ವೈದ್ಯರ ಎಡವಟ್ಟಿಗೆ ನರಕವಾದ ಹುಬ್ಬಳ್ಳಿ ಯುವತಿ ಬಾಳು.. ಹೇಗಿದ್ದವಳು..ಹೇಗಾದಳು!

Published : Dec 18, 2018, 06:07 PM ISTUpdated : Dec 18, 2018, 06:15 PM IST
ವೈದ್ಯರ ಎಡವಟ್ಟಿಗೆ ನರಕವಾದ ಹುಬ್ಬಳ್ಳಿ ಯುವತಿ ಬಾಳು.. ಹೇಗಿದ್ದವಳು..ಹೇಗಾದಳು!

ಸಾರಾಂಶ

ಚಿಕಿತ್ಸೆಗೆಂದು ದಾಖಲಾಗಿದ್ದ ಯುವತಿ ಜೀವನ ಇದೀಗ ನರಕವಾಗಿಗೋಗಿದೆ. ಇದಕ್ಕೆ ಕಾರಣ ವೈದ್ಯರು ಮಾಡಿದ ಎಡವಟ್ಟು. ಹುಬ್ಬಳ್ಳಿಯ ಯುವತಿಯ ನೋವಿನ ಕತೆ  ಎಲ್ಲರ ಕಣ್ಣಲ್ಲಿಯೂ ನೀರು ತರಿಸುತ್ತದೆ.

ಹುಬ್ಬಳ್ಳಿ[ಡಿ.18]  ವೈದ್ಯರ ಎಡವಟ್ಟಿನಿಂದಾಗಿ ಬಾಳಿ ಬದುಕಬೇಕಾಗಿದ್ದ ಯುವತಿ ಹಾಸಿಗೆ ಹಿಡಿದಿದ್ದಾಳೆ. ಹುಬ್ಬಳ್ಳಿಯ ಅಯೋಧ್ಯಾ ನಗರದ ರೇಣುಕಾ ಹೊಸಮನಿ ಯಾರದೋ ತಪ್ಪಿನಿಂದ ನರಕ ಯಾತನೆ ಅನುಭವಿಸುತ್ತಿದ್ದಾರೆ.

ಅನಾರೋಗ್ಯದ ಕಾರಣ ಯುವತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಳು‌‌. ಆದರೆ ಆ ಸಮಯದಲ್ಲಿ ವೈದ್ಯರು ನೀಡಿದ ಹೈಡೋಜ್ ಇಂಜೆಕ್ಷನ್ ‌ನಿಂದ  ಇದೀಗ ಯುವತಿಯ ಕೈಕಾಲು ಸ್ವಾಧೀನ ಕಳೆದುಕೊಳ್ಳುತ್ತಿದೆ. ಅಂಗಾಲು ಮತ್ತು ಅಂಗೈ ಸಂಪೂರ್ಣ ಕಪ್ಪಾಗಿದೆ.

ಭಗವಂತ ಹನುಮಂತನ ಕಾಲಿಗೆ ಬೀಳಿಸಿಕೊಂಡ ಹುಬ್ಬಳ್ಳಿಯ ನದಾಫ್

ಖಾಸಗಿ ವೈದ್ಯರ ವಿರುದ್ಧ ವಿದ್ಯಾನಗರ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ. ದೂರು ನೀಡಿದ್ದಕ್ಕೆ ಹುಬ್ಬಳ್ಳಿಯ ಇತರೆ ವೈದ್ಯರು ಸಹ ಚಿಕಿತ್ಸೆ ನೀಡಲು ನಿರಾಕರಿಸುತ್ತಿದ್ದಾರೆ. ಎದೆಯ ಮೇಲೆ ವೈದ್ಯರ ನಾಮಫಲಕ ಹಾಕಿಕೊಂಡು ಮಲಗಿದಲ್ಲೇ ರೇಣುಕಾ‌ ಪ್ರತಿಭಟನೆ ನಡೆಸುತ್ತಿದ್ದಾರೆ. ಚಿಕಿತ್ಸೆ ಕೊಡಿ ಇಲ್ಲವೇ ದಯಾಮರಣ ಕೊಡಿ ಎಂದು ಗೋಳಾಡುತ್ತಿದ್ದಾರೆ. ಯುವತಿಯ ಬಾಳಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಸಮಾಜದಿಂದ ಆಗಬೇಕಿದೆ.

 

 

PREV
click me!

Recommended Stories

ರಾಷ್ಟ್ರಧ್ವಜ ತಯಾರಿಸ್ತಿದ್ದ ಕೈಗಳಲ್ಲೀಗ ಕೆಲಸವಿಲ್ಲ!
ಬಿಜೆಪಿ ಸಾಬೀತು ಮಾಡಿದ್ರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ: ಜಮೀರ್ ಸವಾಲು