ಸಿಎಂ ಭೇಟಿ ಮಾಡಿದ್ದು, ವಿಶ್ವನಾಥ್‌ಗೆ ಸ್ಥಾನ, ಮಾನ ಕೇಳಲು: ಕೆಸಿಎನ್

Suvarna News   | Asianet News
Published : Dec 15, 2019, 01:10 PM IST
ಸಿಎಂ ಭೇಟಿ ಮಾಡಿದ್ದು, ವಿಶ್ವನಾಥ್‌ಗೆ ಸ್ಥಾನ, ಮಾನ ಕೇಳಲು: ಕೆಸಿಎನ್

ಸಾರಾಂಶ

ಹುಣಸೂರಿನಲ್ಲಿ ಪರಾಜಿತ ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್ ಪರ ಕೆ.ಆರ್ ಪೇಟೆ ಶಾಸಕ ಕೆ. ಸಿ. ನಾರಾಯಣ ಗೌಡ ಮಾತನಾಡಿದ್ದಾರೆ. ಸಿಎಂ ಅವರನ್ನು ಭೇಟಿ ಮಾಡಿದ ನಾರಾಯಣ ಗೌಡ ತಮಗಾಗಿ ಅಲ್ಲ, ವಿಶ್ವನಾಥ್‌ಗಾಗಿ ಕೇಳಿಕೊಂಡಿದ್ದಾರೆ ಎಣದು ಅವರು ಹೇಳಿದ್ದಾರೆ.

ಮಂಡ್ಯ(ಡಿ.15): ನನಗೆ ಒಳ್ಳೆಯ ಖಾತೆ ನೀಡುತ್ತಾರೆ ಎನ್ನುವ ವಿಶ್ವಾಸ ಇದೆ. ವಿಶ್ವನಾಥ್ ಅವರಿಗೂ ಸ್ಥಾನ, ಮಾನ ನೀಡಿ ಎಂದು ಕೇಳಲು ಹೋಗಿದ್ದೆ ಎಂದು ಕೆ.ಆರ್. ಪೇಟೆ ಶಾಸಕ ಕೆ. ಸಿ. ನಾರಾಯಣ ಗೌಡ ಹೇಳಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಅವರು, ಸಿಎಂ ಅವರ ತವರೂರು ಎಂದು ನನಗೆ ಒಳ್ಳೆಯ ಖಾತೆ ನೀಡುತ್ತಾರೆ ಎನ್ನುವ ವಿಶ್ವಾಸ ಇದೆ. ನನಗೆ ಯಾವ ಖಾತೆಯನ್ನು ಕೊಟ್ಟರು ಸಹ ನಾನು ನಿರ್ವಹಿಸುತ್ತೇನೆ. ನಾನೊಬ್ಬನೆ ಖಾತೆ ನಿರ್ವಹಿಸಲ್ಲ, ಪಕ್ಷದ ಮುಖಂಡರು ಎಲ್ಲರೂ ಸೇರಿ ನಿರ್ವಹಿಸುತ್ತೇವೆ ಎಂದು ಹೇಳಿದ್ದಾರೆ.

'ಕೆ.ಆರ್. ಪೇಟೆಯಲ್ಲಿ JDS ಸೋತಿದ್ದು ಹೊಟ್ಟೆ ಉರಿಯುತ್ತಿದೆ'..!

ಹುಣಸೂರಿನಲ್ಲಿ ವಿಶ್ವನಾಥ್ ಸೋತಿರುವ ಬಗ್ಗೆ ಪ್ರತಕ್ರಿಯಿಸಿ. ಅವರು ಸೋತಿರುವುದು ನನಗೆ ತುಂಬಾ ನೋವಾಗಿದೆ. ಅವರಿಗೆ ಉತ್ತಮ ಸ್ಥಾನ ಮಾನ ನೀಡಿ ಎಂದು ಕೇಳಲು ನಾವು ಸಿಎಂ ಭೇಟಿ ಮಾಡಲು ಹೋಗಿದ್ದೆವು. ನಮಗೆ ಸ್ಥಾನ ಮಾನ ನೀಡಿ ಎಂದು ಹೋಗಿರಲಿಲ್ಲ ಎಂದು ಹೇಳಿದ್ದಾರೆ.

ಸಿಎಂ ಮಾತು ತಪ್ಪಲ್ಲ ಎಂದು ಹೇಳಿದ್ದಾರೆ ಎಂದು ಖಾತೆ ಬೇಡಿಕೆ ವಿಚಾರವಾಗಿ ಶಾಸಕ ನಾರಾಯಣಗೌಡ ಸ್ಪಷ್ಟನೆ ನೀಡಿದ್ದಾರೆ. ಅಬಕಾರಿ ಖಾತೆಯನ್ನು ನಾರಾಯಣ ಗೌಡ ಅವರಿಗೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

JDS ಭದ್ರಕೋಟೆ ಭೇದಿಸಿದ ಕೆಸಿಎನ್‌ಗೆ ಅಬಕಾರಿ ಖಾತೆ ಗಿಫ್ಟ್‌..?

PREV
click me!

Recommended Stories

ಡೆವಿಲ್ ಬ್ಯಾನರ್‌ನಲ್ಲಿ 'ಡಾ.ಅಂಬೇಡ್ಕರ್ ತಲೆಮೇಲೆ ಕೊಲೆ ಆರೋಪಿ' ಕೂರಿಸಿದ ಅಂದಾಭಿಮಾನಿಗಳು!
ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ