ಇಂಡಿಯನ್ ಹೆಲ್ತ್ ಪ್ರೊಫೆಶನಲ್ ಪ್ರಶಸ್ತಿ ಬಾಚಿದ ಮಣಿಪಾಲ ವೈದ್ಯಕೀಯ ವಿದ್ಯಾರ್ಥಿನಿ

By Web Desk  |  First Published Jan 31, 2019, 7:27 PM IST

20 ವರ್ಷ ವಯಸ್ಸಿನ ಮಣಿಪಾಲ ವೈದ್ಯಕೀಯ ವಿದ್ಯಾರ್ಥಿಯ ಸಾಧನೆಗಳನ್ನು ಓದಿದರೇ ದಂಗಾಗಿ ಬಿಡುತ್ತಿರಿ, ಈಕೆ ಇಂದು ರಾಷ್ಟ್ರ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿಯೂ  ಹೆಸರು ಮಾಡಿದ್ದಾರೆ. 


ಮಣಿಪಾಲ, [ಜ.31]: ಮಣಿಪಾಲ ಕಸ್ತೂರ್‌ಬಾ ಮೆಡಿಕಲ್ ಕಾಲೇಜಿನ 2ನೇ ವರ್ಷದ ವಿದ್ಯಾರ್ಥಿ ಪೂರ್ವಪ್ರಭ ಪಾಟೀಲ್ , ಗೋವಾದ ಪಣಿಜಿಯಲ್ಲಿ ಕಳೆದ ವಾರದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಡೆದ ಇಂಡಿಯನ್ ಹೆಲ್ತ್ ಪ್ರೊಫೆಶನಲ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ 2 ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. 

ದೇಶ -ವಿದೇಶದ 200 ವಿದ್ಯಾರ್ಥಿಗಳು ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಪೂರ್ವಪ್ರಭ ಅವರು ಸ್ಪರ್ಧೆಗಿದ್ದ ಮೂರೂ ವಿಭಾಗಗಳಲ್ಲಿ ನಾಮ ನಿರ್ದೇಶಿತರಾಗಿದ್ದು, ಅವುಗಳಲ್ಲಿ "ಔಟ್ ಸ್ಟ್ಯಾಂಡಿಂಗ್ ಮೆಡಿಕೋ ಆಫ್ ದ ಇಯರ್" ಮತ್ತು "ಎಮರ್ಜಿಂಗ್ ಮೆಡಿಕಲ್ ಸ್ಪೀಕರ್ ಅಫ್ ದ ಇಯರ್" ಪ್ರಶಸ್ತಿಗಳನ್ನು ಮುಡಿಗಿರಿಸಿಕೊಂಡಿದ್ದಾರೆ.

Latest Videos

undefined

"ಯಂಗ್ ಮೆಡಿಕಲ್ ಅಚಿವರ್ ಆಫ್ ದ ಇಯರ್" ಪ್ರಶಸ್ತಿಯನ್ನು ಕೂದಲೆಳೆಯಿಂದ ತಪ್ಪಿಸಿಕೊಂಡರು. ಹೆಲ್ತ್ ಇನ್ಫಾರ್ಮೆಶನ್ ಫಾರ್ ಆಲ್ (ಪಿಫಾ) ಎಂಬ ಜಗತ್ತಿನ  53 ಕಾಮನ್ ವೆಲ್ತ್ ದೇಶಗಳ 11 ಸಾವಿರ ಮಂದಿ ಸದಸ್ಯರಾಗಿರುವ ಸಂಸ್ಥೆಯ ಸಹ ನಿರ್ವಾಹಕಿಯಾಗಿದ್ದಾರೆ.
 
ಈ ಸಂಸ್ಥೆಯಲ್ಲಿ ವಿಶ್ವದಾದ್ಯಂತದ 11 ಸಾವಿರ ಸದಸ್ಯರಿದ್ದು, 10 ಮಂದಿಯ ನೀತಿ ಮತ್ತು ವಕಾಲತ್ತು ಸಮಿತಿಯಲ್ಲಿರುವ ಏಕೈಕ ಭಾರತೀಯರಾಗಿದ್ದಾರೆ. ಅಲ್ಲದೇ ಅವರು ಮೆಡಿಕಲ್ ಸ್ಟೂಡೆಂಟ್ಸ್  ಅಸೋಸಿಯೇಶನ್ ಅಫ್ ಇಂಡಿಯಾದ ಕಾರ್ಯಕಾರಣಿ ಮಂಡಳಿ ಮತ್ತು ಪದಾಧಿಕಾರಿಗಳ ತಂಡದ ಸದಸ್ಯೆಯೂ ಆಗಿದ್ದಾರೆ. 

ಈ ಸಂಘಟನೆಯಲ್ಲಿ ದೇಶದ 24 ಸಾವಿರ ವೈದ್ಯಕೀಯ ವಿದ್ಯಾರ್ಥಿಗಳಿದ್ದಾರೆ. ಅವರು ಇಂಟರ್ನ್ಯಾಷನಲ್ ಜರ್ನಲ್ ಫಾರ್ ಮೆಡಿಕಲ್ ಸ್ಟೂಡೆಂಟ್ಸ್ ನ ಭಾರತೀಯ ರಾಜಭಾರಿಯೂ ಆಗಿದ್ದಾರೆ. 

ಅವರು ತಮ್ಮ 18ನೇ ವಯಸ್ಸಿನಲ್ಲಿಯೇ ದೇಶದ ನಾಗರಿಕ ಸೌಲಭ್ಯಗಳಿಂದ ವಂಚಿತ ಜನರಿಗಾಗಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದಕ್ಕಾಗಿ ಹುಟ್ಟು ಹಾಕಲಾಗಿರುವ ಲ್ಯುಮಿನಾ ವಿಟೆಯ ಸಹ ಸಂಸ್ಥಾಪಕಿಯೂ ಆಗಿದ್ದಾರೆ.  

ಗೋವಾದ ಖ್ಯಾತ ವೈದ್ಯರಾದ ಡಾ.ರಾಧಾರಾಣಿ ಪಾಟೀಲ್ ಎಂಬವರ ಮಗಳಾದ ಪೂರ್ವಪ್ರಭ ಅವರು ಕಳೆದ ವರ್ಷ ವಿಶ್ವಸಂಸ್ಥೆಯಲ್ಲಿ ಸುಸ್ಥಿರ ಅಭಿವೃದ್ದಿಯ ಗುರಿಗಳು ಎಂಬ ವಿಚಾರಸಂಕಿರಣದಲ್ಲಿ ಏಶಿಯಾವನ್ನು ಪ್ರತಿನಿಧಿಸಿದ್ದ ಪ್ರಥಮ ಅತೀಕಿರಿಯ, 18 ವರ್ಷದ ವಿದ್ಯಾರ್ಥಿಯಾಗಿದ್ದರು.

click me!