ಮಂತ್ರಿ ಅಪಾರ್ಟ್‌ಮೆಂಟ್‌ ಜಾಗ ಒತ್ತುವರಿ ಖಚಿತ

By Kannadaprabha NewsFirst Published Mar 10, 2020, 9:08 AM IST
Highlights

 ಮಂತ್ರಿ ಮಾಲ್‌ ಮತ್ತು ಮಂತ್ರಿ ಗ್ರೀನ್‌ ವಸತಿ ಸಮುಚ್ಚಯ ನಿರ್ಮಾಣಕ್ಕಾಗಿ ಬಿಬಿಎಂಪಿಗೆ ಸೇರಿದ ನಾಲ್ಕು ಎಕರೆ ಪ್ರದೇಶ ಒತ್ತುವರಿಯಾಗಿರುವುದು ಖಚಿತಪಟ್ಟಿದೆ. ಈ ಸಂಬಂಧ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಸಲ್ಲಿಸಿರುವ ವರದಿಯಲ್ಲಿ ಈ ಅಂಶ ಉಲ್ಲೇಖಿಸಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ತಿಳಿಸಿದ್ದಾರೆ.

ಬೆಂಗಳೂರು(ಮಾ.10): ಮಂತ್ರಿ ಮಾಲ್‌ ಮತ್ತು ಮಂತ್ರಿ ಗ್ರೀನ್‌ ವಸತಿ ಸಮುಚ್ಚಯ ನಿರ್ಮಾಣಕ್ಕಾಗಿ ಬಿಬಿಎಂಪಿಗೆ ಸೇರಿದ ನಾಲ್ಕು ಎಕರೆ ಪ್ರದೇಶ ಒತ್ತುವರಿಯಾಗಿರುವುದು ಖಚಿತಪಟ್ಟಿದೆ. ಈ ಸಂಬಂಧ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಸಲ್ಲಿಸಿರುವ ವರದಿಯಲ್ಲಿ ಈ ಅಂಶ ಉಲ್ಲೇಖಿಸಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ತಿಳಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒತ್ತುವರಿಯಾದ ಪ್ರದೇಶದಲ್ಲಿ ಎರಡು ವಸತಿ ಸಮುಚ್ಛಯ ನಿರ್ಮಾಣವಾಗಿದೆ. ಈ ವಸತಿ ಸಮುಚ್ಛಯದಲ್ಲಿ ಜನವಾಸವಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನಿಮ್ಮ ಆಧಾರ್‌, ನಿಮ್ಮ ಬೆರಳಚ್ಚು, ಸಿಮ್ ಮಾತ್ರ ವಿದೇಶಿಗರಿಗೆ..!

ಬಿಬಿಎಂಪಿಯ ಅಧಿಕಾರಿಗಳಿಂದ ಮಂತ್ರಿ ಮಾಲ್‌ ಮತ್ತು ಮಂತ್ರಿ ಗ್ರೀನ್‌ ವಸತಿ ಸಮುಚ್ಚಯದ ಸರ್ವೇಯ ಮಹಜರು ಪ್ರತಿ, ಸ್ಥಳೀಯ ಅಭಿಪ್ರಾಯ ಸೇರಿದಂತೆ ಸಂಪೂರ್ಣ ವಿವರ ಕೇಳಲಾಗಿದ್ದು, ಈ ದಾಖಲೆಗಳು ಬಂದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.Manthri apartment site clearance confirmed

click me!