ಇಂದು ಕೊಬ್ಬರಿಗೆ ಬೆಂಬಲ ಬೆಲೆ ಆಗ್ರಹಿಸಿ ಬೃಹತ್‌ ಪ್ರತಿಭಟನೆ

By Kannadaprabha News  |  First Published Mar 24, 2023, 4:58 AM IST

ಕ್ವಿಂಟಲ್‌ ಕೊಬ್ಬರಿಗೆ 20 ಸಾವಿರ ರು. ಬೆಂಬಲ ಬೆಲೆ ನಿಗಧಿಪಡಿಸುವಂತೆ ಹಾಗೂ ರಾಜ್ಯ ಸರ್ಕಾರ 5 ಸಾವಿರ ರು. ಪೋ›ತ್ಸಾಹ ಧನ ನೀಡುವಂತೆ ಆಗ್ರಹಿಸಿ ತೆಂಗು ಬೆಳೆಗಾರರ ಹೋರಾಟ ಸಮಿತಿ ಹಾಗೂ ಇತರೆ ರೈತ ಸಂಘಟನೆಗಳ ಸಹಕಾರದೊಂದಿಗೆ ಮಾ.24ರ ಶುಕ್ರವಾರ ಬೆಳಗ್ಗೆ 10.30ಕ್ಕೆ ಬೃಹತ್‌ ಪ್ರತಿಭಟನಾ ಮೆರವಣಿಗೆ ಹಾಗೂ ಸ್ವಾಭಿಮಾನಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.


ತಿಪಟೂರು: ಕ್ವಿಂಟಲ್‌ ಕೊಬ್ಬರಿಗೆ 20 ಸಾವಿರ ರು. ಬೆಂಬಲ ಬೆಲೆ ನಿಗಧಿಪಡಿಸುವಂತೆ ಹಾಗೂ ರಾಜ್ಯ ಸರ್ಕಾರ 5 ಸಾವಿರ ರು. ಪೋ›ತ್ಸಾಹ ಧನ ನೀಡುವಂತೆ ಆಗ್ರಹಿಸಿ ತೆಂಗು ಬೆಳೆಗಾರರ ಹೋರಾಟ ಸಮಿತಿ ಹಾಗೂ ಇತರೆ ರೈತ ಸಂಘಟನೆಗಳ ಸಹಕಾರದೊಂದಿಗೆ ಮಾ.24ರ ಶುಕ್ರವಾರ ಬೆಳಗ್ಗೆ 10.30ಕ್ಕೆ ಬೃಹತ್‌ ಪ್ರತಿಭಟನಾ ಮೆರವಣಿಗೆ ಹಾಗೂ ಸ್ವಾಭಿಮಾನಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.

ನಗರದ ಹಾಸನ ಸರ್ಕಲ್‌ನಿಂದ ಎಪಿಎಂಸಿ ಆವರಣದವರೆಗೆ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು ನಂತರ ಎಪಿಎಂಸಿ ಆವರಣದಲ್ಲಿ ಸಮಾವೇಶ ನಡೆಯಲಿದೆ. ಸರ್ಕಾರ ಕೊಬ್ಬರಿ ಮತ್ತು ರಾಗಿಯನ್ನು ಖರೀದಿ ಮಾಡುವಾಗ ಗರಿಷ್ಠ ಖರೀದಿ ನಿಯಮವನ್ನು ಕೈಬಿಡಬೇಕು ಮತ್ತು ರೈತರು ಬೆಳೆದು ತಂದ ಉತ್ಪನ್ನವನ್ನು ಸಂಪೂರ್ಣವಾಗಿ ಖರೀದಿ ಮಾಡಿಕೊಳ್ಳಬೇಕು. ನಫೆಡ್‌ ಮೂಲಕ ಖರೀದಿ ಮಾಡಿದ ಕೊಬ್ಬರಿಯನ್ನು ಮತ್ತೆ ಮಾರುಕಟ್ಟೆಗೆ ಬಿದರೆ ಉಪುತ್ಪನ್ನ ಮಾಡಿ ಮಾರಾಟ ಮಾಡಲು ಪೋ›ತ್ಸಾಹಿಸಬೇಕು. ಪಡಿತರ ಆಹಾರ ಧಾನ್ಯದ ಜೊತೆಗೆ ಪಾಮ್‌ ಆಯಿಲ್‌ ಬದಲು ಕೊಬ್ಬರಿ ಎಣ್ಣೆ ವಿತರಿಸಬೇಕು. ಕೃಷಿ ಉಪಕರಣಗಳ ಮೇಲೆ 18ರಷ್ಟುಹಾಗೂ 28ರಷ್ಟುಜಿಎಸ್ಟಿಹೇರಿಕೆಯನ್ನು ತೆಗೆಯಬೇಕು. ಸರ್ಕಾರ ಹಾಲು ಉತ್ಪಾದಕರಿಗೆ ವೈಜ್ಞಾನಿಕ ಬೆಲೆ ನೀಡಬೇಕು ಹೀಗೆ ಹಲವು ಹಕ್ಕೊತ್ತಾಯಗಳಿದ್ದು ಸರ್ಕಾರ ಇವೆಲ್ಲವುಗಳನ್ನು ಈಡೇರಿಸಬೇಕೆಂದು ಒತ್ತಾಯಿಸಲಾಗುವುದು.

Tap to resize

Latest Videos

ಈ ಪ್ರತಿಭಟನೆ ಮತ್ತು ಸಮಾವೇಶದಲ್ಲಿ ರೈತ ಸಂಘದ ರಾಜ್ಯ ಕಾರ್ಯದರ್ಶಿ ಗೋವಿಂದರಾಜು, ಸಂಘಟನಾ ಕಾರ್ಯದರ್ಶಿ ಬಿ. ಉಮೇಶ್‌, ಪ್ರಾಂತ್ಯ ರೈತ ಸಂಘದ ಚನ್ನಬಸವಣ್ಣ, ಸಿಐಟಿಯುನ ಎನ್‌.ಕೆ. ಸುಬ್ರಹ್ಮಣ್ಯ, ಕೆಪಿಆರ್‌ಎಸ್‌ನ ಎಚ್‌.ಆರ್‌.ಅಧ್ಯಕ್ಷ ನವೀನ್‌, ಪ್ರಧಾನ ಕಾರ್ಯದರ್ಶಿ ಟಿ. ಯಶ್ವಂತ್‌ ಸೇರಿದಂತೆ ರೈತ ಸಂಘ, ಹಸಿರು ಸೇನೆ, ಕೃಷಿ ಕಾರ್ಮಿಕ ಸಂಘನಟೆ, ದಲಿತ ಸಂಘರ್ಷ ಸಮಿತಿ, ಜನಸ್ಪಂದನ ಟ್ರಸ್ಟ್‌, ಕನ್ನಡ ಸಾಹಿತ್ಯ ಪರಿಷತ್‌, ಗುತ್ತಿಗೆದಾರರ ಸಂಘ ಸೇರಿದಂತೆ ಹತ್ತಾರು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಲಿದ್ದು ತಾಲೂಕಿನ ರೈತ ಬಂಧುಗಳು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿಯು ಮನವಿ ಮಾಡಿದೆ.

ಪ್ರತಿಭಟನೆಗೆ ಡಾ. ಪ್ರಭಾಕರ ರೆಡ್ಡಿ ಬೆಂಬಲ : ಕೊಬ್ಬರಿ ಬೆಳೆಗಾರರು ಹಾಗೂ ರೈತ ಸಂಘಟನೆಗಳ ಹೋರಾಟ ಸಮಿತಿಯು ಮಾ. 24ರ ಶುಕ್ರವಾರ ಹಮ್ಮಿಕೊಂಡಿರುವ ನಗರದ ಹಾಸನ ಸರ್ಕಲ್‌ನಿಂದ, ಎಪಿಎಂಸಿ ಮಾರುಕಟ್ಟೆಯವರೆಗೆ ಹಮ್ಮಿಕೊಂಡಿರುವ ಬೃಹತ್‌ ಪ್ರತಿಭಟನಾ ಮೆರವಣಿಗೆ ಮತ್ತು ಸ್ವಾಭಿಮಾನಿ ಸಮಾವೇಶಕ್ಕೆ ತಾಲೂಕಿನ ರೈತರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಬೆಂಬಲಿಸಬೇಕೆಂದು ವಿಧಾನಸಭಾ ಕ್ಷೇತ್ರದ ಪ್ರಭಲ ಅಭ್ಯರ್ಥಿ ಡಾ. ಪ್ರಭಾಕರ ರೆಡ್ಡಿ ಮನವಿ ಮಾಡಿದ್ದಾರೆ.

click me!