Horticulture crop : ತೋಟಗಾರಿಕೆ ಬೆಳೆ ಹವಾಮಾನ ಆಧಾರಿತ ವಿಮೆಯಿಂದ ವಂಚಿತ

By Kannadaprabha NewsFirst Published Jun 24, 2023, 9:01 PM IST
Highlights

ಶುಂಠಿ, ಅಡಕೆ, ಹಸಿಮೆಣಸಿನಕಾಯಿ, ಕ್ಯಾಬೀಜ ಸೇರಿದಂತೆ ಇನ್ನಿತರ ತೋಟಗಾರಿಕೆ ಬೆಳೆಗಳು ಹವಾಮಾನ ಆಧಾರಿತ ವಿಮೆಯಿಂದ ವಂಚಿತವಾಗಿದೆ. ಇದರಲ್ಲಿ ಆಗಿರುವ ಲೋಪದೋಷ ಸರಿಪಡಿಸದಿದ್ದಲ್ಲಿ ಬೆಳೆವಿಮೆ ವ್ಯವಸ್ಥೆಯನ್ನೇ ತಿರಸ್ಕರಿಸುವುದಾಗಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಬ್ಯಾಡಗಿ (ಜೂ.24) ಶುಂಠಿ, ಅಡಕೆ, ಹಸಿಮೆಣಸಿನಕಾಯಿ, ಕ್ಯಾಬೀಜ ಸೇರಿದಂತೆ ಇನ್ನಿತರ ತೋಟಗಾರಿಕೆ ಬೆಳೆಗಳು ಹವಾಮಾನ ಆಧಾರಿತ ವಿಮೆಯಿಂದ ವಂಚಿತವಾಗಿದೆ. ಇದರಲ್ಲಿ ಆಗಿರುವ ಲೋಪದೋಷ ಸರಿಪಡಿಸದಿದ್ದಲ್ಲಿ ಬೆಳೆವಿಮೆ ವ್ಯವಸ್ಥೆಯನ್ನೇ ತಿರಸ್ಕರಿಸುವುದಾಗಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಲಿನ ಬೆಳೆಗಳನ್ನು ಮಂಗಾರಿಗಿಂತಲೂ ಮುಂಚಿತವಾಗಿ ಚಿತ್ತನೆ ಮಾಡಲಾಗಿದೆ. ಆದರೆ ಮಳೆ ಕೊರತೆಯಿಂದ ಬೆಳೆಗಳು ರೈತನ ಕೈ ಸೇರುವ ಸಾಧ್ಯತೆ ಇಲ್ಲ. ಹೀಗಾಗಿ ಹವಾಮಾನ ಆಧಾರಿತ ವಿಮೆ ಸೌಲಭ್ಯದಿಂದ ಜಿಲ್ಲೆಯ ರೈತರು ವಂಚಿತರಾಗಿದ್ದಾರೆ ಎಂದು ಆರೋಪಿಸಿದರು.

ಚಿಕ್ಕಮಗಳೂರು: ತೆಂಗು ಬೆಳೆಗೆ ಕಪ್ಪು ತಲೆ ಹುಳುವ ಬಾಧೆ: ರೈತರ ಆತಂಕ

ಶುಂಠಿ, ಅಡಕೆ, ಹಸಿ ಮೆಣಸಿನಕಾಯಿ, ಕ್ಯಾಬೀಜ ಇನ್ನಿತರ ಬೆಳೆಗಳಿಗೆ ಹವಾಮಾನ ಆಧಾರಿತ ವಿಮೆ ತುಂಬಬೇಕಾದ ಕಂಪನಿಯ ಮಾಹಿತಿ ನೀಡಿಲ್ಲ. ಆದಾಗ್ಯೂ ಗ್ರಾಮ-1 ಸೇವಾ ಕೇಂದ್ರದ ವೆಬ್‌ಸೈಟ್‌ನಲ್ಲಿ ಜೂ. 30 ಅಂತಿಮ ದಿನವೆಂದು ಪ್ರಕಟಿಸಲಾಗಿದೆ. ಇದರ ಮಾಹಿತಿ ಕೊರತೆಯಿಂದ ರೈತರು ಬೆಳೆವಿಮೆ ತುಂಬಲು ಸಾಧ್ಯವಾಗಿಲ್ಲ. ಕೃಷಿ ಇಲಾಖೆ ಮತ್ತು ಸರ್ಕಾರ ಇಂತಹ ಅವಾಂತರ ಸೃಷ್ಟಿಸುವುದನ್ನು ನಿಲ್ಲಿಸಬೇಕು. ಕೂಡಲೇ ತಮ್ಮ ನಿರ್ಧಾರವನ್ನು ಮರು ಪರಿಶೀಲಿಸಲು ಮನವಿ ಮಾಡಿದರು.

ತೋಟಗಾರಿಕೆ ಬೆಳೆಗಳನ್ನು ಮೂರ್ನಾಲ್ಕು ತಿಂಗಳ ಹಿಂದೆಯೇ ಬಿತ್ತನೆ ಮಾಡಲಾಗಿದೆ, ಆದರೆ ಅಂದಿನಿಂದ ಇಂದಿನ ವರೆಗೂ ಸಮಪರ್ಕವಾಗಿ ಮಳೆಯಾಗಿಲ್ಲ. ಹೀಗಾಗಿ ಬಿತ್ತನೆ ಮಾಡಿದ ದಿನವನ್ನೇ ಪರಿಗಣಿಸಿ ವಿಮೆ ತುಂಬಿಸಿಕೊಳ್ಳಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ತೋಟಗಾರಿಕೆ ಬೆಳೆಗಳಿಗೆ ಹವಾಮಾನ ಆಧಾರಿತ ವಿಮೆ ತುಂಬಿಸಿಕೊಳ್ಳಲು ಹಾವೇರಿ ಜಿಲ್ಲೆಗೆ ಯಾರೊಬ್ಬರು ಟೆಂಡರ್‌ ಹಾಕಿಲ್ಲ. ಇದರರ್ಥ ಜಿಲ್ಲೆಯಲ್ಲಿ ರೈತರು ಹಣ ತುಂಬುವುದಿಲ್ಲವೇ ಅಥವಾ ಪರಿಹಾರ ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ಟೆಂಡರ್‌ ಹಾಕಿಲ್ಲವೇ? ಎಂದು ಪ್ರಶ್ನಿಸಿದರು.

ದಿಢೀರನೆ ಏರಿದ ಬಾಳೆಕಾಯಿ ದರ; ಶ್ರಾವಣ ಮಾಸಕ್ಕೂ ಮುನ್ನ ಏರಿಕೆ ಬಿಸಿ!

ಸುದ್ದಿಗೋಷ್ಠಿಯಲ್ಲಿ ಫಕೀರೇಶ ಅಜಗೊಂಡರ, ಸಂಜೀವ ಬಿಷ್ಟಣ್ಣನವರ, ವಿರೂಪಾಕ್ಷಪ್ಪ ಹಿರೇಹಳ್ಳಿ, ಮೌನೇಶ ಕಮ್ಮಾರ, ಕಿರಣ ಗಡಿಗೋಳ ಇದ್ದರು.

ಬೆಳೆವಿಮೆ ಕಂಪನಿಗಳು ಸರ್ಕಾರದ ಜತೆ ಕೈಜೋಡಿಸಿ ಹಣ ಮಾಡಿಕೊಳ್ಳುತ್ತಿವೆ. ಈ ಕಾರಣದಿಂದಲೇ ಹವಾಮಾನ ಆಧಾರಿತ ಬೆಳೆವಿಮೆಗೆ ಟೆಂಡರ್‌ ಹಾಕದಂತೆ ನೋಡಿಕೊಂಡಿದ್ದು ರೈತರ ಜೇಬಿನಿಂದ ಹಣ ಕೀಳುವಂತಹ ವ್ಯವಸ್ಥೆಗಿಳಿದಿವೆ.

ರುದ್ರಗೌಡ ಕಾಡನಗೌಡ್ರ ರೈತ ಸಂಘದ ತಾಲೂಕಾಧ್ಯಕ್ಷ

ಜಿಲ್ಲೆಯಲ್ಲಿ ಮಳೆಯಾಗದೆ ಕಂಗಾಲಾದ ರೈತರು ಬೆಳೆ ನಾಶ ಮಾಡುತ್ತಿದ್ದಾರೆ. ಇಷ್ಟಾದರು ಜಿಲ್ಲಾಡಳಿತ ರೈತರ ಹೊಲಕ್ಕೆ ಭೇಟಿ ಸೌಜನ್ಯಕ್ಕೂ ಸಾಂತ್ವನದ ಮಾತು ಹೇಳಿಲ್ಲ. ಕೂಡಲೇ ಜಿಲ್ಲಾಧಿಕಾರಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಲ್ಲಿ ಬೆಳೆ ನಾಶಪಡಿಸಿದ ರೈತರಿಗೆ ಪರಿಹಾರ ನೀಡಬೇಕು.

ಗಂಗಾಧರ ಎಲಿ ರೈತ ಮುಖಂಡ

click me!