Bengaluru: ಮಾನಸಿಕ ಅಸ್ವಸ್ಥನ ಮಾತು ಕೇಳಿ 1 ತಾಸು ಚರಂಡಿ ಜಾಲಾಡಿದ ಪೊಲೀಸರು ಬೆಸ್ತು!

By Govindaraj SFirst Published Jan 8, 2023, 7:19 AM IST
Highlights

ನಗರದ ರಸ್ತೆಯ ಬದಿಯ ಚರಂಡಿಯಿಂದ ಏಕಾಏಕಿ ಮೇಲೆದ್ದ ವ್ಯಕ್ತಿಯೊಬ್ಬ ಚರಂಡಿಯಲ್ಲಿ ಇನ್ನೂ 30 ಜನ ಇದ್ದಾರೆ ಎಂದು ಹೇಳಿದ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕೆಲ ಕಾಲ ಹೈರಾಣಾದ ಘಟನೆ ಶನಿವಾರ ನಡೆದಿದೆ. 

ಬೆಂಗಳೂರು (ಜ.08): ನಗರದ ರಸ್ತೆಯ ಬದಿಯ ಚರಂಡಿಯಿಂದ ಏಕಾಏಕಿ ಮೇಲೆದ್ದ ವ್ಯಕ್ತಿಯೊಬ್ಬ ಚರಂಡಿಯಲ್ಲಿ ಇನ್ನೂ 30 ಜನ ಇದ್ದಾರೆ ಎಂದು ಹೇಳಿದ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕೆಲ ಕಾಲ ಹೈರಾಣಾದ ಘಟನೆ ಶನಿವಾರ ನಡೆದಿದೆ. ಯಶವಂತಪುರದ ಎಂಇಐ ಸಿಗ್ನಲ್‌ ಬಳಿ ಈ ಘಟನೆ ನಡೆದಿದೆ. ಬೆಳಗ್ಗೆ 10.30ರ ಸುಮಾರಿಗೆ ವ್ಯಕ್ತಿಯೊಬ್ಬ ಏಕಾಏಕಿ ಚರಂಡಿಯಿಂದ ಮೇಲೆ ಬಂದಿದ್ದಾನೆ. 

ಈತನನ್ನು ನೋಡಿದ ಸ್ಥಳೀಯರು ಪ್ರಶ್ನಿಸಿದಾಗ, ‘ನಾನು ಶ್ರೀರಾಮಪುರದಿಂದ ಇಲ್ಲಿಗೆ ಚರಂಡಿಯೊಳಗೆ ಬಂದಿದ್ದೇನೆ. ಇನ್ನೂ 30 ಜನ ಚರಂಡಿ ಒಳಗೆ ಇದ್ದಾರೆ’ ಎಂದು ಹೇಳಿಕೆ ನೀಡಿದ್ದಾನೆ. ಈತನ ಮಾತಿನಿಂದ ಬೆಚ್ಚಿದ ಸ್ಥಳೀಯರು, ಯಾರೋ ಚರಂಡಿಯೊಳಗೆ ಸಿಲುಕಿರಬೇಕು ಎಂದು ಭಾವಿಸಿ ಪೊಲೀಸ್‌ ಸಹಾಯವಾಣಿ 112ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣ ಪೊಲೀಸರು ಹಾಗೂ ಅಗ್ನಿಶಾಮಕ ಸ್ಥಳಕ್ಕೆ ದೌಡಾಯಿಸಿ ಸುಮಾರು ಒಂದು ತಾಸು ಚರಂಡಿಯನ್ನು ಪರಿಶೀಲಿಸಿದ್ದಾರೆ. ಆದರೆ, ಚರಂಡಿಯಲ್ಲಿ ಯಾರೂ ಪತ್ತೆಯಾಗಿಲ್ಲ.

ಬಳಿಕ ಚರಂಡಿಯಿಂದ ಮೇಲೆ ಬಂದಿದ್ದ ವ್ಯಕ್ತಿಗೆ ಸ್ನಾನ ಮಾಡಿಸಿ, ತಿಂಡಿ ತಿನ್ನಿಸಿ ಸಮಾಧಾನದಿಂದ ಪ್ರಶ್ನೆ ಮಾಡಿದಾಗ, ‘ನಾನು ರಾಕೆಟ್‌ನಲ್ಲಿ ಇಲ್ಲಿಗೆ ಬಂದೆ’ ಎಂದಿದ್ದಾನೆ. ನೋಡಲು ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದ ಈ ವ್ಯಕ್ತಿ ತಮಿಳು ಭಾಷೆಯಲ್ಲಿ ಮಾತನಾಡುತ್ತಿದ್ದ. ಹೆಸರು ಕೇಳಿದರೆ, ರಾಜು ಎಂದು ಹೇಳಿದ್ದಾನೆ. ಕುಟುಂಬದ ಬಗ್ಗೆ ವಿಚಾರ ಮಾಡಿದರೆ, ಗೊಂದಲದ ಹೇಳಿಕೆ ನೀಡಿದ್ದಾನೆ. ಹೀಗಾಗಿ ಆರ್‌ಎಂಸಿ ಯಾರ್ಡ್‌ ಠಾಣೆ ಪೊಲೀಸರು, ಆತನನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.

Bengaluru: ರೋಲ್ಡ್‌ಗೋಲ್ಡ್‌ ಎಂದು ಕಸದ ಗುಡ್ಡೆಗೆ ಅಸಲಿ ಚಿನ್ನ ಎಸೆದ ಕಳ್ಳ!

ಕನ್ಯೆ ಸಿಗಲಿಲ್ಲವೆಂದು ಆತ್ಮಹತ್ಯೆಗೆ ಯತ್ನ: ಮದುವೆ ಮಾಡಿಕೊಳ್ಳಲು ಹೆಣ್ಣು ಸಿಗುತ್ತಿಲ್ಲ ಎಂದು ಮನನೊಂದು ಯುವಕನೋರ್ವ ಸ್ಮಶಾನಕ್ಕೆ ಹೋಗಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ದುರ್ಘಟನೆ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ನಡೆದಿದೆ. ವಯಸ್ಸಾಗುತ್ತಿದ್ದರೂ ಮನೆಯಲ್ಲಿ ಮದುವೆ ಮಾಡುತ್ತಿಲ್ಲ, ಜೊತೆಗೆ ಕನ್ಯೆಯೂ ಸಿಗುತ್ತಿಲ್ಲ ಎಂದು ಬೇಸರಿಸಿಕೊಂಡ ಸಂತೋಷ ಕೊರಡಿ (30) ಎಂಬಾತ ಮಾನಸಿಕ ಅಸ್ವಸ್ಥನಾಗಿ ಗ್ರಾಮದ ಪಕ್ಕದಲ್ಲಿರುವ ರುದ್ರಭೂಮಿಗೆ ಹೋಗಿ ಪೆಟ್ರೋಲ್‌ ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಕೂಡಲೇ ಸಮೀಪದಲ್ಲಿದ್ದ ಗ್ರಾಮದ ಜನರು ಬೆಂಕಿ ನಂದಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ. ಬೆಂಕಿಯು ದೇಹದ ಶೇ. 50ರಷ್ಟುಸುಟ್ಟಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಹುಬ್ಬಳ್ಳಿಯ ಕಿಮ್ಸ್‌ ವೈದ್ಯರು ಮಾಹಿತಿ ನೀಡಿದ್ದಾರೆ.

click me!