41 ಕಾರ್ಮಿಕರಿಗೆ ಕೊರೋನಾ: ಮೈಕ್ರೋಟೆಕ್‌ ಗ್ರೈಂಡಿಂಗ್‌ ಕಂಪನಿ ಸೀಲ್‌ಡೌನ್‌

By Kannadaprabha News  |  First Published Apr 13, 2021, 3:07 PM IST

ಮೈಕ್ರೋಟೆಕ್‌ ಗ್ರೈಂಡಿಂಗ್‌ ಕಂಪನಿಯಲ್ಲಿ ಸೋಮವಾರ ಒಂದೇ ದಿನ 26 ಕಾರ್ಮಿಕರಿಗೆ ಕೊರೋನಾ| ಕೆಲವರನ್ನು ಆಸ್ಪತ್ರೆಗೆ ದಾಖಲಿಸಿದ್ದರೆ, ಇನ್ನೂ ಕೆಲವರನ್ನು ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ| ಕಂಪನಿಯಲ್ಲಿ ಕೆಲಸ ಮಾಡುತ್ತಿರುವ 300ಕ್ಕೂ ಅಧಿಕ ಕಾರ್ಮಿಕರು| 


ದಾಬಸ್‌ಪೇಟೆ(ಏ.13): ಇಲ್ಲಿನ ಕೈಗಾರಿಕಾ ಪ್ರದೇಶದ ಒಂದೇ ಕಂಪನಿಯಲ್ಲಿ 41 ಕಾರ್ಮಿಕರಿಗೆ ಕೊರೋನಾ ಸೋಂಕು ಹಬ್ಬಿದ್ದು, ಕಂಪನಿಯನ್ನು ಸೀಲ್‌ಡೌನ್‌ ಮಾಡಲಾಗಿದೆ. 

ಮೈಕ್ರೋಟೆಕ್‌ ಗ್ರೈಂಡಿಂಗ್‌ ಎಂಬ ಕಂಪನಿಯಲ್ಲಿ ಸೋಮವಾರ ಒಂದೇ ದಿನ 26 ಕಾರ್ಮಿಕರಿಗೆ ಕೊರೋನಾ ಪಾಸಿಟಿವ್‌ ಕಂಡುಬಂದಿದ್ದು, ಕೆಲವರನ್ನು ಆಸ್ಪತ್ರೆಗೆ ದಾಖಲಿಸಿದ್ದರೆ, ಇನ್ನೂ ಕೆಲವರನ್ನು ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ. 

Latest Videos

undefined

ಶಾಕಿಂಗ್: ಲಾಕ್ ಡೌನ್ ಸುಳಿವು ನೀಡಿದ ಸಚಿವ ಸುಧಾಕರ್!

ಕಳೆದ ಕೆಲ ದಿನಗಳಿಂದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 15 ಕಾರ್ಮಿಕರಿಗೆ ಸೋಂಕು ಹಬ್ಬಿದ್ದರೂ, ಆರೋಗ್ಯ ಇಲಾಖೆ ಮಾಹಿತಿ ನೀಡದೆ ಕಂಪನಿ ನಡೆಸಲಾಗುತ್ತಿತ್ತು. ಇದೇ ಕಾರಣದಿಂದ ವ್ಯಾಪಕವಾಗಿ ಸೋಂಕು ಆವರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಂಪನಿಯಲ್ಲಿ 300ಕ್ಕೂ ಅಧಿಕ ಕಾರ್ಮಿಕರಿದ್ದಾರೆ.

ದಾಬಸ್‌ಪೇಟೆ ಕೈಗಾರಿಕಾ ಪ್ರದೇಶದಲ್ಲಿ 200ಕ್ಕೂ ಹೆಚ್ಚು ಕಂಪನಿಗಳಿದ್ದು, ಲಕ್ಷಕ್ಕೂ ಹೆಚ್ಚು ಮಂದಿ ಕಾರ್ಮಿಕರು ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ಈ ಪ್ರಕರಣದಿಂದ ಭೀತಿ ಆವರಿಸಿದೆ.
 

click me!