Udupi: ಚಂಡಮಾರುತ ಎಫೆಕ್ಟ್: ಮಟ್ಟು ಗುಳ್ಳ ಮಣ್ಣು ಪಾಲು

Published : Dec 15, 2022, 07:45 AM IST
Udupi: ಚಂಡಮಾರುತ ಎಫೆಕ್ಟ್: ಮಟ್ಟು ಗುಳ್ಳ ಮಣ್ಣು ಪಾಲು

ಸಾರಾಂಶ

ಅದು ಪೇಟೆಂಟ್ ಪಡೆದ ಕರಾವಳಿಯ ಏಕಮಾತ್ರ ತರಕಾರಿ. ಆ ಪ್ರದೇಶದ ರೈತರಿಗೆ ತರಕಾರಿ ಬೆಳೆಯೇ ಜೀವನಾಧಾರ. ಆದ್ರೆ ಚಂಡಮಾರುತದಿಂದಾಗಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದ, ಬೆಳೆ ನಾಶವಾಗಿದೆ.

ಉಡುಪಿ (ಡಿ.15): ಅದು ಪೇಟೆಂಟ್ ಪಡೆದ ಕರಾವಳಿಯ ಏಕಮಾತ್ರ ತರಕಾರಿ. ಆ ಪ್ರದೇಶದ ರೈತರಿಗೆ ತರಕಾರಿ ಬೆಳೆಯೇ ಜೀವನಾಧಾರ. ಆದ್ರೆ ಚಂಡಮಾರುತದಿಂದಾಗಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದ, ಬೆಳೆ ನಾಶವಾಗಿದೆ. ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದ ಹಾಗಾಗಿದೆ. ಮಳೆ ಯಾವತ್ತೂ ಜೀವರಾಶಿಗೆ ವರ ಎಂಬುದರಲ್ಲಿ ಎರಡು ಮಾತೇ ಇಲ್ಲ. ಆದರೆ ಅಕಾಲಿಕ ಮಳೆ ಕೃಷಿಕರಿಗೆ ಶಾಪವೂ ಹೌದು. 

ಇದಕ್ಕೆ ತಾಜಾ ಉದಾಹರಣೆ, ಹಾಳಾಗಿ ಕೊಳೆತು ಬಿದ್ದ ತರಕಾರಿಗಳು. ಇದು ಉಡುಪಿ ಕಟಪಾಡಿಯ ಮಟ್ಟು ಎಂಬ ಪ್ರದೇಶದಲ್ಲಿ ಮಾತ್ರ ಬೆಳೆಯುವ ಮುಟ್ಟುಗುಳ್ಳ ತರಕಾರಿ. ಮುಟ್ಟುಗುಳ್ಳ ತರಕಾರಿ ಪೇಟೆಂಟ್ ಪಡೆದ ತರಕಾರಿಯಾಗಿದ್ದು, ಮುಂಬೈ ಸೇರಿದಂತೆ ವಿದೇಶಕ್ಕೂ ರಪ್ತು ಆಗುತ್ತೆ. ಆದ್ರೆ ಕೆಲವು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆ ಮಟ್ಟಗುಳ್ಳ ಕೃಷಿಕರ ನಿದ್ದೆಗೆಡಿಸಿದೆ. 

Udupi: ಜನಸ್ನೇಹಿ ಪೊಲೀಸ್ ಇನ್ಸ್ ಪೆಕ್ಟರ್‌ ಸತೀಶ್‌ಗೆ ರಾಷ್ಟ್ರಪತಿ ಪದಕ

ಮಟ್ಟುಗುಳ್ಳ ಬೆಳೆಗೆ ಸಪ್ಟೆಂಬರ್ ತಿಂಗಳವರೆಗೆ ಮಳೆ ಬಂದರೆ ಸಾಕಾಗುತ್ತದೆ. ಆದರೆ ಡಿಸೆಂಬರ್ ನಲ್ಲೂ ಸುರಿಯುತ್ತಿರುವ ಮಳೆಯಿಂದಾಗಿ ಗಿಡಗಳು ಹಾಳಾಗಿದ್ದು, ಗುಳ್ಳ ಗಿಡದಲ್ಲೇ ಕೊಳೆತು ಹೋಗಿ ಉದುರತೊಡಗಿದೆ. ಗ್ರಾಮದ ನೂರಾರು ಎಕರೆ ಜಾಗದಲ್ಲಿ ಬೆಳೆಯುವ, ಗುಳ್ಳ ಗಿಡಗಳಿಗೆ ವಾರಕ್ಕೊಮ್ಮೆ ನೀರು ಸಿಂಪಡಣೆ ಮಾಡಿದರೆ ಸಾಕಾಗುತ್ತದೆ. ನೀರಿನ ಪ್ರಮಾಣ ಹೆಚ್ಚಾದಲ್ಲಿ ಗಿಡಗಳು ಕೊಳೆತು ಹೋಗುತ್ತವೆ. ಬೆಳೆಗಾರರು ಗಿಡಗಳನ್ನು ಮಲ್ಟಿಂಗ್ ಶೀಟ್ ಹಾಕಿ ನೆಟ್ಟಿದ್ದರೂ, ಸುತ್ತ ನೀರು ನಿಂತಿರುವುದರಿಂದ ಗಿಡಗಳು ಸಾಯುತ್ತಿವೆ. 

ಆದ್ಯತೆ ಕೊಟ್ಟು ರೈತರ ಕೆಲಸ ಮಾಡಿ ಅಧಿಕಾರಿಗಳಿಗೆ ಸುನಿಲ್ ಕುಮಾರ್ ಕಿವಿಮಾತು

ಇದನ್ನೇ ನಂಬಿ ಜೀವನ ನಡೆಸುತ್ತಿರುವ ಬೆಳೆಗಾರರು ,ಬೆಳೆ ಮಳೆ ನೀರಲ್ಲಿ ಕೊಳೆತು ಹೋಗುವುದನ್ನು ಕಂಡು ಕಣ್ಣೀರು ಸುರಿಸುವಂತಾಗಿದೆ.  ಇನ್ನೂ ಅಲ್ಪಸ್ವಲ್ಪ ಉಳಿದ ಮಟ್ಟುಗುಳ್ಳವನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದರೂ, ಕಜ್ಜಿಗಳನ್ನು ಹೊಂದಿರುವ ಮಟ್ಟುಗುಳ್ಳವನ್ನು ರಿಜೆಕ್ಟ್ ಮಾಡಲಾಗುತ್ತದೆ. ಈ ಸೀಸನ್‌ನಲ್ಲಿ ಇನ್ನೂ ಮಳೆ ಬಂದರೆ ಮತ್ತೆ ಗುಳ್ಳ ಬೆಳೆಯಲು ಸಾಧ್ಯವಾಗದು. ಹೀಗಾಗಿ ಸ್ಥಳೀಯಾಡಳಿತ, ನಷ್ಷಕ್ಕೆ ಸ್ವಲ್ಪ ಮಟ್ಟಿಗಾದರೂ ಪರಿಹಾರ ನೀಡಬೇಕಿದೆ ಎನ್ನುವ ಒತ್ತಾಯ ಮಟ್ಟಗುಳ್ಳ ಬೆಳೆಗಾರರದ್ದು.

PREV
Read more Articles on
click me!

Recommended Stories

ನನ್ನ-ಸಿಎಂ ಸಿದ್ದರಾಮಯ್ಯ ನಡುವೆ ಒಪ್ಪಂದವಾಗಿದೆ: ಡಿ.ಕೆ.ಶಿವಕುಮಾರ್ ಹೇಳಿಕೆ ಹಾಟ್ ಟಾಪಿಕ್!
ಜೈಲಿಂದ ಹೊರಬಂದ ಬೆನ್ನಲ್ಲೇ ಬುರುಡೆ ಗ್ಯಾಂಗ್‌ನ ಸಮೀರ್‌, ತಿಮರೋಡಿ,ಮಟ್ಟೆನ್ನವರ್‌ ವಿರುದ್ಧ ತಿರುಗಿಬಿದ್ದ ಮಾಸ್ಕ್‌ಮ್ಯಾನ್‌!