ಚಿಕ್ಕಬಳ್ಳಾಪುರ (ಆ.03): ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಬಿಜೆಪಿ ಪಕ್ಷದ ಕಡೆಗೆ ಹೆಚ್ಚು ಹಿಂದುಳಿದ ವರ್ಗಗಳ ಮುಖಂಡರು, ನಾಯಕರು ಒಲವು ತೋರಿ ಪಕ್ಷ ಸೇರ್ಪಡೆ ಗೊಳ್ಳುತ್ತಿರುವುದು ಪಕ್ಷಕ್ಕೆ ಹೆಚ್ಚಿನ ಆನೆ ಬಲ ತಂದುಕೊಡುತ್ತಿದೆಯೆಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ತಿಳಿಸಿದರು.
ನಗರದ ಸಿದ್ದೇಶ್ವರ ಸಮುದಾಯ ಭವನದಲ್ಲಿ ಸೋಮವಾರ ಬಿಜೆಪಿ ಓಬಿಸಿ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಕೇವಲ ಮೇಲ್ವರ್ಗದ ಜನರ ಪಕ್ಷ ಎನ್ನುವ ಕಾಲ ದೂರವಾಗಿದೆ. ಪಕ್ಷಕ್ಕೆ ದಲಿತರು, ಹಿಂದುಳಿದ ಹಾಗೂ ಅಲ್ಪಸಂಖ್ಯಾತರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆಂದರು.
ಬಿಎಸ್‌ವೈಗೆ ಸಚಿವ ಸ್ಥಾನಾಕಾಂಕ್ಷಿಗಳ ದುಂಬಾಲು : ಶಾಸಕರ ಲಾಬಿ
ಕಾರ್ಯಕಾರಿಣಿ ಸಭೆಯಲ್ಲಿ ಜಿಲ್ಲಾ ಓ.ಬಿ.ಸಿ. ಮೋರ್ಚಾ ಅಧ್ಯಕ್ಷ ಸಿ.ಎಸ್.ಮಂಜುನಾಥ್ (ಅಪ್ಪಾಲು), ಓ.ಬಿ.ಸಿ.ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಗೋವಿಂದ ರಾಜು,ರಾಜ್ಯ ಓ.ಬಿ.ಸಿ. ಕೋಶಾಧ್ಯಕ್ಷ ಗೋವಿಂದ ನಾಯ್ಡು, ಓ.ಬಿ.ಸಿ.ರಾಜ್ಯ ಕಾರ್ಯಕಾರಣಿ ಸದಸ್ಯ ಕಿರಣ್ ಮತ್ತು ಶ್ರೀಧರ್, ಜಿಲ್ಲಾ ಓ.ಬಿ.ಸಿ.ಪ್ರಧಾನ ಕಾರ್ಯದರ್ಶಿ ಜಿ.ಎ.ಲಕ್ಷ್ಮಿಪತಿ ಮತ್ತು ಆಂಜನೇಯ ಗೌಡ.ಕೆ.ಎಂ, ಜಿಲ್ಲಾ ಓ.ಬಿ.ಸಿ.ಕಾರ್ಯದರ್ಶಿ ಎಸ್‌ಆರ್‌ಎಸ್ ದೇವರಾಜ, ಜಿಲ್ಲಾ ಕಾರ್ಯದರ್ಶಿ ಆರ್.ಎನ್.ಅಶೋಕ, ಚಿಕ್ಕಬಳ್ಳಾಪುರ ಗ್ರಾಮಾಂತರ ಮಂಡಲದ ಅಧ್ಯಕ್ಷ ಕೆ.ಎಸ್.ಕೃಷ್ಣ ರೆಡ್ಡಿ, ನಗರ ಮಾಧ್ಯಮ ಸಂಚಾಲಕ ಅರುಣ್ ರೆಬೆಲ್, ಸಹಸಂಚಾಲಕ ವಿಜಯ್, ಯುವಮೋರ್ಚಾ ಮನೋಜ್ ಹಾಗೂ ಜಿಲ್ಲೆಯ ಓ.ಬಿ.ಸಿ.ಮೋರ್ಚಾ ಎಲ್ಲಾ ಮಂಡಲದ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಭಾಗವಹಿಸಿದರು.
ಸುಧಾಕರ್ ಮಂತ್ರಿ ಸ್ಥಾನ
ಜಿಲ್ಲೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಶಾಸಕರಾಗಿ ಆಯ್ಕೆಗೊಂಡು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಪ್ರಮುಖ ಕಾರಣಕರ್ತರಾದ ಡಾ.ಕೆ.ಸುಧಾಕರ್‌ಗೆ ನೂತನ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಮಂತ್ರಿ ಸ್ಥಾನ ಸಿಗಲಿದೆಯೆಂದು ಇದೇ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ವಿಶ್ವಾಸ ವ್ಯಕ್ತಪಡಿಸಿದರು.