ಇವಿ ಸ್ಕೂಟರ್‌ನಲ್ಲಿ 12,111 ಕಿ.ಮೀ. ಕ್ರಮಿಸಿ ಡಬ್ಬಲ್‌ ದಾಖಲೆ ಬರೆದ ಕುಡ್ಲದ ಕುವರ!

Published : Jul 11, 2026, 08:45 AM IST
Electric Scooter

ಸಾರಾಂಶ

ಮಂಗಳೂರಿನ ಆಟೋಮೊಬೈಲ್ ಪತ್ರಕರ್ತ ಗಿರೀಶ್ ಶೇಟ್, ಇವಿ ಸ್ಕೂಟರ್‌ನಲ್ಲಿ 12,111 ಕಿ.ಮೀ. ಕ್ರಮಿಸಿ ಎರಡು ದಾಖಲೆಗಳನ್ನು ನಿರ್ಮಿಸಿದ್ದಾರೆ. 16 ರಾಜ್ಯಗಳಾದ್ಯಂತ 53 ದಿನಗಳ ಕಾಲ ಸಾಗಿದ ಈ ಪ್ರಯಾಣವು ಇವಿ ವಾಹನಗಳ ಬಗೆಗಿನ ತಪ್ಪು ಕಲ್ಪನೆಗಳನ್ನು ದೂರ ಮಾಡಿದ್ದು, ಅವರಿಗೆ 'ಇಂಡಿಯಾ' ಮತ್ತು 'ಏಷ್ಯಾ' ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ತಂದುಕೊಟ್ಟಿದೆ.

ಮಂಗಳೂರು: ಇವಿ(ಎಲೆಕ್ಟ್ರಿಕ್‌ ವೆಹಿಕಲ್) ಸ್ಕೂಟರ್ ಕೇವಲ ನಗರ ಸಂಚಾರಕ್ಕೆ ಮಾತ್ರ, ಬ್ಯಾಟರಿ ಸಮಸ್ಯೆ ತಪ್ಪುವುದಿಲ್ಲ ಎಂಬ ಭಾವನೆ ಜನಸಾಮಾನ್ಯರಲ್ಲಿದೆ. ಆದರೆ ಈ ಎಲ್ಲ ತಪ್ಪು ಕಲ್ಪನೆಯನ್ನು ಕುಡ್ಲದ ಈ ಕುವರ ಮುರಿದಿದ್ದಾರೆ‌. ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ ಮಾತ್ರವಲ್ಲ ‘ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ದಾಖಲೆ ಬರೆದಿದ್ದಾರೆ.

ಮಂಗಳೂರಿನ ಬಿಜೈ ನಿವಾಸಿ, ಆಟೋಮೊಬೈಲ್ ಜರ್ನಲಿಸ್ಟ್ ಗಿರೀಶ್ ಶೇಟ್ ಈ ಅಪರೂಪದ ದಾಖಲೆ ಮಾಡಿದವರು.

53 ದಿನಗಳ ಇವಿ ಸ್ಕೂಟರ್ ರೈಡ್

ಭಾರತದ 16 ರಾಜ್ಯಗಳನ್ನು ಇವಿ ಸ್ಕೂಟರ್‌ನಲ್ಲೇ ಇವರು ಕ್ರಮಿಸಿದ್ದಾರೆ. ಬೆಂಗಳೂರಿನಿಂದ ಪ್ರಯಾಣ ಆರಂಭಿಸಿದ ಇವರು ಚೆನ್ನೈಗೆ ಹೋಗಿದ್ದಾರೆ. ಅಲ್ಲಿಂದ ಕೋಲ್ಕತ್ತಾ, ಕೋಲ್ಕತ್ತಾ ಟು ಲಕ್ನೋ, ಲಕ್ನೋ ಟು ಹೈದರಾಬಾದ್, ಹೈದರಾಬಾದ್‌ನಿಂದ ದೆಹಲಿ. ಅಲ್ಲಿಂದ ಮತ್ತೆ ಕೋಲ್ಕತ್ತಾ, ಕೋಲ್ಕತ್ತಾದಿಂದ ಅಹಮದಾಬಾದ್, ಅಲ್ಲಿಂದ ಮತ್ತೆ ದೆಹಲಿಗೆ ಹೋಗಿ ತಮ್ಮ 53 ದಿನಗಳ ಇವಿ ಸ್ಕೂಟರ್ ರೈಡ್ ಅನ್ನು ಪೂರೈಸಿದ್ದಾರೆ.

ಏ.12 ರಂದು ಸುಡು ಬೇಸಿಗೆಯಲ್ಲಿ ಪ್ರಯಾಣ ಆರಂಭಿಸಿದ ಅವರು ಜೂ.15 ರಂದು ಸಾಧನೆ ಪೂರೈಸಿದ್ದಾರೆ.

ಏಪ್ರಿಲ್‌ನ ಬಿರುಬಿಸಿಲ 45 ಡಿ.ಸೆ. ಸೆಕೆಯ ಧಗೆಯನ್ನು ತಡೆದುಕೊಳ್ಳಬೇಕಾಯಿತು ಬಿಟ್ಟರೆ, ನನಗೆ ಇವಿ ಸ್ಕೂಟರ್ ಬ್ಯಾಟರಿ ಎಲ್ಲೂ ಕೈಕೊಡಲಿಲ್ಲ. ಒಂದು ಕಡೆ ನಡೆದ ಆ್ಯಕ್ಸಿಡೆಂಟ್ ಸ್ವಲ್ಪ ಹೊತ್ತು ಆಸ್ಪತ್ರೆಗೆ ದಾಖಲಾಗಿದ್ದು ಬಿಟ್ಟರೆ ಇವಿ ಸ್ಕೂಟರ್ ಪ್ರಯಾಣ ತನಗೆ ತ್ರಾಸ ಎನಿಸಲೇ ಇಲ್ಲ ಎಂಬುದು ಗಿರೀಶ್ ಶೇಟ್ ಅನುಭವ.

ಒಂದು ಚಾರ್ಜ್‌ನಲ್ಲಿ 100 ಕಿ.ಮೀ. ಪ್ರಯಾಣ

ಹೀರೋ ವೀಡಾ ವಿಎಕ್ಸ್ 2 ಇವಿ ಸ್ಕೂಟರ್ ಅನ್ನು ಈ ಜರ್ನಿಗೆ ಅವರು ಬಳಸಿಕೊಂಡಿದ್ದಾರೆ. ಇದು ಒಂದು ಚಾರ್ಜ್‌ನಲ್ಲಿ 100 ಕಿ.ಮೀ.ಗೂ ಅಧಿಕ ಓಡುತ್ತಿತ್ತು. ಹಾಗಾಗಿ ಎಲ್ಲಾದರೂ ಚಾರ್ಜಿಂಗ್ ಸೌಲಭ್ಯ ಇರುವಲ್ಲಿ ನಿಲ್ಲಿಸುತ್ತಿದ್ದೆ. ಮೊದಲೇ ಪ್ಲಾನಿಂಗ್ ಮಾಡಿಕೊಂಡು ಫಾಸ್ಟ್‌ಚಾರ್ಜ್ ಇರುವಲ್ಲಿ ಒಂದೂವರೆ ಗಂಟೆಯಲ್ಲಿ ಚಾರ್ಜ್ ಆಗುತ್ತಿತ್ತು, ಇಲ್ಲದ ಕಡೆ ಚಾರ್ಜಿಂಗ್ ಸಮಯದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೆ ಎನ್ನುತ್ತಾರೆ ಗಿರೀಶ್ ಶೇಟ್.

ಇದನ್ನೂ ಓದಿ: ಪೆಟ್ರೋಲ್‌ನಲ್ಲಿ ಎಥೆನಾಲ್‌ ಮಿಶ್ರಣ ಏಕೆ ಅಗತ್ಯ? ಕೇಂದ್ರದಿಂದ 6 ಅಂಶಗಳ ಸ್ಪಷ್ಟನೆ

ಕ್ರಿಕೆಟ್ ಪ್ರೇಮಿ ಗಿರೀಶ್ ಶೇಟ್, ಐಪಿಎಲ್‌ನ ಕೋಲ್ಕತ್ತಾ ನೈಟ್ ರೈಡರ್ಸ್(ಕೆಕೆಆರ್‌) ತಂಡದ ಅಧಿಕೃತ ಸ್ಪಾನ್ಸರ್ ಹೀರೋ ವೀಡಾ ಸಂಸ್ಥೆಯ ಬೆಂಬಲದಿಂದ ಈ ರೈಡ್ ನಡೆಸಿದ್ದರು. ಇವರ ಸಾಧನೆಯನ್ನು ಗೌರವಿಸಿ ಕೆಕೆಆರ್‌ ತಂಡ ಭಾರತಾದ್ಯಂತ ಮ್ಯಾಚ್ ವೀಕ್ಷಿಸಲು ಇವರಿಗೆ ‘ಗೋಲ್ಡನ್ ಟಿಕೆಟ್’ ನೀಡಿತ್ತು. ಆದ್ದರಿಂದ ಇಡೀ ಪ್ರಯಾಣದಲ್ಲಿ ಒಟ್ಟು 10 ಕೆಕೆಆರ್ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಿದ್ದರು. ಜೊತೆಗೆ ಈ ವಿಶಿಷ್ಟ ಸಾಧನೆಯಿಂದ ‘ಇಂಡಿಯಾ’ ಹಾಗೂ ‘ಏಷ್ಯಾ’ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ಬರೆದಿದ್ದಾರೆ.

ಇದನ್ನೂ ಓದಿ: ಇ20 ಪೆಟ್ರೋಲಿಂದ ಮೈಲೇಜ್‌ ಕುಸಿತ ನಿಜ, ಆದ್ರೆ ಎಥನಾಲ್‌ ರಹಿತ ಪೆಟ್ರೋಲ್‌ ಕೊಡಲ್ಲ: ಕೇಂದ್ರ ಸರ್ಕಾರ

PREV
Read more Articles on
click me!

Recommended Stories

ಇಂದಿನಿಂದ ಮುದ್ದೇಬಿಹಾಳ, ತಾಳಿಕೋಟೆ ಕೆರೆಗಳಿಗೆ ಆಲಮಟ್ಟಿ ಜಲಾಶಯದಿಂದ ನೀರು ಬಿಡುಗಡೆ
ಬರವಿದ್ದರೂ ಬತ್ತದ ರಾಮನಗರದ ನಾಲ್ಕು ಜಲಾಶಯಗಳು; ಅಪಾರ ನೀರು, ಅಂತರ್ಜಲ ಮಟ್ಟ ವೃದ್ಧಿ