ಕೊರೋನಾ ಆತಂಕ: ಮೈಸೂರಲ್ಲಿ ಕೊಕ್ಕರೆಗಳ ಸಾಮೂಹಿಕ ಸಾವು

By Kannadaprabha News  |  First Published Mar 8, 2020, 11:19 AM IST

ಕೊರೋನಾ ಭೀತಿಯಲ್ಲಿರುವಾಗಲೇ ಸಕಲೇಶಪುರದಲ್ಲಿ ಸಮೂಹಿಕವಾಗಿ ಕಾಗೆಗಳು ಸತ್ತುಬಿದ್ದಿರುವ ಘಟನೆ ನಡೆದಿತ್ತು. ಇದೀಗ ಮೈಸೂರಿನಲ್ಲಿಯೂ ಕೊಕ್ಕರೆಗಲೂ ಸಾಮೂಹಿಕವಾಗಿ ಸತ್ತುಬಿದ್ದಿರುವುದು ಕಂಡು ಬಂದಿದೆ.


ಮೈಸೂರು(ಮಾ.08): ಮೈಸೂರಿನ ವಿದ್ಯಾರಣ್ಯಪುರಂ ಸೇರಿದಂತೆ ಹಲವು ಕಡೆ ಕಳೆದೊಂದು ವಾರದಿಂದ 12ಕ್ಕೂ ಹೆಚ್ಚು ಕೊಕ್ಕರೆಗಳು ಸತ್ತಿರುವ ಸಂಗತಿಗಳು ತಡವಾಗಿ ಬೆಳಕಿಗೆ ಬಂದಿವೆ.

ಪಾಲಿಕೆಯ 55ನೇ ವಾರ್ಡ್‌ನ ವಿದ್ಯಾರಣ್ಯಪುರಂ 5ನೇ ಮುಖ್ಯ ರಸ್ತೆಯಲ್ಲಿ ಇದುವರಿಗೆ ಕಳೆದ 1 ವಾರದಿಂದ 12 ಕೊಕ್ಕರೆಗಳು ಸತ್ತಿದ್ದು, ಕಾರಣ ತಿಳಿದಿಲ್ಲ. ಈ ವಿಚಾರ ತಿಳಿದು ಪಾಲಿಕೆ ಸದಸ್ಯ ಮ.ವಿ. ರಾಮಪ್ರಸಾದ ಸ್ಥಳಕ್ಕೆ ಆಗಮಿಸಿ ಪಶುವೈದ್ಯ ಡಾ. ನಾಗರಾಜ್‌ ಅವರಿಗೆ ತಿಳಿಸಿದರು. ಅವರೂ ಸ್ಥಳಕ್ಕೆ ಭೇಟಿ ನೀಡಿ ಮೃತ ಕೊಕ್ಕರೆ ಶವಗಳನ್ನು ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ತಪಾಸಣೆಗಾಗಿ ಕಳುಹಿಸಿದ್ದಾರೆ.

Tap to resize

Latest Videos

undefined

ಕೊರೋನಾ ಆತಂಕ: ಕಾಗೆಗಳ ಸಾಮೂಹಿಕ ಸಾವು

ಮೈಸೂರಿನಲ್ಲಿ ವಿಶ್ವ ವಿಖ್ಯಾತ ಮೃಗಾಲಯ ಇರುವುದರಿಂದ ಹಾಗೂ ಇತರ ಪ್ರಾಣಿ ಪಕ್ಷಿಗಳಿಗೆ ಈ ಕೊಕ್ಕರೆಗಳಿಗೆ ತಗುಲಿರುವ ಸೋಂಕು ಮೃಗಾಲಯದ ಪಕ್ಷಿಗಳಿಗೂ ತಗುಲದಂತೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ರಾಮಪ್ರಸಾದ್‌ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

click me!