ಆಸ್ತಿ ತೆರಿಗೆ ಬಾಕಿ: ಕೋಟಿ ಕೋಟಿ ಟ್ಯಾಕ್ಸ್‌ ಕಟ್ಟಿದ ಮಂತ್ರಿಮಾಲ್‌

By Kannadaprabha NewsFirst Published Feb 16, 2020, 8:04 AM IST
Highlights

9.22 ಕೋಟಿ ತೆರಿಗೆ ಕಟ್ಟಿದ ಮಂತ್ರಿ ಮಾಲ್‌ ಆಡಳಿತ ಮಂಡಳಿ| ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಮಂತ್ರಿಮಾಲ್‌ ಶಾಪಿಂಗ್‌ ಮಾಲ್| 

ಬೆಂಗಳೂರು(ಫೆ.16): ಮಲ್ಲೇಶ್ವರದ ಮಂತ್ರಿಮಾಲ್‌ನಿಂದ ಬರಬೇಕಿದ್ದ ಆಸ್ತಿ ತೆರಿಗೆ ಹಾಗೂ ಬಡ್ಡಿ ಮೊತ್ತ 9.22 ಕೋಟಿಗಳನ್ನು ಬಿಬಿಎಂಪಿ ಪಶ್ಚಿಮ ವಲಯದ ಕಂದಾಯ ಅಧಿಕಾರಿಗಳು ವಸೂಲಿ ಮಾಡಿದ್ದಾರೆ. 

2018-19ನೇ ಸಾಲಿನಿಂದ ಮಂತ್ರಿಮಾಲ್‌ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಬಡ್ಡಿ ಮೊತ್ತ ಸೇರಿ ಒಟ್ಟು 9.22 ಕೋಟಿ ವಸೂಲಿ ಮಾಡಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರತಿ ವಲಯದಲ್ಲೂ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರ ಪಟ್ಟಿಸಿದ್ಧಪಡಿಸಿಕೊಳ್ಳಲಾಗಿದ್ದು, ಆದ್ಯತೆಯ ಮೇಲೆ ಆಸ್ತಿ ತೆರಿಗೆ ವಸೂಲಿ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ತಿಳಿಸಿದ್ದಾರೆ.
 

click me!