ಬಿಜೆಪಿ ನಾಯಕರ ಧೋರಣೆಗೆ ಬೇಸತ್ತು ಜೆಡಿಎಸ್‌ಗೆ ಸೇರ್ಪಡೆ

By Kannadaprabha News  |  First Published Dec 7, 2022, 5:56 AM IST

ಭಾರತೀಯ ಜನತಾ ಪಕ್ಷದ ಸಿದ್ಧಾಂತ ಮತ್ತು ತಾಲೂಕಿನ ಬಿಜೆಪಿ ಶಾಸಕರ ಧೋರಣೆಗೆ ಬೇಸತ್ತು ಹತ್ತಾರು ದಲಿತ ಮುಖಂಡರು ಬಿಜೆಪಿ ತ್ಯಜಿಸಿ ಜೆಡಿಎಸ್‌ ಸೇರ್ಪಡೆಗೊಳ್ಳುತ್ತಿರುವುದಾಗಿ ಜಿಲ್ಲಾ ಬಿಜೆಪಿಯ ಎಸ್ಸಿ ಮೋರ್ಚಾ ಖಜಾಂಚಿ ಜುಂಜಯ್ಯ ಹೇಳಿದರು.


  ತುರುವೇಕೆರೆ (ಡಿ.07): ಭಾರತೀಯ ಜನತಾ ಪಕ್ಷದ ಸಿದ್ಧಾಂತ ಮತ್ತು ತಾಲೂಕಿನ ಬಿಜೆಪಿ ಶಾಸಕರ ಧೋರಣೆಗೆ ಬೇಸತ್ತು ಹತ್ತಾರು ದಲಿತ ಮುಖಂಡರು ಬಿಜೆಪಿ ತ್ಯಜಿಸಿ ಜೆಡಿಎಸ್‌ ಸೇರ್ಪಡೆಗೊಳ್ಳುತ್ತಿರುವುದಾಗಿ ಜಿಲ್ಲಾ ಬಿಜೆಪಿಯ ಎಸ್ಸಿ ಮೋರ್ಚಾ ಖಜಾಂಚಿ ಜುಂಜಯ್ಯ ಹೇಳಿದರು.

ತಮ್ಮ ಹಲವಾರು ಬೆಂಬಲಿಗರೊಂದಿಗೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪರ ಸಮ್ಮುಖ (JDS)  ಸೇರ್ಪಡೆಗೊಂಡ ಅವರು ಹಾಲಿ ಶಾಸಕ ಮಸಾಲಾ ಜಯರಾಮ್‌ರವರು ಕಳೆದ ಬಾರಿ ಚುನಾವಣೆಗೆ (Election ) ಸ್ಪರ್ಧಿಸಿದ ವೇಳೆ ತಾವೆಲ್ಲರೂ ತನು,ಮನ,ಧನ ನೀಡಿ ಪಕ್ಷಕ್ಕೆ ದುಡಿದು ಮಸಾಲಾ ಜಯರಾಮ್‌ರನ್ನು ಗೆಲ್ಲಿಸಿದ್ದೆವು. ಆದರೆ ಮಸಾಲಾ ಜಯರಾಮ್‌ ಗೆದ್ದ ನಂತರ ತಮ್ಮೆಲ್ಲರನ್ನೂ ದೂರ ಇಟ್ಟರು. ಸೌಜನ್ಯಕ್ಕೂ ಮಾತನಾಡಿಸಲಿಲ್ಲ. ತಮ್ಮ ಸಮುದಾಯಕ್ಕೆ ಬಂದಿದ್ದ ಸರ್ಕಾರದ ಸವಲತ್ತುಗಳನ್ನೂ ಸಹ ತಮ್ಮ ಬೆಂಬಲಿಗರಿಗೆ ನೀಡಲಿಲ್ಲ. ಕನಿಷ್ಠ ಪಕ್ಷ ತಮ್ಮ ಗ್ರಾಮಗಳ ಅಭಿವೃದ್ಧಿಯನ್ನೂ ಸಹ ಮಾಡಲಿಲ್ಲ ಎಂದು ಜುಂಜಯ್ಯ ಕಿಡಿಕಾರಿದರು.

Tap to resize

Latest Videos

ಬಿಜೆಪಿಯ ಸಿದ್ಧಾಂತವೂ ಸಹ ದಲಿತರಿಗೆ ಸರಿಬರುವುದಿಲ್ಲ, ನಮ್ಮನ್ನು ಗೌರವಿಸುವುದಿಲ್ಲ. ಹಾಗಾಗಿ ತಾವೆಲ್ಲರೂ ಬಿಜೆಪಿ ತ್ಯಜಿಸಿ ಜೆಡಿಎಸ್‌ ಸೇರ್ಪಡೆಗೊಳ್ಳುತ್ತಿರುವುದಾಗಿ ಹೇಳಿದರು.ತಾಲೂಕಿನಲ್ಲಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪರನ್ನು ಗೆಲ್ಲಿಸುವ ಮೂಲಕ ಎಚ್‌.ಡಿ.ಕುಮಾರಸ್ವಾಮಿಯವರ ಕೈ ಬಲಪಡಿಸಲು ಪ್ರಾಮಾಣಿಕವಾಗಿ ದುಡಿಯುವುದಾಗಿ ಉಂಜಯ್ಯ ಹೇಳಿದರು.

ತಾಲೂಕು ಯುವ ಜೆಡಿಎಸ್‌ನ ಅಧ್ಯಕ್ಷ ಬಾಣಸಂದ್ರ ರಮೇಶ್‌, ಎಪಿಎಂಸಿ ಮಾಜಿ ಅಧ್ಯಕ್ಷ ಮಂಗೀಕುಪ್ಪೆ ಬಸವರಾಜು, ಪಟ್ಟಣ ಪಂಚಾಯ್ತಿ ಮಾಜಿ ಸದಸ್ಯ ವಿಜಯೇಂದ್ರ, ಜೆಡಿಎಸ್‌ ಪಕ್ಷದ ವಕ್ತಾರ ವೆಂಕಟಾಪುರ ಯೋಗೀಶ್‌, ಫ್ರೂಟ್‌ ಶಿವಣ್ಣ, ರಾಮಣ್ಣ, ತಾಲೂಕು ಯುವ ಜೆಡಿಎಸ್‌ನ ಪ್ರಧಾನ ಕಾರ್ಯದರ್ಶಿ, ತಂಡಗ ಗ್ರಾಮ ಪಂಚಾಯ್ತಿ ಸದಸ್ಯ ಚನ್ನಬಸವೇಗೌಡ ಸೇರಿದಂತೆ ಹಲವು ಮುಖಂಡರು ದಲಿತ ಮುಖಂಡರನ್ನು ಸ್ವಾಗತಿಸಿದರು.

ದಂಡಿನಶಿವರ, ಅರೆಕೆರೆ, ಸಾಸಲು, ಹೆಗ್ಗೆರೆ ಸೇರಿದಂತೆ ಇತರ ಗ್ರಾಮಗಳ ದಲಿತ ಮುಖಂಡರು ಜೆಡಿಎಸ್‌ಗೆ ಸೇರ್ಪಡೆಗೊಂಡರು. 5 ಟಿವಿಕೆ 5 - ತುರುವೇಕೆರೆಯಲ್ಲಿ ಬಿಜೆಪಿ ತ್ಯಜಿಸಿ ಜೆಡಿಎಸ್‌ಗೆ ಹಲವು ದಲಿತ ಮುಖಂಡರು ಸೇರ್ಪಡೆಗೊಂಡರು.

ಚಾಮುಂಡೆಶ್ವರಿಯಲ್ಲಿ ಬಿಜೆಪಿಗೆ ಬೆಂಬಲ

  ಮೈಸೂರು :  ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಸಾಕಷ್ಟುಅನುದಾನ ನೀಡಿದ್ದು, ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರದ ಜನತೆ ಬಿಜೆಪಿ ಬೆಂಬಲಿಸಲಿದ್ದಾರೆ ಎಂದು ಬಿಜೆಪಿ ನಗರಾಧ್ಯಕ್ಷ ಟಿ.ಎಸ್‌. ಶ್ರೀವತ್ಸ ವಿಶ್ವಾಸ ವ್ಯಕ್ತಪಡಿಸಿದರು.

ಶ್ರೀರಾಂಪುರ ಜಿಪಂ ವ್ಯಾಪ್ತಿಯ ಬೂತ್‌ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ  (BJP)  ಶಾಸಕರು ಇಲ್ಲದಿದ್ದರು ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟುಅನುದಾನ ನೀಡಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದಲೂ ಹಲವಾರು ಗ್ರಾಮಗಳಿಗೆ ಕೋಟ್ಯಂತರ ರೂಪಾಯಿ ಅನುದಾನ ನೀಡಿರುವುದು ನಮ್ಮ ಸರ್ಕಾರದ ಹೆಗ್ಗಳಿಕೆ ಎಂದು ಹೇಳಿದರು.

ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಈ ಎಲ್ಲಾ ಅಭಿವೃದ್ಧಿ ಕಾರ್ಯಗಳ ಮಾಹಿತಿಯನ್ನು ಮತದಾರರಿಗೆ ಮನವರಿಕೆ ಮಾಡಿ ಕೊಡುವ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದರು.

ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷ ಗೆಜ್ಜಗಳ್ಳಿ ಮಹೇಶ್‌, ಮಾಜಿ ಅಧ್ಯಕ್ಷ ಎನ್‌. ಅರುಣ್‌ಕುಮಾರ್‌ ಗೌಡ, ಮಾಜಿ ಜಿಲ್ಲಾಧ್ಯಕ್ಷ ಎಸ್‌.ಡಿ. ಮಹೇಂದ್ರ, ಮುಖಂಡರಾದ ಗೋಪಾಲರಾವ್‌, ಪರಶುರಾಮಪ್ಪ, ವಾನೀಶ್‌, ಭಾಗ್ಯಶ್ರೀ, ನಂದಕುಮಾರ್‌, ನಾಡನಹಳ್ಳಿ ಸುರೇಶ್‌, ಶ್ರೀಕಂಠ, ಜಯಸಿಂಹ, ಶಿವು ಗುರೂರು, ಚೇತನ್‌, ನಂಜುಂಡಸ್ವಾಮಿ, ವೃಷಭೇಂದ್ರ, ಶಂಕರ್‌ ನಾರಾಯಣ್‌ ಮೊದಲಾದವರು ಇದ್ದರು.

ಚಾಮುಂಡೇಶ್ವರಿಯಿಂದ ಸ್ಪರ್ಧೆ ಮಾಡುವುದಿಲ್ಲ

ಮೈಸೂರು : ನನ್ನ ಸೋಲಿಗೆ ಕಾರಣವಾದ ಚಾಮುಂಡೇಶ್ವರಿ ಕ್ಷೇತ್ರದಿಂದ ನಾನು ಸ್ಪರ್ಧಿಸುವುದಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮೈಸೂರು ತಾಲೂಕು ಹಳೇ ಕಾಮನಕೊಪ್ಪಲು ಗ್ರಾಮದ ಬಳಿ ಇಲವಾಲ ಭಾಗದ ಕಾಂಗ್ರೆಸ್‌ ಕಾರ್ಯಕರ್ತರು ಸ್ವಾಗತಿಸಿ, ಚಾಮುಂಡೇಶ್ವರಿ ಕ್ಷೇತ್ರದಿಂದಲೇ ನೀವು ಸ್ಪರ್ಧಿಸಬೇಕು. ಈ ಬಾರಿ ಗೆದ್ದೇ ಗೆಲ್ಲಿಸುತ್ತೇವೆ ಎಂದು ಮನವಿ ಮಾಡಿದರು.

’ಸಿದ್ದರಾಮಯ್ಯ ನಾಲಾಯಕ್ ಎಂದೇ ಚಾಮುಂಡೇಶ್ವರಿಯಿಂದ ಬದಾಮಿಗೆ ಓಡಿಸಿದ್ದಾರೆ’

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರ ನನ್ನನ್ನು ಮುಖ್ಯಮಂತ್ರಿ ಆಗುವವರೆಗೆ ಬೆಳೆಸಿದೆ. ಈ ಕ್ಷೇತ್ರ ಜನರ ಋುಣವನ್ನು ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ. ನಿಮ್ಮ ಅಭಿಮಾನಕ್ಕೆ ನಾನು ಋುಣಿಯಾಗಿದ್ದೇನೆ. ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರದಿಂದ ನಾನು ಸ್ಪರ್ಧಿಸುವುದಿಲ್ಲ, ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುತ್ತದೆ. ನೀವೆಲ್ಲರೂ ಪಕ್ಷ ನಿರ್ಧರಿಸಿದ ಅಭ್ಯರ್ಥಿಗೆ ಬೆಂಬಲ ನೀಡಿ. ಒಗ್ಗಟ್ಟಿನಿಂದ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.

click me!