Latest Videos

ಪ್ರಯಾಣಿಕರ ಗಮನಕ್ಕೆ: ಇಂದು ಮೆಮು ರೈಲುಗಳು ರದ್ದು

By Kannadaprabha NewsFirst Published May 23, 2024, 7:52 AM IST
Highlights

ಬೆಂಗಳೂರು ನಗರದ ಬೈಯಪ್ಪನಹಳ್ಳಿ ಕ್ಯಾಬಿನ್‌ನಲ್ಲಿ ವಾರ್ಷಿಕ ‘ಕೇಬಲ್ ಮೆಗರಿಂಗ್’ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಕೆಲವು ಮೆಮು ವಿಶೇಷ ರೈಲು ಸೇವೆಗಳನ್ನು ಮೇ 23ರಂದು ರದ್ದು ಹಾಗೂ ಭಾಗಶಃ ರದ್ದುಗೊಳಿಸಲಾಗುತ್ತಿದೆ. 

ಬೆಂಗಳೂರು(ಮೇ.23):  ನಗರದ ಬೈಯಪ್ಪನಹಳ್ಳಿ ಕ್ಯಾಬಿನ್‌ನಲ್ಲಿ ವಾರ್ಷಿಕ ‘ಕೇಬಲ್ ಮೆಗರಿಂಗ್’ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಕೆಲವು ಮೆಮು ವಿಶೇಷ ರೈಲು ಸೇವೆಗಳನ್ನು ಮೇ 23ರಂದು ರದ್ದು ಹಾಗೂ ಭಾಗಶಃ ರದ್ದುಗೊಳಿಸಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ವೈಟ್‌ಫೀಲ್ಡ್-ಕೆಎಸ್‌ಆರ್ ಬೆಂಗಳೂರು ಮೆಮು ವಿಶೇಷ ರೈಲು (01766) ಸಂಚಾರ ರದ್ದು ಮಾಡಲಾಗಿದೆ, ಉಳಿದಂತೆ ಕೆಎಸ್‌ಆರ್‌ ಬೆಂಗಳೂರು-ಬಂಗಾರಪೇಟೆ ಮೆಮು ವಿಶೇಷ ರೈಲು (06389) ಕೆಎಸ್‌ಆರ್‌ ಬೆಂಗಳೂರು-ವೈಟ್‌ಫೀಲ್ಡ್ ನಡುವೆ, ಚಿಕ್ಕಬಳ್ಳಾಪುರ-ಬೆಂಗಳೂರು ದಂಡು ಮೆಮು ವಿಶೇಷ ರೈಲು (06535) ಯಲಹಂಕ-ಬೆಂಗಳೂರು ಕಂಟೋನ್ಮೆಂಟ್ ನಡುವೆ, ಬೆಂಗಳೂರು ದಂಡು -ಚಿಕ್ಕಬಳ್ಳಾಪುರ ಮೆಮು ವಿಶೇಷ ರೈಲು (06536) ಬೆಂಗಳೂರು ದಂಡು-ಯಲಹಂಕ ನಡುವೆ, ಬಂಗಾರಪೇಟೆ-ಕೆಎಸ್‌ಆರ್ ಬೆಂಗಳೂರು ಮೆಮು ವಿಶೇಷ ರೈಲು (01773) ಕೃಷ್ಣರಾಜಪುರಂ-ಕೆಎಸ್‌ಆರ್ ಬೆಂಗಳೂರು ನಡುವೆ, ಕೆಎಸ್‌ಆರ್ ಬೆಂಗಳೂರು-ಮಾರಿಕುಪ್ಪಂ ಮೆಮು ವಿಶೇಷ ರೈಲು (01774) ಕೆಎಸ್‌ಆರ್ ಬೆಂಗಳೂರು-ಕೃಷ್ಣರಾಜಪುರಂ ನಡುವೆ ರದ್ದು ಮಾಡಲಾಗಿದೆ.

ಬೆಂಗಳೂರು ಏರ್‌ಪೋರ್ಟ್‌ಗೆ 5 ಹೆಚ್ಚುವರಿ ಮೆಮು ರೈಲು ಸಂಚಾರ

ಮರಿಕುಪ್ಪಂ-ಕೆಎಸ್‌ಆರ್‌ ಬೆಂಗಳೂರು ಮೆಮು ವಿಶೇಷ ರೈಲು (01776) ಕೃಷ್ಣರಾಜಪುರಂ-ಕೆಎಸ್‌ಆರ್ ಬೆಂಗಳೂರು ನಡುವೆ, ಕೆಎಸ್‌ಆರ್ ಬೆಂಗಳೂರು - ಮರಿಕುಪ್ಪಂ ವಿಶೇಷ ರೈಲು (01775) ಕೆಎಸ್‌ಆರ್ ಬೆಂಗಳೂರು-ಕೃಷ್ಣರಾಜಪುರಂ ನಡುವೆ, ಮರಿಕುಪ್ಪಂ-ಕೆಎಸ್‌ಆರ್‌ ಬೆಂಗಳೂರು ಮೆಮು ವಿಶೇಷ ರೈಲು (01793) ಬಂಗಾರಪೇಟೆ-ಕೃಷ್ಣರಾಜಪುರಂ ನಡುವೆ, ಕೃಷ್ಣರಾಜಪುರಂ-ಮಾರಿಕುಪ್ಪಂ ಮೆಮು ವಿಶೇಷ ರೈಲು (01794) ಕೃಷ್ಣರಾಜಪುರಂ-ಬಂಗಾರಪೇಟೆ ನಡುವೆ ಹಾಗೂ ಕೆಎಸ್‌ಆರ್ ಬೆಂಗಳೂರು-ಕುಪ್ಪಂ ಮೆಮು ವಿಶೇಷ ರೈಲು (065೨೯) ಕೆಎಸ್‌ಆರ್ ಬೆಂಗಳೂರು - ಕೃಷ್ಣರಾಜಪುರಂ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

click me!