ಕೇವಲ ಮಾತನಾಡುವುದೇ ಸಾಧನೆಯಾಗದೆ ನಾವು ಮಾಡಿದಂತ ಸಾಧನೆಗಳು ಎಲ್ಲರ ಮಾತಿನೊಳಗಿರಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಬೈಲಹೊಂಗಲ (ಸೆ.30): ಕೇವಲ ಮಾತನಾಡುವುದೇ ಸಾಧನೆಯಾಗದೆ ನಾವು ಮಾಡಿದಂತ ಸಾಧನೆಗಳು ಎಲ್ಲರ ಮಾತಿನೊಳಗಿರಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು. ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ಮಾಜಿ ಶಾಸಕ, ಮಾಜಿ ವಿಪ ಸದಸ್ಯ ದಿ.ಬಾಬುರಾವ್ ಬೋಳಶೆಟ್ಟಿಯವರ 18ನೇ ಪುಣ್ಯ ಸ್ಮರಣೆ ಹಾಗೂ ಸಜ್ಜನ ರಾಜಕಾರಣಿ ಬಿ.ಎ.ಬೋಳಶೆಟ್ಟರು ಜೀವನಗಾಥೆ ಪುಸ್ತಕ ಲೋಕಾರ್ಪಣೆ ನಿಮಿತ್ತ ಗುರುವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಮನುಷ್ಯನ ಜೀವ ಮತ್ತು ಜೀವನ ಯಾವುದು ಶಾಶ್ವತವಲ್ಲ.
ಆದರೆ, ಸಮಾಜದ ಒಳಿತಿಗಾಗಿ ನಾವು ಕೊಟ್ಟ ಉತ್ತಮ ಕೊಡುಗೆಗಳು ಮಾತ್ರ ಶಾಶ್ವತವಾಗಿರುತ್ತವೆ ಎಂಬುವುದಕ್ಕೆ ದಿವಂಗತ ಬಿ.ಎ.ಬೋಳಶೆಟ್ಟಿಯವರು ಈ ನಾಡಿಗೆ ನೀಡಿದ ಅಮೂಲ್ಯ ಸೇವಾ ಕಾರ್ಯಗಳೆ ಸಾಕ್ಷಿ. ಈ ಭಾಗದ ಶ್ರೇಯಸ್ಸಿಗಾಗಿ ಬೋಳಶೆಟ್ಟಿಯವರು ಕಂಡ ಕನಸುಗಳನ್ನು ಸಾಕಾರಗೊಳಿಸಲು ಎಲ್ಲರೂ ಶ್ರಮಿಸಬೇಕು ಎಂದು ತಿಳಿಸಿದರು. ಬಿ.ಎ.ಬೋಳಶೆಟ್ಟಿಯವರ ಪುತ್ರಿ ಉಗಾರಕುರ್ದದ ಪ್ರೇಮಾ ಕಾಗೆ ತಂದೆಯವರ ಸರಳತೆ ಬಗ್ಗೆ ಅನುಭವ ಹಂಚಿಕೊಂಡರು.
ಮೋಡ ಬಿತ್ತನೆ ಕನಸು ಈಡೇರಿಕೆ: ಸಚಿವ ಸತೀಶ ಜಾರಕಿಹೊಳಿ ಹರ್ಷ
ಸಂಸದೆ ಮಂಗಲ ಅಂಗಡಿ, ಶಾಸಕರಾದ ಮಹಾಂತೇಶ ಕೌಜಲಗಿ, ಬಾಬಾಸಾಹೇಬ್ ಪಾಟೀಲ, ವಿಪ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಾಜಿ ಶಾಸಕರಾದ ಜಗದೀಶ ಮೆಟಗುಡ್ಡ, ಮಹಾಂತೇಶ ದೊಡ್ಡಗೌಡ್ರ ಮಾತನಾಡಿ, ಇಂದಿನ ಯುವ ಪೀಳಿಗೆ ಬೋಳಶೆಟ್ಟಿಯವರ ಆದರ್ಶ, ಸರಳತೆ ಮತ್ತು ಸಮಾಜ ಸೇವಾಗುಣಗಳನ್ನು ಅವರ ಜೀವನಗಾಥೆ ಪುಸ್ತಕ ಓದಿ ಅರಿತುಕೊಳ್ಳಬೇಕು ಎಂದರು. ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬಸವರಾಜ ಬಾಳೆಕುಂದರಗಿ, ಮುಖಂಡರಾದ ಪಂಚನಗೌಡ ದ್ಯಾಮನಗೌಡರ, ಧಾರವಾಡ ಸಹಾಯಕ ಕೃಷಿ ನಿರ್ದೇಶಕ, ಸಾಹಿತಿ ಚನ್ನಪ್ಪ ಅಂಗಡಿ ಮಾತನಾಡಿದರು.
ಇಂಡಿಯಾ ಒಕ್ಕೂಟಕ್ಕಾಗಿ ತಮಿಳುನಾಡಿಗೆ ಕಾವೇರಿ ನೀರು: ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪ
ಖ್ಯಾತ ಸಾಹಿತಿ ಡಾ.ನಿರ್ಮಲಾ ಬಟ್ಟಲ ಪುಸ್ತಕ ಪರಿಚಯಿಸಿದರು. ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಾಜು ಬೋಳಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಿರೇಮಠದ ಜಡಿಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಪುಸ್ತಕ ಬರೆದ ಸಾಹಿತಿ ನಾಗೇಶ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ರಮೇಶ ಅಬ್ಬಾರ ಸ್ವಾಗತಿಸಿದರು. ಚಂದ್ರು ಮೇಟ್ಯಾಲ ಹಾಗೂ ಬಸನಗೌಡ ದೇಮನಗೌಡ್ರ ನಿರೂಪಿಸಿದರು. ಸಮಾರಂಭದ ಯಶಸ್ಸಿಗಾಗಿ ಸೇವಾ ಸಮಿತಿಯವರು ಶ್ರಮಿಸಿದರು. ಉಡಿಕೇರಿ ಹಾಗೂ ಸುತ್ತಲಿನ ಗ್ರಾಮಗಳ ಗಣ್ಯರು, ಜನಪ್ರತಿನಿಧಿಗಳು ಸಾವಿರಾರು ಜನರು ಭಾಗವಹಿಸಿದ್ದರು.