ಗೌನ್ ನಿರಾಕರಿಸಿ ವಿದಾದಕ್ಕೀಡಾಗಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಮಹಾನಗರದ ಪ್ರಥಮ ಪ್ರಜೆಯಾಗಿಯೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸದಿರುವುದು ಭಾರೀ ಟೀಕೆಗೆ ಇಡಾಗಿದೆ.
ಹುಬ್ಬಳ್ಳಿ (ಜ.13) : ಗೌನ್ ನಿರಾಕರಿಸಿ ವಿದಾದಕ್ಕೀಡಾಗಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಮಹಾನಗರದ ಪ್ರಥಮ ಪ್ರಜೆಯಾಗಿಯೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸದಿರುವುದು ಭಾರೀ ಟೀಕೆಗೆ ಇಡಾಗಿದೆ.
ಯಾರೇ ಗಣ್ಯಾತಿ ಗಣ್ಯರು ಬಂದರೂ ಅವರನ್ನು ವಿಮಾನ ನಿಲ್ದಾಣದಲ್ಲಿ ಮೊದಲಿಗೆ ಸ್ವಾಗತಿಸುವ ಜವಾಬ್ದಾರಿ ಮೇಯರ್(Mayor) ಅವರದ್ದು. ಆದರೆ ಈರೇಶ ಅಂಚಟಗೇರಿ(Iresha Anchatageri) ಪ್ರಧಾನಿ ಆಗಮಿಸಿದ ವೇಳೆ ವಿಮಾನ ನಿಲ್ದಾಣಕ್ಕೆ ಹೋಗದೇ ಇಲ್ಲ ರೈಲ್ವೇ ಮೈದಾನದಲ್ಲಿನ ಕಾರ್ಯಕ್ರಮದ ವೇದಿಕೆಯಲ್ಲಿದ್ದರು. ಪ್ರಧಾನಿ ಸ್ವಾಗತಿಸುವ ವಿಷಯ ಮರೆತವರಂತೆ ವಿಪ ಸದಸ್ಯ ಪ್ರದೀಪ ಶೆಟ್ಟರ್ ಅವರೊಂದಿಗೆ ಮಾತನಾಡುತ್ತಾ ಕಾಲ ಕಳೆದರು.
Makar Sankranti 2023; ಮೋದಿ ಶೇರ್ ಮಾಡಿದ ಗಾಳಿಪಟ ಉತ್ಸವದ ವರ್ಣಮಯ ಫೋಟೋಗಳು
ಈ ಬಗ್ಗೆ ಪ್ರತಿಕ್ರಿಯಿಸಿದ ಅಂಚಟಗೇರಿ, ಪ್ರಧಾನಿ ಕಚೇರಿಯಿಂದ ಬಂದಂತಹ ವೇಳಾಪಟ್ಟಿಯಲ್ಲಿ ಆಹ್ವಾನಿಸಲು ಅವಕಾಶವಿರಲಿಲ್ಲ. ಹೀಗಾಗಿ ಪ್ರಧಾನಿ ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಹೋಗಲಿಲ್ಲ. ಬದಲಿಗೆ ವೇದಿಕೆ ಮೇಲೆಯೇ ಅವರನ್ನು ಸ್ವಾಗತಿಸಿದೆ ಎಂದು ಸ್ಪಷ್ಟಪಡಿಸಿದರು. ಆದರೆ ಶಿಷ್ಟಾಚಾರದ ಪ್ರಕಾರ ಯಾರೇ ಗಣ್ಯರು ಬಂದರೆ ಅವರನ್ನು ಸ್ವಾಗತಿಸಬೇಕಾದ ಜವಾಬ್ದಾರಿ ಮೇಯರ್ ಅವರದ್ದು. ದೇಶದ ಪ್ರಧಾನಿ ಬಂದಾಗಲೂ ವಿಮಾನ ನಿಲ್ದಾಣಕ್ಕೆ ಹೋಗಿ ಸ್ವಾಗತಿಸದಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶವನ್ನುಂಟು ಮಾಡಿದೆ.