'ಈ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ಸೇರಿಸಬೇಡಿ'

Kannadaprabha News   | Asianet News
Published : Aug 27, 2020, 01:55 PM ISTUpdated : Aug 27, 2020, 02:47 PM IST
'ಈ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ಸೇರಿಸಬೇಡಿ'

ಸಾರಾಂಶ

ಹಲವು ಶಾಲೆಗಳ ಮಾನ್ಯತೆ ರದ್ದು ಮಾಡಲಾಗಿದ್ದು, ಇಲ್ಲಿಗೆ ಮಕ್ಕಳನ್ನು ಸೇರಿಸದಂತೆ ಶಿಕ್ಷಣಾಧಿಕಾರಿಗಳು ಮನವಿ ಮಾಡಿದ್ದಾರೆ. 

ಹಾಸನ (ಆ.27):  ಹಾಸನ ಹಲವು ಶಾಲೆಗಳ ಪರವಾನಗಿ ರದ್ದು ಮಾಡಲಾಗಿದ್ದು, ಈ ಎಲ್ಲಾ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ಸೇರಿಸಬೇಡಿ ಎಂದು ಶಿಕ್ಷಣಾಧಿಕಾರಿ ಮನವಿ ಮಾಡಿದ್ದಾರೆ. 

ಈ ಶಾಲೆಗಳಿಗೆ ಯಾವುದೇ ಮಾನ್ಯತೆ ಇರದ ಕಾರಣ ಮಕ್ಕಳನ್ನು ದಾಖಲಿಸದಂತೆ ತಿಳಿಸಿದ್ದಾರೆ.

ಯಾವ ಶಾಲೆಗಳು 

 ನಗರದ ಪೆನ್‌ಷನ್‌ ಮೊಹಲ್ಲಾದ ಎ.ಪಿ.ಎ. ಎಜುಕೇಷನ್‌ ಟ್ರಸ್ಟ್‌ ಸಂಸ್ಥೆಯ ನಡೆಯುತ್ತಿರುವ ಎ.ಪಿ.ಎ ಅಕಾಡೆಮಿ ಹಿರಿಯ ಪ್ರಾಥಮಿಕ ಶಾಲೆ, 5ನೇ ಕ್ರಾಸ್‌, ಇಲಾಹಿ ನಗರ, ವಾರ್ಡ್‌ ನಂ 17, ಪೆನ್‌ ಷನ್‌ ಮೊಹಲ್ಲಾ, ಹಾಸನ, ಎ.ಪಿ.ಆರ್‌ ಅಕಾಡೆಮಿ ಕಿರಿಯ ಪ್ರಾಥಮಿಕ ಶಾಲೆ, ಹುಣಸಿನಕೆರೆ ಲೇಔಟ್‌ ವಿಶ್ವನಾಥನಗರ, 1ನೇ ಕ್ರಾಸ್‌, ಹಾಸನ ಮತ್ತು ಎ.ಪಿ.ಎನ್‌ ಅಕಾಡೆಮಿ ಕಿರಿಯ ಪ್ರಾಥಮಿಕ ಶಾಲೆ.

ಬೈಪಾಸ್‌ ರಸ್ತೆ, ಬಿಟ್ಟಗೊಡನಹಳ್ಳಿ, ಗದ್ದೆಹಳ್ಳ, ಬಿ.ಎಂ ರಸ್ತೆ, ಹಾಸನ ಈ ಶಾಲೆಗಳ ಮಾನ್ಯತೆಯನ್ನು 2020-21 ನೇ ಸಾಲಿನಿಂದ ಜಾರಿಗೆ ಬರುವಂತೆ ಶಾಲೆಯ ಅನುಮತಿಯನ್ನು ಹಿಂಪಡೆದು ನೋಂದಣಿ ರದ್ದುಗೊಳಿಸಿ ಶಾಲೆಯನ್ನು ಮುಚ್ಚಲು ಆದೇಶಿಸಲಾಗಿರುವುದರಿಂದ ಈ ಶಾಲೆಗೆ ಪೋಷಕರು ವಿದ್ಯಾರ್ಥಿಗಳನ್ನು ದಾಖಲು ಮಾಡದಂತೆ ಕ್ಷೇತ್ರ ಶಿಕ್ಷಣಾ​ಧಿಕಾರಿಗಳು ತಿಳಿಸಿದ್ದಾರೆ.

ಶಾಲಾ-ಕಾಲೇಜು ಆರಂಭದ ಬಗ್ಗೆ ಬ್ರೇಕಿಂಗ್ ನ್ಯೂಸ್ ಕೊಟ್ಟ ಡಿಸಿಎಂ ಅಶ್ವತ್ಥನಾರಾಯಣ...

"

PREV
click me!

Recommended Stories

ಬೆಂಗಳೂರು: 2 ಲಕ್ಷ ಬೆಲೆಯ ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ!
ವಿಮಾನದಲ್ಲಿ ಹೃದಯಾಘಾತ- ಅಮೆರಿಕ ಪ್ರಜೆಯ ಜೀವ ಉಳಿಸಿದ ಡಾ. ಅಂಜಲಿ ನಿಂಬಾಳ್ಕರ್