
ವರದಿ: ಮಮತಾ ಟಿಎಸ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು(ಜೂ.24): ರಂಗಭೂಮಿ ಕಲಾವಿದೆ ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಅವರು ಬೆಳೆದು ಬಂದ ರೀತಿಯೇ ವಿಶೇಷ. ಇದೀಗ ಮಂಜಮ್ಮ ಜೋಗತಿಯವರ ಜೀವನ ಚರಿತ್ರೆಯನ್ನು ಪುಸ್ತಕದ ರೂಪದಲ್ಲಿ ತರಲಾಗಿದೆ. ಪತ್ರಕರ್ತೆ ಹಾಗೂ ಲೇಖಕಿ ಹರ್ಷಾ ಭಟ್ ಅವರು ಮಂಜಮ್ಮ ಜೋಗತಿಯವರ ಜೀವನ ಚರಿತ್ರೆಯನ್ನು ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ. ಇಂದು ಪದ್ಮಶ್ರೀ ಮಂಜಮ್ಮ ಜೋಗತಿ ಅವರ ಪುಸ್ತಕ ಇಂದು ಬಿಡುಗಡೆಗೊಳಿಸಲಾಯ್ತು.
ಲೇಖಕಿ ಹರ್ಷಾ ಭಟ್ ಮಂಜಮ್ಮ ಅವರ ಬಗ್ಗೆ ಮಂಜುನಾಥ್ ಟು ಮಂಜಮ್ಮ ಎಂಬ ಬಗ್ಗೆ ಪುಸ್ತಕ ಬರೆದಿದ್ದು ಲೋಕಾರ್ಪಣೆಗೊಳಿಸಲಾಯ್ತು. ಮಂಜುನಾಥ್ ಟು ಮಂಜಮ್ಮ ಎಂಬ ಇಂಗ್ಲಿಷ್ ಪುಸ್ತಕವನ್ನು ಹಿರಿಯ ನಟ ನಿರ್ದೇಶಕ ಪ್ರಕಾಶ್ ಬೆಳವಾಡಿ ಬಿಡುಗಡೆ ಮಾಡಿದ್ರು. ಬನಶಂಕರಿ ಸುಚಿತ್ರಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಜಮ್ಮ ಜೋಗತಿ ಹಾಗೂ ಹರ್ಷಾ ಭಟ್ ಸೇರಿದಂತೆ ಹಲವರು ಭಾಗಿಯಾಗಿದ್ರು. ಮಂಜಮ್ಮ ಜೋಗತಿಯವರ ಜೀವನ ಚರಿತ್ರೆಯನ್ನು ಆಧರಿಸಿ ಬರೆದ ಪುಸ್ತಕ 400 ರೂ. ಗೆ ಸಿಗಲಿದೆ.
Vijayanagara| Padma Shri ಪುರಸ್ಕೃತೆ ಮಂಜಮ್ಮ ಜೋಗತಿಗೆ ಜಿಲ್ಲಾಡಳಿತದಿಂದ ಸನ್ಮಾನ
ಇಂಗ್ಲಿಷ್ ಪುಸ್ತಕದಲ್ಲಿ ಕನ್ನಡದ ಕಂಪು ಇದೆ
ಜೋಗತಿ ಮಂಜಮ್ಮ ಅವರ ಮಂಜುನಾಥ್ ಟು ಮಂಜಮ್ಮ ಪುಸ್ತಕ ಇಂಗ್ಲಿಷ್ ನಲ್ಲಿದೆ. ಪುಸ್ತಕ ಇಂಗ್ಲಿಷ್ ನಲ್ಲಿದ್ರು ಎಲ್ಲೂ ಕಷ್ಟ ಅನ್ನಿಸೋದಿಲ್ಲ. ಕನ್ನಡದ ಕಂಪನ್ನು ಪಸರಿಸುವಂತೆ ಓದಿಸಿಕೊಂಡು ಹೋಗುತ್ತೆ. ಪುಸ್ತಕದಲ್ಲಿ ಜೋಗತಿ ಮಂಜಮ್ಮ ಅವರ ಜೀವನದಲ್ಲಿ, ನಡೆದ ಕೆಲ ತಪ್ಪುಗಳು ಅದರಿಂದ ಎಚ್ಚೆತ್ತುಕೊಂಡ ಬಗೆ ಹೇಗೆ ಎಂಬುದನ್ನು ಕಣ್ಣಿಗೆ ಕಟ್ಟಿಕೊಡುವಂತೆ ಬರೆಯಲಾಗಿದೆ. ಓದುತ್ತಿದ್ದಂತೆ ಕಣ್ಣೀರು ತರಿಸಿತ್ತು. ಹಳ್ಳಿಯಲ್ಲಿ ಜನ ಲಿಂಗತ್ವ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಂಡ್ರು? ಭಿಕ್ಷಾಟನೆ ಮಾಡಿದಾಗ ಜನ ಹೇಗೆ ಹಿಯಾಳಿಸ್ತಿದ್ರು ಎಂಬುದನ್ನು ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ ಅಂತಾ ನಟ ಪ್ರಕಾಶ್ ಬೆಳವಾಡಿ ಹೇಳಿದ್ರು.
ತೃತೀಯ ಲಿಂಗಿ ಮಕ್ಕಳನ್ನು ದೂರ ಮಾಡದಿರಿ
ಇನ್ನು ಈ ವೇಳೆ ಮಾತನಾಡಿದ ಮಂಜಮ್ಮ ಜೋಗತಿ ಭಿಕ್ಷಾಟನೆ ಮಾಡ್ತಿದ್ದ ಸಮಯದಲ್ಲಿ ಜನ ಹೇಗೆ ನಡೆಸಿಕೊಳ್ತಿದ್ರು ಅದ್ರಿಂದ ಹೇಗೆ ಪಾಠ ಕಲಿತೆ ಎಂಬ ಮನದಾಳದ ಮಾತನ್ನು ಮಂಜಮ್ಮ ಬಿಚ್ಚಿಟ್ರು . ಒಂದು ಬಾರಿ ಅತ್ಯಾಚಾರ ಮಾಡಿದ್ರು. ಇದರಿಂದ ಬೇಸತ್ತು ಸಾಯ್ಬೇಕು ಎಂದು ನಿರ್ಧಾರ ಮಾಡಿದ್ದೆ. ಆದ್ರೆ ಸಾಯೋದು ಉತ್ತರವಲ್ಲ, ಪುರುಷ ಸಮಾಜವನ್ನು ಮೆಟ್ಟಿ ನಿಲ್ಬೇಕು ಎಂದು ನಿರ್ಧಾರ ಮಾಡಿದ್ದೆ. ಹೀಗಾಗಿ ಹಲವು ಹೆಣ್ಮಕ್ಕಳಿಗೆ ಸಹಾಯ ಮಾಡಿದ್ದೇನೆ. ಹೆಣ್ಮಕ್ಕಳ ಪರ ನಿಂತು ಉತ್ತಮ ಸ್ಥಾನಕ್ಕೆ ತಂದು ನಿಲ್ಲಿಸಿದ್ದೇನೆ ಎಂಬ ಹೆಮ್ಮೆಯಿದೆ ಅಂತಾರೆ ಮಂಜಮ್ಮ ಜೋಗತಿ. ತೃತೀಯ ಲಿಂಗಿ ಮಕ್ಕಳನ್ನು ದೂರ ಮಾಡದೆ, ಎಲ್ಲಾ ಮಕ್ಕಳಂತೆ ಸಲಹಿ ಎಂದು ಮಂಜಮ್ಮ ಕಣ್ಣೀರು ಹಾಕಿದ್ರು.
ಫುಟ್ಪಾತ್ ಟು ಪದ್ಮಶ್ರೀ
ಫುಟ್ಪಾತ್ ನಲ್ಲಿದ್ದ ಮಂಜಮ್ಮ ಜೋಗತಿ ಎಲ್ಲಾ ಸೋಲುಗಳನ್ನು ಹಿಯಾಳಿಸಿದವರನ್ನು ಬೆಳೆದು ನಿಂತಿದ್ದಕ್ಕೆ ಸಾಕ್ಷಿ ಪದ್ಮಶ್ರೀ. ಪದ್ಮಶ್ರೀ ಪಡೆದಂದು ಮಂಜಮ್ಮ ಬಗ್ಗೆ ಕಥೆ ಬರಿಬೇಕು. ಅವರ ಬಗ್ಗೆ ಅಧ್ಯಯನ ಮಾಡಲು ನಿರ್ಧಾರ ಮಾಡಿದ್ದ ಲೇಖಕಿ ಹರ್ಷಾ ಭಟ್. ಕಳೆದ ಒಂದು ವರ್ಷದಿಂದ ಮಂಜಮ್ಮನ ಜೀವನದ ಬಗ್ಗೆ ಅಧ್ಯಯನ ನಡೆಸಿ ಪುಸ್ತಕ ಬರೆದಿರುವ ಹರ್ಷಾ ಅವರ ಜೀವನ ಚರಿತ್ರೆ ಎಲ್ಲರಿಗೂ ಸ್ಪೂರ್ತಿ ಅಂತಾರೆ. ತೃತೀಯ ಲಿಂಗಿಗಳ ಜೀವನದಲ್ಲಿ ಯಾವ ರೀತಿ ಏಳು ಬೀಳಿಗಳಿವೆ. ಅದರಿಂದ ಆಚೆ ಬರಲು ಅವರು ಪಡುವ ಕಷ್ಟಗಳೆಷ್ಟು ಎಂಬ ಬಗ್ಗೆ ತಿಳಿದುಕೊಂಡೆ. ಮಂಜಮ್ಮ ಬಗ್ಗೆ ಪುಸ್ತಕ ಬರೆದಿರೋದು ನನಗೆ ಖುಷಿ ತಂದಿದೆ ಅಂತಾ ಲೇಖಕಿ ಹರ್ಷ ಸಂತಸ ವ್ಯಕ್ತಪಡಿಸಿದ್ರು.