ಇ-ಖಾತೆ ಮಾಡಿಸಲು ಮಧ್ಯವರ್ತಿಗಳ ಹಾವಳಿ: ಎಚ್.ಡಿ.ರೇವಣ್ಣ ಕಿಡಿ

ಪುರಸಭೆ ವ್ಯಾಪ್ತಿಯಲ್ಲಿ 18 ವಾರ್ಡ್‌ಗಳನ್ನು ಸ್ಲಂ ಬೋರ್ಡ್ ವ್ಯಾಪ್ತಿಗೆ ಒಳಪಡಿಸಿ, ಬಡವರ ಏಳಿಗೆಗೆ ಶ್ರಮಿಸಲಾಗಿದೆ. ಇತ್ತೀಚಿಗೆ ಈ ಖಾತೆ ಮಾಡಿಸಲು ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ದೂರುಗಳು ಬರುತ್ತಿದ್ದು, ಇದೇ ರೀತಿಯಾದರೇ ಲೋಕಾಯುಕ್ತಕ್ಕೆ ದೂರು ನೀಡಿ, ಅಗತ್ಯ ಕ್ರಮಕ್ಕೆ ಸೂಚಿಸುತ್ತೇವೆ. 


ಹೊಳೆನರಸೀಪುರ (ಏ.02): ಪುರಸಭೆ ವ್ಯಾಪ್ತಿಯಲ್ಲಿ 18 ವಾರ್ಡ್‌ಗಳನ್ನು ಸ್ಲಂ ಬೋರ್ಡ್ ವ್ಯಾಪ್ತಿಗೆ ಒಳಪಡಿಸಿ, ಬಡವರ ಏಳಿಗೆಗೆ ಶ್ರಮಿಸಲಾಗಿದೆ. ಇತ್ತೀಚಿಗೆ ಈ ಖಾತೆ ಮಾಡಿಸಲು ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ದೂರುಗಳು ಬರುತ್ತಿದ್ದು, ಇದೇ ರೀತಿಯಾದರೇ ಲೋಕಾಯುಕ್ತಕ್ಕೆ ದೂರು ನೀಡಿ, ಅಗತ್ಯ ಕ್ರಮಕ್ಕೆ ಸೂಚಿಸುತ್ತೇವೆ. ಆದ್ದರಿಂದ ಅಧಿಕಾರಿಗಳು ಎಚ್ಚರದಿಂದ ಇರಬೇಕು ಎಂದು ಶಾಸಕ ಎಚ್.ಡಿ. ರೇವಣ್ಣ ಸಲಹೆ ನೀಡಿದರು. ಪಟ್ಟಣದ ಪುರಸಭೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದರು. 

ಪುರಸಭೆ ವ್ಯಾಪ್ತಿಯಲ್ಲಿ ಪುರಸಭೆ ವತಿಯಿಂದ ನೀಡಿರುವ ಆಶ್ರಯ ಮನೆಗಳನ್ನು ಬಾಡಿಗೆ ನೀಡಿ ತೆರಳಿದ್ದಾರೆ ಎಂಬ ಮಾಹಿತಿ ಇದೆ.17ನೇ ವಾರ್ಡಿನಲ್ಲಿ 2 ಸಾವಿರ ಮನೆ ಕಟ್ಟಿಸಿ ಕೊಟ್ಟಿದ್ದೇವೆ ಮತ್ತು ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ ಹಾಗೂ ಕೆಲವರು ಬಾಡಿಗೆ ನೀಡಿ ತೆರಳಿದ್ದಾರೆ ಎಂಬ ಮಾಹಿತಿ ಇದೆ. ಆದ್ದರಿಂದ ಪ್ರತಿ ಮನೆಗೆ ತೆರಳಿ ಪರಿಶೀಲಿಸಿ, ಬಾಡಿಗೆ ನೀಡಿದ್ದರೇ ವಶಕ್ಕೆ ಪಡೆದು ಬಡವರಿಗೆ ನೀಡಿ ಎಂದು ಸಲಹೆ ನೀಡಿದರು. 

Latest Videos

ಪುರಸಭೆಯ 23 ವಾರ್ಡಿನಲ್ಲಿ ಇ ಸ್ವತ್ತು ಮತ್ತು ಖಾತೆ ಮಾಡಿಸಿಕೊಳ್ಳಲು ಪ್ರತಿಯೊಬ್ಬರು ಅರ್ಜಿ ನೀಡಿ, ಎಲ್ಲರಿಗೂ ಅರ್ಜಿ ಸಂಬಂಧಿಸಿದಂತೆ ಸ್ಪಂದಿಸಲಾಗುತ್ತೆ ಮತ್ತು ಸ್ವತ್ತಿಗೆ ಸಂಬಂಧಿಸಿದಂತೆ ದಾವೆ ಇದ್ದರೆ ಪುರಸಭೆ ಪ್ರವೇಶ ಮಾಡುವುದಿಲ್ಲವೆಂದರು. ಪುರಸಭೆ ವ್ಯಾಪ್ತಿಯಲ್ಲಿ ಗುತ್ತಿಗೆದಾರರು ನಡೆಸುವ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು, ಜನರಿಂದ ಯಾವುದೇ ದೂರು ಬರಬಾರದು, ಯಾವುದೇ ದೂರು ಬಾರದಂತೆ ಎಚ್ಚರ ವಹಿಸಬೇಕೆಂದು ಪುರಸಭೆ ಎಂಜಿನಿಯರ್‌ಗೆ ಸಲಹೆ ನೀಡಿದರು. 

ಪರ್ಯಾಯ ರಾಜಕೀಯ ವ್ಯವಸ್ಥೆ ರೂಪುಗೊಳ್ಳುವುದು ಅನಿವಾರ್ಯ: ನಟ ಚೇತನ್ ಅಹಿಂಸಾ

ಪಟ್ಟಣದ ಪುರಸಭೆ ವ್ಯಾಪ್ತಿಯ ಕವರ್‌ ಡೆಕ್ ಪಕ್ಕದಲ್ಲಿರುವ ಪತಂಜಲಿ ಯೋಗಭವನದ ಪಕ್ಕದ ಖಾಲಿ ನಿವೇಶನವನ್ನು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೀಡಲು ಪುರಸಭೆ ಅನುಮೋದನೆ ನೀಡಿದ್ದರೂ ಏಕೆ ನೀಡಿಲ್ಲ, ಪುರಸಭೆಗೆ ನೀಡಲು ಅವಕಾಶವಿದೆ, ಅವರಿಗೆ ನಿವೇಶನ ಮಂಜೂರು ಮಾಡಿಕೊಡಿ ಎಂದು ಸೂಚಿಸಿದರು.ಪುರಸಭಾಧ್ಯಕ್ಷ ಎಚ್.ಕೆ.ಪ್ರಸನ್ನ, ಮುಖ್ಯಾಧಿಕಾರಿ ಶಿವಶಂಕರ್, ಕಂದಾಯ ವಿಭಾಗದ ಅಧಿಕಾರಿ ನಾಗೇಂದ್ರ, ಇಂಜಿನಿಯರ್ ಶಿವಕುಮಾರ್, ಪುರಸಭೆ ಸದಸ್ಯರು ಇದ್ದರು. ಪುರಸಭೆ ಅನುದಾನದಲ್ಲಿ 23ನೇ ವಾರ್ಡಿನ ಅಂಗವಿಕಲ ವ್ಯಕ್ತಿಗೆ ತ್ರಿಚಕ್ರದ ಸ್ಕೂಟರ್ ವಿತರಿಸಲಾಯಿತು.

click me!