ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಇತ್ತೀಚೆಗೆ ಊರು ತೊರೆದ ಕುಟುಂಬದ ಮನೆಯ ಗೋಡೆ ಮೇಲೆ ಈ ಸ್ವತ್ತು ಫೈಪ್ ಸ್ಟಾರ್‌ಗೆ ಅಡಮಾನವಾಗಿದೆ ಎಂದು ಪೇಂಟಿಂದ ದೊಡ್ಡದಾಗಿ ಬರೆದ ಘಟನೆ ಕೊರಟಗೆರೆ ತಾಲೂಕಿನ ಕುರಂಕೋಟೆ ಗ್ರಾಮದಲ್ಲಿ ನಡೆದಿದೆ.
ಕೊರಟಗೆರೆ(ಜ.30): ರಾಜ್ಯದ ಮುಖ್ಯಮಂತ್ರಿಗಳ ಮಾತಿಗೆ ಕಿಮ್ಮತ್ತು ಕೊಡದ ಫೈನಾನ್ಸ್ ಕಂಪನಿಗಳು. ಗೃಹ ಸಚಿವರ ಕ್ಷೇತ್ರದಲ್ಲಿ ಒಂದೇ ದಿನ ಎರಡು ಕಡೆ ಫೈನಾನ್ಸ್ ಕಿರುಕುಳಕ್ಕೆ ಹೆದರಿ ಒಂದು ಕುಟುಂಬ ಊರು ಬಿಟ್ಟು ಹೋದರೆ. ಇನ್ನೊಂದು ಗ್ರಾಮದಲ್ಲಿ ಫೈನಾನ್ಸ್ ಸಾಲ ತಿರಿಸಲಾಗದೆ 30 ಮಾತ್ರೆ ತಗೆದುಕೊಂಡು ಆತ್ಮಹತ್ಯೆಗೆ ಯತ್ನವಾಗಿರುವ ಘಟನೆ ಕೊರಟಗೆರೆ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಕೊರಟಗೆರೆ ತಾಲೂಕಿನ ಸಿ.ಎನ್.ದುರ್ಗಾ ಹೋಬಳಿಯ ಕುರಂಕೋಟೆ ಗ್ರಾಮದ ವಿನೂತ, ಮಾರುತಿ ದಂಪತಿ ಫೈವ್ ಸ್ಟಾರ್‌ಫೈನಾನ್ಸ್ ಕಂಪನಿಯಲ್ಲಿ 2 ಲಕ್ಷ 50 ಸಾವಿರ ಹಣವನ್ನ ಸಾಲ ಪಡೆದುಕೊಂಡಿದ್ದಾರೆ. ಸಾಲ ಪಡೆದ ನಂತರ 4 ಲಕ್ಷದ 70 ಸಾವಿರ ಹಣವನ್ನ ಪಾವತಿಸಿದರೂ ಇನ್ನೂ ಸಾಲ ಬಾಕಿ ಇದೆ ಎಂದು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮೈಕ್ರೋ ಫೈನಾನ್ಸ್ ವಿರುದ್ಧದ ಸುಗ್ರೀವಾಜ್ಞೆ ರೆಡಿ, ಕಿರುಕುಳ ಕೊಟ್ಟರೆ ಕಂಪನಿ ಮುಖ್ಯಸ್ಥರಿಗೆ ಜೈಲು, ಪರಂ
ಉಳಿಕೆ ಹಣ ನೀಡದಿದ್ದರೆ ಮನೆಯವರ ಮಾನ ಹರಾಜು ಹಾಕುತ್ತೇವೆ ಎಂದು ಬೆದರಿಕೆ. ಮನೆಯ ಗೋಡೆ ಮೇಲೆ ಫೈವ್ ಸ್ಟಾರ್‌ಎಂದು ಬರೆದು ಕಿರುಕುಳಕ್ಕೆ ಹೆದರಿ ದಂಪತಿ ಹಾಗೂ ತಮ್ಮ ವಿಕಲಚೇತನ ಮಕ್ಕಳನ್ನು ಕರೆದುಕೊಂಡು ಊರು ಬಿಟ್ಟು ಹೋಗಿದ್ದಾರೆ ಎಂದು ತಿಳಿದುಬಂದಿದ್ದು, ಫೈನಾನ್ಸ್ ಸಿಬ್ಬಂದಿ ಮನೆ ಬಂದು ಅವಾಚ್ಯ ಶಬ್ದಗಳೊಂದಿಗೆ ಬೆದರಿಕೆ ಹಾಕಿ, ಗೋಡೆ ಮೇಲೆ ಕಂಪನಿಯ ಹೆಸರು ಬರೆದಿರುವುದು ಸಾರ್ವಜನಿಕರು ಫೈನಾನ್ಸ್ ಕಂಪನಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿಯ ಅಳಾಲಸಂದ್ರ ಸಮೀಪ ಇರುವ ಹನುಮಂತಪುರ ಗ್ರಾಮದ ಮಂಗಳಮ್ಮ (45) ಎನ್ನುವ ಮಹಿಳೆ ಪಟ್ಟಣ ಗ್ರಾಮೀಣ ಕೂಟ ಫೈನಾನ್ಸ್ ಕಂಪನಿಯಿಂದ2 ಲಕ್ಷ, ಎಲ್‌ಎನ್‌ಟಿ ಯಲ್ಲಿ 70 ಸಾವಿರ, ಆಶೀರ್ವಾದ ಕಂಪನಿಯಲ್ಲಿ 80ಸಾವಿರ ಸಾಲ ಪಡೆದುಕೊಂಡಿದ್ದಾರೆ. ಗ್ರಾಮೀಣ ಕೂಟದ ಫೈನಾನ್ಸ್ ಕಂಪನಿಯ ಸಿಬ್ಬಂದಿಯವರು ಹಣ ಕಟ್ಟುವಂತೆ ಕಿರುಕುಳ ನೀಡಿದ ಹಿನ್ನೆಲೆ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಂತರ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ ಎನ್ನಲಾಗಿದೆ.
ಗ್ರಾಮೀಣ ಕೂಟದ ಫೈನಾನ್ಸ್ ಕಂಪನಿಯಿಂದ ಮಹಿಳೆ 2 ಲಕ್ಷ ಸಾಲ ಪಡೆದ ಹಣದಲ್ಲಿ 40 ಕಂತುಗಳನ್ನು ಮಹಿಳೆ ಕಟ್ಟಿದ್ದಾರೆ. ಇನ್ನೂ 42 ಕಂತು ಬಾಕಿ ಇದೆ ಎಂದು ಹದಿನೈದು ದಿನಕ್ಕೊಮ್ಮೆ 1679 ರು. ಹಣವನ್ನ ಕಟ್ಟುತ್ತಿದ್ದರು ಎನ್ನಲಾಗಿದೆ. ಮಹಿಳಾ ಸಂಘದಲ್ಲಿ ಒಟ್ಟು ಮೂರು ಮಹಿಳೆಯ ಸಾಲದ ಹಣವನ್ನ ಪಡೆದು ಕಟ್ಟುತ್ತಿದ್ದರು ಎಂದು ತಿಳಿದುಬಂದಿದೆ.
ಫೈನಾನ್ಸ್ ಕಂಪನಿಯವರು ಹಣವನ್ನ ಕಟ್ಟಲೇಬೇಕು ಎಂದು ಒತ್ತಡ ಹಾಕಿದ್ದು, ಬುಧವಾರದ ಕಂತು ಕಟ್ಟಬೇಕಾಗಿತ್ತು. ಫೈನಾನ್ಸ್ ಕಂಪನಿಯವರು ಮನೆಯ ಮುಂದೆ ಗಲಾಟೆ ಮಾಡುತ್ತಾರೆ ಎಂದು ಹೆದರಿ ಮಹಿಳೆ ಮನೆಯಲ್ಲಿದ್ದ 30 ಬಿಪಿ ಮಾತ್ರೆ ನುಂಗಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ಎರಡು ಪ್ರಕರಣಗಳನ್ನ ಗಂಭೀರವಾಗಿ ತೆಗೆದುಕೊಂಡು ಕೊರಟಗೆರೆ ಪೊಲೀಸ್ ಠಾಣೆ ಹಾಗೂ ಕೋಳಾಲ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನೆಡೆಸುತ್ತಿದ್ದಾರೆ ಎನ್ನಲಾಗಿದೆ.
ತಾಲೂಕಿನಲ್ಲಿ 5500 ಜನರಿಗೆ ಒಟ್ಟು 20 ಕೋಟಿ ಹಣವನ್ನು ಸಾಲವಾಗಿ ನೀಡಲಾಗಿದೆ. ಆರ್‌ಬಿಐ ಕಾನೂನಿನ ಪ್ರಕಾರ 18 ರಿಂದ 22 ರಷ್ಟು ಬಡ್ಡಿಯನ್ನ ಹಾಕಲಾಗುತ್ತದೆ. ತಕ್ಷಣಕ್ಕೆ ಸಾಲ ತೀರಿಸಲಾಗದವರು ಕಾಲವಕಾಶ ನೀಡಲಾಗುತ್ತಿದೆ. ನಮ್ಮ ಸಿಬ್ಬಂದಿವರು ಯಾರು ಕಿರುಕುಳ ನೀಡಿಲ್ಲ. ಹಾಗೇನಾದರೂ ಕಿರುಕುಳ ನೀಡಿದರೆ ಪುಸ್ತಕದ ಹಿಂಬಾಗ ನಮ್ಮ ಮೇಲಾಧಿಕಾರಿಗಳ ನಂಬರ್ ಇದೆ ಅವರಿಗೆ ತಿಳಿಸಬಹುದು ಎಂದು ಗ್ರಾಮೀಣ ಕೂಟದ ವಿಭಾಗೀಯ ವ್ಯವಸ್ಥಾಪಕ ಶಿವಲಿಂಗೇಗೌಡ ತಿಳಿಸಿದ್ದಾರೆ.
ತುಮಕೂರು ಜಿಲ್ಲಾಧಿಕಾರಿಗಳ ಆದೇಶದಂತೆ ತಾಲೂಕಿನಲ್ಲಿರುವ 18 ಫೈನಾನ್ಸ್ ಕಂಪನಿಯವರ ಜೊತೆ ಸಭೆ ಮಾಡಲಾಗಿದೆ. ಅವರು ಯಾರಿಗೆ ಸಾಲ ನೀಡಿದ್ದಾರೆ, ಅವರಿಗೆ ಯಾವುದೇ ಕಿರುಕುಳ ನೀಡದಂತೆ ತಿಳಿಸಲಾಗಿದೆ. ಅವರಿಗೆ ಸಾಲ ಮರುಪಾವತಿ ಮಾಡಲು ಕಾಲಾ ವಕಾಶ ನೀಡುವಂತೆ ಸೂಚನೆ ನೀಡಲಾಗಿದೆ. ಖಾಸಗಿ ಕಂಪನಿಯವರು ಜನರ ಮೇಲೆ ದಬ್ಬಾಳಿಕೆ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೊರಟಗೆರೆ ತಹಸೀಲ್ದಾರ್ ಕೆ.ಮಂಜುನಾಥ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿಗೆ ಬೇಸತ್ತ ಆಟೋ ಚಾಲಕನಿಂದ ಆತ್ಮಹತ್ಯೆ ಯತ್ನ!
ಮನೆ ಗೋಡೆ ಮೇಲೆ 'ಅಡಮಾನ ಆಸ್ತಿ' ಎಂದು ಬರೆದು ಮೈಕ್ರೋಫೈನಾನ್ಸ್ ವಿಕೃತಿ
ತುಮಕೂರು: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಇತ್ತೀಚೆಗೆ ಊರು ತೊರೆದ ಕುಟುಂಬದ ಮನೆಯ ಗೋಡೆ ಮೇಲೆ ಈ ಸ್ವತ್ತು ಫೈಪ್ ಸ್ಟಾರ್‌ಗೆ ಅಡಮಾನವಾಗಿದೆ ಎಂದು ಪೇಂಟಿಂದ ದೊಡ್ಡದಾಗಿ ಬರೆದ ಘಟನೆ ಕೊರಟಗೆರೆ ತಾಲೂಕಿನ ಕುರಂಕೋಟೆ ಗ್ರಾಮದಲ್ಲಿ ನಡೆದಿದೆ.
ವಿನುತಾ- ಮಾರುತಿ ದಂಪತಿ ಫೈವ್ ಸ್ಟಾರ್ ಫೈನಾನ್ಸ್‌ನಲ್ಲಿ ₹2.50 ಲಕ್ಷ ಸಾಲ ಪಡೆದಿದ್ದರು. ಈವರೆಗೆ ₹4.70 ಲಕ್ಷ ಪಾವತಿಸಿದ್ದರೂ ಇನ್ನೂ ಬಾಕಿ ಉಳಿದಿದೆ ಎಂದು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಕಿರುಕುಳ ತಾಳಲಾರದೆ ದಂಪತಿ ತಮ್ಮ ಅಂಗ ವಿಕಲ ಮಕ್ಕಳನ್ನು ಕರೆದುಕೊಂಡು ಊರು ತೊರೆದಿದ್ದಾರೆ. ಫೈನಾನ್ಸ್ ಸಿಬ್ಬಂದಿ ಮನೆ ಮುಂದೆ ಬಂದು ಅವಾಚ್ಯ ಶಬ್ದಗಳೊಂದಿಗೆ ಬೆದರಿಕೆ ಹಾಕಿರುವುದು ಆಕ್ರೋಶಕ್ಕೆ ಕಾರಣವಾಗಿದೆ.