೆದ ಸಿದ್ದಾರ್ಥ ಸಿಂಗ್, ಬಳಿಕ ಶ್ರೀಗಳೊಂದಿಗೆ ಕುಶಲೋಪಹರಿ ಮಾತುಕತೆ ನಡೆಸಿದ ಚೆಕ್ ನೀಡಿದರು.
ಬಳಿಕ ಮಾತನಾಡಿದ ಅವರು, ತಂದೆಯವರು ನೀಡಿದ ಭರವಸೆಯಂತೆ ಮಹಾನ್ ಕಾರ್ಯಕ್ಕೆ ಚೆಕ್ ನೀಡಲಾಗಿದೆ. ಗುರುಪೌರ್ಣಿಮೆ ಸುಂದರ್ಭದಲ್ಲಿಯೇ ನೀಡಲಾಗಿದೆ. ನಮ್ಮ ತಂದೆಯವರೇ ಬರಬೇಕಾಗಿತ್ತು. ಅವರು ಬರಲು ಆಗಿಲ್ಲ ಎಂದರು.
ಗವಿಮಠಕ್ಕೆ ಹರಿದು ಬರುತ್ತಿರುವ ನೆರವು: 10 ಸಾವಿರ ವಿದ್ಯಾರ್ಥಿಗಳ ಪ್ರಸಾದ, ವಸತಿನಿಲಯ?
ವಿಧಾನಸಭಾ ಚುನಾವಣೆಗೆ ಹೊಸಪೇಟೆ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಪ್ರಶ್ನೆಗೆ ಅವರು, ನಿರಾಕರಣೆ ಮಾಡಲಿಲ್ಲ ಮತ್ತು ಸ್ಪರ್ಧೆ ಮಾಡುವ ಕುರಿತು ಖಚಿತಪಡಿಸಲಿಲ್ಲ. ಈ ಬಗ್ಗೆ ನನಗೆ ಗೊತ್ತಿಲ್ಲ ಎಂದಷ್ಟೆ ಹೇಳಿದರು.
ಸಹೋದರಿ ಯಶಸ್ವಿನಿ ಸಿಂಗ್, ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ. ಚಂದ್ರಶೇಖರ, ಬಿಜೆಪಿ ಕೊಪ್ಪಳ ಉಸ್ತುವಾರಿ ಚಂದ್ರಶೇಖರ ಹಲಿಗೇರಿ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್, ವಿ.ಎಂ. ಭೂಸನೂರಮಠ, ಆರ್.ಬಿ. ಪಾನಘಂಟಿ, ಸುನೀಲ ಹೆಸರೂರು, ಗವಿಸಿದ್ದಪ್ಪ ಕರಡಿ ಮತ್ತಿತರರು ಇದ್ದರು.