ಕತ್ರಿಗುಪ್ಪೆಯಲ್ಲಿ ಕಂಡಕಂಡಲ್ಲಿ ಉಗಿಯುತ್ತಿದ್ದ ವ್ಯಕ್ತಿ ಅರೆಸ್ಟ್

By Suvarna News  |  First Published Apr 29, 2020, 3:24 PM IST

ಪರಿಚಿತ ವ್ಯಕ್ತಿಯ ಅನುಮಾನಾಸ್ಪದ ಓಡಾಟಕ್ಕೆ ಬೆಚ್ಚಿಬಿದ್ದ ಕತ್ರಿಗುಪ್ಪೆ ಜನ/  ಪೊಲೀಸರು ಹಾಗೂ ಅಂಬುಲೆನ್ಸ್ ಸಿಬ್ಬಂದಿಯನ್ನೇ ಥಂಡಾ ಹೊಡೆಸಿದ ಅಪರಿಚಿತ ವ್ಯಕ್ತಿ/  ಬೆಂಗಳೂರಿನ ಕತ್ರಿಗುತ್ತೆ ಬಿಗ್ ಬಜಾರ್ ಬಳಿ ಘಟನೆ/  ಕತ್ರಿಗುಪ್ಪೆಯ ಬಿಗ್ ಬಜಾರ್ ಬಳಿ ಅನುಮಾನಾಸ್ಪದ ಓಡಾಟ/  ಕೆಲ ಅಂಗಡಿಗಳಿಗೆ,ರಸ್ತೆಗಳ ಮೇಲೆ ಹಾಗೂ ಇಬ್ಬರು ಮಕ್ಕಳ ಮೇಲೆ ಉಗಿದು ಉದ್ಧಟತನ


ಬೆಂಗಳೂರು(ಏ. 29)  ಅಪರಿಚಿತ ವ್ಯಕ್ತಿಯ ಅನುಮಾನಾಸ್ಪದ ಓಡಾಟಕ್ಕೆ ಬೆಂಗಳೂರು ಕತ್ರಿಗುಪ್ಪೆ ಜನ ಬೆಚ್ಚಿ ಬಿದ್ದಿದ್ದಾರೆ.  ಪೊಲೀಸರು ಹಾಗೂ ಅಂಬುಲೆನ್ಸ್ ಸಿಬ್ಬಂದಿಯನ್ನೇ ಥಂಡಾ ಹೊಡೆಸಿದ್ದಾನೆ ಈ ಪುಣ್ಯಾತ್ಮ.

ಕತ್ರಿಗುಪ್ಪೆಯ ಬಿಗ್ ಬಜಾರ್ ಬಳಿ ಅನುಮಾನಾಸ್ಪದ ರೀತಿ ಓಡಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಹರಸಾಹಸ  ಮಾಡಿ ಬಂಧಿಸಲಾಗಿದ್ದು ವೈದ್ಯಕೀಯ ಪರೀಕ್ಷೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

Tap to resize

Latest Videos

ಲಾಕ್ ಡೌನ್ ಇದ್ದರೂ ತೆರೆದುಕೊಂಡ ಅಮಲಿನ ಲೋಕ

ಕೆಲ ಅಂಗಡಿಗಳಿಗೆ, ರಸ್ತೆಗಳ ಮೇಲೆ ಹಾಗೂ ಇಬ್ಬರು ಮಕ್ಕಳ ಮೇಲೆ ಉಗಿದು ಉದ್ಧಟತನ ತೋರಿಸಿದ್ದ ವ್ಯಕ್ತಿಯ ನಡವಳಿಕೆ ಕಂಡು ಕಂಗಾಲಾದ ಜನರು ಪೊಲೀಸರಿಗೆ ಮಾಹಿತಿ ನೀಡಿದರು.  ಪೊಲೀಸರು ಮತ್ತು ಆಂಬುಲೆನ್ಸ್ ಸಿಬ್ಬಂದಿ ಬಂದಾಗ ಅವರ ಕೈಗೂ ಸಿಗದೆ ಓಡಾಡುತ್ತಿದ್ದ.

ಆಂಬುಲೆನ್ಸ್ ಏರಲು ಕೇಳಿಕೊಂಡರು ಮಾತು ಕೇಳದೇ ಆತಂಕ ಮೂಡಿಸುವ ನಡವಳಿಕೆ ತೋರಿದ್ದ. ಅಂತಿಮವಾಗಿ ಇದೀಗ ಜನರ ಆತಂಕ ನಿವಾರಣೆಯಾಗಿದೆ.

click me!