ಸಾಹಿತ್ಯ ಸಮ್ಮೇಳನ ನಡೆಸಬೇಕೆಂಬ 50 ವರ್ಷಗಳ ಕನಸು ನನಸು; ಹಾವೇರಿ ಜನ ಖುಷಿಯೋ ಖುಷಿ

By Kannadaprabha News  |  First Published Jan 8, 2023, 6:59 AM IST

ಹಾವೇರಿ ಜಿಲ್ಲೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ(Kannada sahitya sammelana) ನಡೆಯಬೇಕು ಎನ್ನುವುದು ಇಲ್ಲಿಯ ಸಾಹಿತ್ಯಾಸಕ್ತರ ಬೇಡಿಕೆಯಾಗಿತ್ತು. ಅದರಲ್ಲಿಯೂ ಹಾವೇರಿ((Haveri) ಜಿಲ್ಲೆಯಾಗಿ 25 ವರ್ಷಗಳು ಪೂರ್ಣಗೊಂಡು ಬೆಳ್ಳಿ ಹಬ್ಬದ ಸಂದರ್ಭದಲ್ಲಿಯೇ ನಡೆದ ಸಾಹಿತ್ಯ ಸಮ್ಮೇಳನ ಸುದೀರ್ಘ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಜಿಲ್ಲೆಯ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.


ಶಿವಕುಮಾರ ಕುಷ್ಟಗಿ

 ಹಾವೇರಿ (ಜ.8) : ವಿಶ್ವವನ್ನೇ ಬೆಂಬಿಡದಂತೆ ಕಾಡಿದ ಕೊರೋನಾ ಸಂಕಷ್ಟಹಾವೇರಿ ಸಾಹಿತ್ಯ ಸಮ್ಮೇಳನಕ್ಕೂ ಕಾಡಿತ್ತು ಇನ್ನೇನು ಸಮ್ಮೇಳನ ಮುಂದೆ ಹೋಯಿತು ಎನ್ನುವಷ್ಟರಲ್ಲಿಯೇ ನಡೆದ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಅತೀ ಹೆಚ್ಚು ಜನರು ಪಾಲ್ಗೊಳ್ಳುವ ಮೂಲಕ ರಾಜ್ಯದ ಇತಿಹಾಸದಲ್ಲಿ ದಾಖಲಾಗಿ ಉಳಿಯಿತು.

Tap to resize

Latest Videos

undefined

50 ವರ್ಷದ ಕನಸು:

ಹಾವೇರಿ ಜಿಲ್ಲೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯಬೇಕು ಎನ್ನುವುದು ಇಲ್ಲಿಯ ಸಾಹಿತ್ಯಾಸಕ್ತರ ಬೇಡಿಕೆಯಾಗಿತ್ತು. ಅದರಲ್ಲಿಯೂ ಹಾವೇರಿ ಜಿಲ್ಲೆಯಾಗಿ 25 ವರ್ಷಗಳು ಪೂರ್ಣಗೊಂಡು ಬೆಳ್ಳಿ ಹಬ್ಬದ ಸಂದರ್ಭದಲ್ಲಿಯೇ ನಡೆದ ಸಾಹಿತ್ಯ ಸಮ್ಮೇಳನ ಸುದೀರ್ಘ ಹೋರಾಟಕ್ಕೆ ಸಿಕ್ಕ ಜಯವಾಗಿದೆ.

Kannada Sahitya Sammelana: ಸರ್ಕಾರಗಳಿಂದ ಕನ್ನಡದ ಬಗ್ಗೆ ನಿರ್ಲಕ್ಷ್ಯ: ದೊಡ್ಡರಂಗೇಗೌಡ

10 ಸಾವಿರ ಪತ್ರ ಬರೆದಿದ್ದರು:

ಸಮ್ಮೇಳನ ಹಾವೇರಿ ನಡೆಸಬೇಕು ಎಂದು ನಡೆಸಬೇಕು ಎಂದು ಹೋರಾಟ ಮಾಡಿದರೆ, ಸಮ್ಮೇಳನವನ್ನು ರಾಣೆಬೆನ್ನೂರಿನಲ್ಲಿ ನಡೆಸಬೇಕು ಎಂದು ಅಲ್ಲಿನ ಜನರು ಹೋರಾಟ ಪ್ರಾರಂಭಿಸಿದರು. ಇದು ದೊಡ್ಡ ಮಟ್ಟದ ಸಂಘರ್ಷಕ್ಕೆ ಕಾರಣವಾಗಿತ್ತು, ಇದಾದ ನಂತರ ಹಾವೇರಿಯಲ್ಲಿಯೇ ಸಮ್ಮೇಳನ ನಡೆಸಬೇಕು ಎಂದು 10 ಸಾವಿರ ಪತ್ರಗಳನ್ನು ಕಸಾಪದ ರಾಜ್ಯ ಘಟಕಕ್ಕೆ ಬರೆಯುವ ಮೂಲಕ ಪತ್ರ ಚಳವಳಿಯನ್ನೇ ನಡೆಸಿದ್ದನ್ನು ಕೂಡಾ ಇಲ್ಲಿ ಸ್ಮರಸಿಬಹುದಾಗಿದ್ದು, ಇದು ಹಾವೇರಿಯಲ್ಲಿ ಸಮ್ಮೇಳನ ಆಗುವುದರಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಜನವೋ.. ಜನ:

2020 ರಲ್ಲಿಯೇ ನಡೆಯಬೇಕಿದ್ದ ಸಮ್ಮೇಳನ 2 ವರ್ಷಗಳ ಕಾಲ ಮುಂಂದೆ ಹೋಗಿ 2023ರಲ್ಲಿ ನಡೆದಿದೆ, ಈ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆ ಮಾತ್ರವಲ್ಲ ಅಕ್ಕಪಕ್ಕ ಜಿಲ್ಲೆಗಳಿಂದಲೂ ಸಾವಿರ ಸಾವಿರ ಸಂಖ್ಯೆಯ ಸಾಹಿತ್ಯಾಸಕ್ತರು ಸಮ್ಮೇಳನಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಎತ್ತ ನೋಡಿದರೂ ಅತ್ತ ಜನವೋ ಜನವೂ ಕಂಡು ಬಂದಿತು.

ಖುಷಿಯೋ ಖುಷಿ

ಕೃಷಿ ಪ್ರಧಾನವಾದ ಹಾವೇರಿ ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಸುರಿದ ಭಾರೀ ಮಳೆ ಜಿಲ್ಲೆಯ ರೈತರನ್ನು ವ್ಯಾಪಕವಾಗಿ ಕಾಡಿದ ಅತಿಯಾದ ಮಳೆಯಿಂದ ಜನರು ತತ್ತರಿಸಿದ್ದ ಜನರಿಗೆ ಸಮ್ಮೇಳನ ಹೊಸ ಚೈತನ್ಯಕ್ಕೆ ನಾಂದಿಯಾಗಿದ್ದು ಅದರಲ್ಲಿಯೂ ಗ್ರಾಮೀಣ ಪ್ರದೇಶದ ಜನರು ತಮ್ಮ ಎತ್ತು ಚಕ್ಕಡಿಗಳನ್ನು ಟ್ರ್ಯಾಕ್ಟರ್‌ ಗಳ ಮೂಲಕ ತಂಡ ತಂಡವಾಗಿ ಆಗಮಿಸುತ್ತಿದ್ದು, ಜಾತ್ರೆಗೆ ತೆರಳುವಂತೆ ಮನೆಮಂದಿಯಲ್ಲಾ ಸೇರಿ ಹೊಸ ಬಟ್ಟೆಸೀರೆಯುಟ್ಟು ಬಂದಿದ್ದು ಎಲ್ಲೆಡೆ ನೋಡಿದರೂ ಖುಷಿಯೋ ಖುಷಿ ಕಂಡು ಬರುತ್ತಿತ್ತು.

ಕನ್ನಡ ಸಾಹಿತ್ಯ ಸಮ್ಮೇಳನವು ಸಾಹಿತ್ಯ ಲೋಕಕ್ಕೆ ಉತ್ಕೃಷ್ಟ ಮುನ್ನುಡಿ ಬರೆಯಲಿದೆ: ಸಿಎಂ ಬೊಮ್ಮಾಯಿ

ನಮ್ಮೂರಲ್ಲಿ ನಡೆದಿರುವ ಈ ಸಮ್ಮೇಳನ ಐತಿಹಾಸಿಕ ಗೆಲವುವನ್ನು ಕಂಡಿದೆ, ಪ್ರತಿಯೊಂದು ಗ್ರಾಮ, ನಗರ, ಅಕ್ಕಪಕ್ಕ ತಾಲೂಕು, ಜಿಲ್ಲೆಗಳಿಂದ ಜನರು ಬಂದ ಹಿನ್ನೆಲೆಯಲ್ಲಿ ಹಾವೇರಿ ಸಾಹಿತ್ಯ ಸಮ್ಮೇಳನ ಜನರ ಅಕ್ಷರ ಜಾತ್ರೆಯಾಗಿದೆ.

- ಎಸ್‌.ಎಂ.ಪಾಟೀಲ, ಲಿಂಗಯ್ಯ ಹಿರೇಮಠ.

click me!