Chitradurga: ಮೀಸಲಾತಿ ಹಾಗೂ ಇಷ್ಟಾರ್ಥ ಸಿದ್ಧಿಗಾಗಿ ಸಾಮೂಹಿಕ ಬಾಡೂಟ ಆಯೋಜನೆ

By Govindaraj S  |  First Published Nov 30, 2022, 8:21 AM IST

ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ  ದೇವರಿಗೆ ಹರಕೆ ಸಲ್ಲಿಸೋದು, ವಿಶೇಷ ಪೂಜೆ ಮಾಡೋದು ಕಾಮನ್. ಆದ್ರೆ‌ ಇಲ್ಲೊಂದು ಬುಡಕಟ್ಟು ಸಮುದಾಯ ಮೀಸಲಾತಿಗಾಗಿ ಭರ್ಜರಿ ಸಾಮೂಹಿಕ ಬಾಡೂಟ ಹಾಕಿಸುವ ಮೂಲಕ ಹರಕೆ ಸಲ್ಲಿಸಿದೆ. ಅಷ್ಟಕ್ಕೂ ಆ ಸಮುದಾಯ ಯಾವ ಕಾರಣಕ್ಕೆ ಸಾಮೂಹಿಕ ಬಾಡೂಟ ವ್ಯವಸ್ಥೆ ಮಾಡಿದೆ ಅಂತೀರಾ?


ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ನ.30): ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ  ದೇವರಿಗೆ ಹರಕೆ ಸಲ್ಲಿಸೋದು, ವಿಶೇಷ ಪೂಜೆ ಮಾಡೋದು ಕಾಮನ್. ಆದ್ರೆ‌ ಇಲ್ಲೊಂದು ಬುಡಕಟ್ಟು ಸಮುದಾಯ ಮೀಸಲಾತಿಗಾಗಿ ಭರ್ಜರಿ ಸಾಮೂಹಿಕ ಬಾಡೂಟ ಹಾಕಿಸುವ ಮೂಲಕ ಹರಕೆ ಸಲ್ಲಿಸಿದೆ. ಅಷ್ಟಕ್ಕೂ ಆ ಸಮುದಾಯ ಯಾವ ಕಾರಣಕ್ಕೆ ಸಾಮೂಹಿಕ ಬಾಡೂಟ ವ್ಯವಸ್ಥೆ ಮಾಡಿದೆ ಅಂತೀರಾ? ಈ ಸ್ಟೋರಿ ನೋಡಿ. ಬೃಹತ್ ಪಾತ್ರೆಗಳಲ್ಲಿ ಸಿದ್ಧವಾಗಿರೋ ಬಾಡೂಟ. ಮುದ್ದೆಯನ್ನು ಕಟ್ಟುತ್ತಿರುವ ಮಹಿಳೆಯರು ಕಣ್ಣಾಯಿಸಿದಷ್ಟು ದೂರಕ್ಕೆ ಕಾಣುವ ಸಾವಿರಾರು ಜನರ ಸಹಪಂಕ್ತಿ ಸಾಲು.

Latest Videos

undefined

ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಕೋಟೆನಾಡು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವದ್ದಿಕೆರೆ ಗ್ರಾಮ. ಹೌದು, ಮೀಸಲಾತಿಗಾಗಿ ವಿವಿಧ ಸಮುದಾಯಗಳು ಬೀದಿಗಿಳಿದು ಸರ್ಕಾರದ ಗಮನ ಸೆಳೆಯುವಂತೆ ಹೋರಾಡ್ತಿವೆ. ಆದ್ರೆ ಚಿತ್ರದುರ್ಗ ತಾಲ್ಲೂಕಿನ ಗೊಲ್ಲನಕಟ್ಟೆ ಗ್ರಾಮದ‌ ಕಾಡುಗೊಲ್ಲ ಸಮುದಾಯದವರು  101 ಕುರಿಗಳ ಬಾಡೂಟವನ್ನು ಹಿರಿಯೂರು ತಾಲ್ಲೂಕಿನ ವದ್ದಿಕರೆಯ ಭವರೋಗ ವೈದ್ಯ ಎನಿಸಿರುವ ಶ್ರೀಸಿದ್ದೇಶ್ವರ ಸ್ವಾಮಿಗೆ ದೇವರಿಗೆ ನೈವೇದ್ಯ ಮಾಡಿದ್ದೂ, ಇಷ್ಟಾರ್ಥ ಈಡೇರಿಸೆಂದು ಸಾವಿರಾರು ಜನರಿಗೆ ಸಹಪಂಕ್ತಿ ಬಾಡೂಟ ಹಾಕಿಸಿ ಭಕ್ತಿ‌ ಸಮರ್ಪಣೆ‌ ಮಾಡಿದರು‌.

ಡಿಕೆಶಿ ಸಭೆಯಲ್ಲಿ ಕೈ ಮುಖಂಡರ ಜೇಬಿಗೆ ಕತ್ತರಿ: ಕಳ್ಳನ ಕೈಸೇರಿದ 15 ಸಾವಿರ

ಅದ್ರಲ್ಲೂ ಅವರ ಪ್ರಮುಖ‌ ಬೇಡಿಕೆಯಾದ ಎಸ್‌ಟಿ‌ ಮೀಸಲಾತಿಯನ್ನು ಕಾಡುಗೊಲ್ಲ ಸಮುದಾಯಕ್ಕೆ ಕೊಡಿಸುವಂತೆ ಸಿದ್ದೇಶ್ವರನಿಗೆ ಹರಕೆ ಸಲ್ಲಿಸಿದ್ದೂ ಬಾಡೂಟದ ವಿಶೇಷ ಎನ್ನಿಸಿದೆ. ಜೊತೆಗೆ ತಮ್ಮ ಸಮುದಾಯದ ಸಂಘಟನೆಗಾಗಿ ಈ ವಿಶೇಷ ಹಾದಿಯನ್ನು ಹಿಡಿದಿರುವ ಸಂಘಟಕರು, ಪ್ರತಿವರ್ಷ ಲೋಕಕಲ್ಯಾಣ ಹಾಗು ಗ್ರಾಮಸ್ಥರ ಒಳಿತಿಗಾಗಿ  ಎಲ್ಲಾ ಗೊಲ್ಲರಹಟ್ಟಿಗಳ ಜನರನ್ನು ಕರೆದು, ಬಾಡೂಟ ಹಾಕಿಸ್ತಿದ್ದೂ, ಈ ಬಾರಿ ಎಸ್‌ಟಿ ಮೀಸಲಾತಿಗಾಗಿ ಹೋರಾಟದ ರೂಪುರೇಷೆಗಾಗಿ ಬಾಡೂಟ ಆಯೋಜಿಸಲಾಗಿತ್ತು.

ಎಡಿಜಿಪಿ ಅಲೋಕ್ ಕುಮಾರ್‌ಗೆ ಪತ್ರ ಬರೆದ ಸಾಮಾಜಿಕ ಕಾರ್ಯಕರ್ತ ಹಾಗೂ ಮುರುಘಾ ಶ್ರೀ ಆಪ್ತ ಜಿತೇಂದ್ರ

ಇಂತಹ ಸಾಂಪ್ರದಾಯಿಕ ಆಚರಣೆಗಳ ಮೂಲಕ ಸರ್ಕಾರದ ಗಮನ ಸೆಳೆದು, ಮೀಸಲಾತಿ ಗಿಟ್ಟಿಸಲು ಕಾಡುಗೊಲ್ಲ‌ ಸಮುದಾಯ ಹವಣಿಸುತ್ತಿದೆ ಎಂದು ಮಾಜಿ ಶಾಸಕ ಉಮಾಪತಿ ಹೇಳಿದ್ರು. ಇತ್ತೀಚೆಗೆ ರಾಜ್ಯ ಸರ್ಕಾರ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳ ಮಾಡಿರೋ ಬೆನ್ನಲೇ ರಾಜ್ಯದ ವಿವಿಧ ಸಮುದಾಯಗಳು ನಮಗೂ ಮೀಸಲಾತಿ ಬೇಕು ಎಂದು ಒತ್ತಾಯ ಮಾಡ್ತಿವೆ. ಅದೇ ರೀತಿ‌ ಬಹುದಿನಗಳಿಂದಲೂ ಕಾಡುಗೊಲ್ಲ‌ ಸಮುದಾಯ ಕೂಡ ಮೀಸಲಾತಿ ವಿಚಾರವಾಗಿ ಧ್ವನಿ‌ ಎತ್ತಿತ್ತು. ಆದ್ರೆ ಕೋಟೆನಾಡಿನಲ್ಲಿ ವಿಶೇಷವಾಗಿ ಹರಕೆ ಒಪ್ಪಿಸಿದ್ದೇ ಡಿಫರೆಂಟ್.

click me!