ಮಂಗಳೂರು ಶಾಲೆ ಶಿಕ್ಷಕಿ ಪ್ರಭಾರನ್ನು ಬಂಧಿಸಿ, ಪೊಲೀಸರನ್ನು ಅಮಾನತು ಮಾಡಿ: ವಿಪಕ್ಷ ನಾಯಕ ಆರ್.ಅಶೋಕ ಆಗ್ರಹ

By Sathish Kumar KH  |  First Published Feb 15, 2024, 7:27 PM IST

ಹಿಂದೂ ಸಂಸ್ಕೃತಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಮಂಗಳೂರಿನ ಜೆರೋಸಾ ಶಾಲೆಯ ಸಿಸ್ಟರ್ ಪ್ರಭ ಅವರನ್ನು ಬಂಧಿಸಬೇಕು ಎಂದು ವಿಪಕಷ ನಾಯಕ ಆರ್. ಅಶೋಕ್ ಆಗ್ರಹಿಸಿದರು.


ಬೆಂಗಳೂರು  (ಫೆ.15): ಹಿಂದೂ ಸಂಸ್ಕೃತಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಮಂಗಳೂರಿನ ಜೆರೋಸಾ ಶಾಲೆಯ ಸಿಸ್ಟರ್ ಪ್ರಭ ಅವರನ್ನು ಬಂಧಿಸಬೇಕು. ಬಿಜೆಪಿ ಶಾಸಕರ ವಿರುದ್ಧ ಎಫ್ಐಆರ್ ದಾಖಲಿಸಿದ ಪೊಲೀಸರನ್ನು ಅಮಾನತುಗೊಳಿಸಬೇಕೆಂದು ವಿಧಾನಸಭಾ ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನ ಶಾಲೆಯಲ್ಲಿ ಸಿಸ್ಟರ್ ಪ್ರಭ ಅವರು, ಅಯೋಧ್ಯೆಯ ರಾಮ ಮಂದಿರ ಮಸೀದಿಯನ್ನು ಒಡೆದು ಕಟ್ಟಿದ್ದಾರೆ, ಕಲ್ಲಿನ ಕಟ್ಟಡ ನಿರ್ಮಿಸಿದ್ದಾರೆ, ಬಳೆ ತೊಡುವುದರಲ್ಲಿ ಪವಿತ್ರತೆ ಇಲ್ಲ ಎಂದೆಲ್ಲ ಶಾಲಾ ಮಕ್ಕಳಿಗೆ ಹೇಳಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆಯೂ ಅವಹೇಳನಕಾರಿಯಾಗಿ ಮಾತಾಡಿದ್ದಾರೆ. ಈ ಮೂಲಕ ಮಕ್ಕಳನ್ನು ಮತಾಂತರಗೊಳಿಸುವ ಪ್ರಯತ್ನ ನಡೆದಿದೆ. ಈ ಕುರಿತು ಮಕ್ಕಳು ಪೋಷಕರ ಬಳಿ ಹೇಳಿಕೊಂಡಿದ್ದಾರೆ. ಹಿಂದೂ ದೇವರು ಹಾಗೂ ಆಚರಣೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿರುವುದರಿಂದ ಶಾಸಕ ಭರತ್ ಶೆಟ್ಟಿ ಶಾಲೆಗೆ ಹೋಗಿ ದೂರು ನೀಡಿದ್ದಾರೆ ಎಂದರು.

Tap to resize

Latest Videos

ವಸತಿ ಶಾಲೆ, ಕಾಲೇಜುಗಳಲ್ಲಿ ಧಾರ್ಮಿಕ ಹಬ್ಬಗಳ ಆಚರಣೆ ನಿಷೇಧದ ಆದೇಶ ಹಿಂಪಡೆದ ಸರ್ಕಾರ!

ಈಗ ಯಾರೋ ವ್ಯಕ್ತಿ ಬಿಜೆಪಿಯ ಇಬ್ಬರು ಶಾಸಕರ ಮೇಲೆ ದೊಡ್ಡ ಪ್ರಕರಣ ದಾಖಲಿಸಿದ್ದಾರೆ. ಶಾಸಕ ಭರತ್ ಶೆಟ್ಟಿ ಸ್ಥಳದಲ್ಲೇ ಇಲ್ಲದಿದ್ದರೂ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಗೃಹ ಸಚಿವರು ಹೇಳುವಂತೆ, ದೂರು ಬಂದಿರುವುದರಿಂದ ಎಫ್ಐಆರ್ ದಾಖಲಾಗಿದೆ. ಇದಕ್ಕೂ ಎರಡು-ಮೂರು ದಿನಗಳ ಮುನ್ನವೇ ಪೋಷಕರು ದೂರು ನೀಡಿದ್ದರೂ ಅದು ದಾಖಲಾಗಿಲ್ಲ. ಆ ದೂರಿನ ಬಗ್ಗೆ ಪೊಲೀಸರು ಕ್ಯಾರೇ ಎನ್ನಲಿಲ್ಲ. ಕೋಮುಗಲಭೆ, ಪ್ರಧಾನಿಯವರನ್ನು ಹೀಯಾಳಿಸಿರುವುದಕ್ಕೆ ಯಾವುದೇ ಸೆಕ್ಷನ್ ದಾಖಲಿಸಿಲ್ಲ. ಆ ದೂರು ಬಾಕಿ ಇಟ್ಟು, ಒತ್ತಡದಿಂದ ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗ ಕರ್ನಾಟಕ ಪೊಲೀಸರ ಗೂಂಡಾಗಿರಿ ಹಾಗೂ ದೌರ್ಜನ್ಯದ ರಾಜ್ಯವಾಗಿದೆ. ನಾನು ಹುಬ್ಬಳ್ಳಿಗೆ ಹೋದಾಗಲೂ ಅವಾಚ್ಯ ಪದ ಬಳಸಿದ್ದೇನೆಂದು ಪ್ರಕರಣ ದಾಖಲಾಗಿದೆ. ಹಿಂದೂಗಳ ವಿರುದ್ಧ ಸರ್ಕಾರ ನಡೆಸುತ್ತಿರುವ ದೌರ್ಜನ್ಯವನ್ನು ಸದನದಲ್ಲಿ ಖಂಡಿಸಲಾಗಿದೆ. ಕೂಡಲೇ ಸಿಸ್ಟರ್ ಪ್ರಭ ಅವರ ಮೇಲೆ ಎಫ್ಐಆರ್ ದಾಖಲಿಸಿ ಬಂಧಿಸಬೇಕು. ಶಾಸಕರ ವಿರುದ್ಧ ಎಫ್ಐಆರ್ ದಾಖಲಿಸಿದ ಪೊಲೀಸರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.

ಶಿಕ್ಷಕಿ ಪ್ರಭಾ ರಾಮನ ಬಗ್ಗೆ ಮಾತನಾಡಿದಲ್ಲ ಎಂದು ಆಡಳಿತ ಸಂಸ್ಥೆ: 
ಮಂಗಳೂರು (ಫೆ.15): 
ಶಿಕ್ಷಕಿ ಪ್ರಭಾ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿಲ್ಲ. ಅವರನ್ನು ಕೆಲಸದಿಂದ ತೆಗೆದುಹಾಕಲು ಶಾಸಕ ವೇದವ್ಯಾಸ್ ಕಾಮತ್ ಅವರು ಆಡಳಿತವನ್ನು ಒತ್ತಾಯಿಸಿದ್ದರು. ಬೇರೆ ದಾರಿಯಿಲ್ಲದೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಪ್ರಭಾ ಅವರನ್ನು ಕೆಲಸದಿಂದ ತೆಗೆದುಹಾಕುವ ಹೇಳಿಕೆಯನ್ನು ನೀಡುವಂತಾಯಿತು ಎಂದು ಮಂಗಳೂರಿನ ಜೆರೋಸಾ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಅನಿತಾ ಸ್ಪಷ್ಟಪಡಿಸಿದರು.

ಶ್ರೀರಾಮನ ಅವಹೇಳನ ಮಾಡಿದ ಶಿಕ್ಷಕಿ ಮೇಲೆ ಕೇಸ್ ಇಲ್ಲ; ಜೈ ಶ್ರೀರಾಮ್ ಎಂದವರ ಮೇಲೆ ಎಫ್‌ಐಆರ್: ಶಾಸಕ ಭರತ್ ಶೆಟ್ಟಿ

ಶಿಕ್ಷಕಿ ಪ್ರಭಾ ಅಯೋಧ್ಯಾ ಶ್ರೀರಾಮನ ಅವಹೇಳನ ಮಾಡಿದ್ದಾರೆಂಬ ಆರೋಪ ಸಂಬಂದ ಇಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ಶಾಲೆಯು ಫೆಬ್ರವರಿ 8 ರಂದು ದುರದೃಷ್ಟಕರ ಮತ್ತು ದುಃಖದ ಘಟನೆಗೆ ಸಾಕ್ಷಿಯಾಗಿದೆ. ಇದು ಶಾಲೆಯ ಅಸ್ತಿತ್ವಕ್ಕೆ ಬಂದ 60 ವರ್ಷಗಳ ಇತಿಹಾಸದಲ್ಲೇ ಕೆಟ್ಟ ಘಟನೆಯಾಗಿದೆ. ಫೆಬ್ರವರಿ 10ರಂದು ನಾಲ್ವರು ಮುಖ್ಯೋಪಾಧ್ಯಾಯಿನಿಯರನ್ನು ಸಂಪರ್ಕಿಸಿದ್ದಾರೆ. ರವೀಂದ್ರನಾಥ ಟ್ಯಾಗೋರ್ ರಚಿಸಿದ ‘ಕೆಲಸವೇ ಆರಾಧನೆ’ ಕವನವನ್ನು ಬೋಧಿಸುವಾಗ ಶಿಕ್ಷಕಿ  ಪ್ರಭಾ ಅವರು ಹಿಂದೂ ಧರ್ಮ ಮತ್ತು ಪ್ರಧಾನ ಮಂತ್ರಿಯ ವಿರುದ್ಧ ಕೆಲವು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಗಿತ್ತು. ವಿಚಾರಣೆಯಲ್ಲಿ, ಸಂಬಂಧಪಟ್ಟ ಶಿಕ್ಷಕರು ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದರು ಎಂದರು.

click me!