ರಾತ್ರಿ ವಿಡಿಯೋ ಕಾಲ್ ಮಾಡಿದ ರಫೀಜನಿಗೆ ಬೆಳಗ್ಗೆ ಬೆರಣಿ ತಟ್ಟಿದ ಮಹಿಳೆಯರು!

By Sathish Kumar KH  |  First Published Oct 6, 2024, 6:47 PM IST

ವಿಡಿಯೋ ಕಾಲ್ ಮೂಲಕ ಹುಡುಗಿಗೆ ಕಿರುಕುಳ ನೀಡಿದ ಯುವಕನೊಬ್ಬನಿಗೆ ಮಹಿಳೆಯರು ಕಪಾಳಮೋಕ್ಷ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯುವಕನ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.


ಮಂಗಳೂರು (ಅ.06): ಮಧ್ಯಾಹ್ನ ಅಂಗಡಿಗೆ ಬಂದ ಹುಡುಗಿಯ ಬಳಿ ಮೊಬೈಲ್ ನಂಬರ್ ಇಸ್ಕೊಂಡ ರಫೀಜ್, ರಾತ್ರಿ ಆಗುತ್ತಿದ್ದಂತೆಯೇ ವಿಡಿಯೋ ಕಾಲ್ ಮಾಡಿ ಕಿರುಕುಳ ನೀಡಿದ್ದಾನೆ. ಬೆಳಗ್ಗೆ ಅಂಗಡಿ ತೆಗೆಯುತ್ತಿದ್ದಂತೆ ಅಂಗಡಿಗೆ ಬಂದ ಹುಡುಗಿಯ ಅಮ್ಮನ ರೌದ್ರಾವತಾರಕ್ಕೆ ಕೆನ್ನೆ ಮೇಲೆ ಅದೆಷ್ಟು ಬಾಸುಂಡೆ ಬಂದಿದಿಯೋ ನೀವೇ ಎಣಿಸಿಬಿಡಿ...

ಹೌದು, ವಯಸ್ಸಿಗೆ ಬಂದ ಹುಡುಗಿಯರ ಹಿಂದೆ ಬೆನ್ನುಬೀಳುವ ಯುವಕರ ದಂಡಿಗೆ ಕಡಿಮೆಯಿಲ್ಲ. ಪ್ರತಿ ಹಳ್ಳಿಗಳು, ನಗರ, ಪಟ್ಟಣಗಳ ಪ್ರತಿ ಏರಿಯಾದಲ್ಲಿಯೂ ಇಂತಹ ದೃಶ್ಯಗಳು ಕಂಡುಬರುತ್ತವೆ. ಆದರೆ, ಇದೆಲ್ಲವೂ ಇತಿಮಿತಿಯಾಗಿದ್ದರೆ ಚೆನ್ನ. ಮಿತಿ ಮೀರಿದರೆ ಆಪತ್ತು ಮಾತ್ರ ತಪ್ಪಿದ್ದಲ್ಲ. ಮಾಡಬಾರದನ್ನು ಮಾಡಿದರೆ ಧರ್ಮದೇಟು ತಿನ್ನುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವೇ ಇಲ್ಲ. ಹೀಗಾಗಿ, ಹಿರಿಯರು ಎಲ್ಲ ಯುವಕರಿಗೆ ಯೌವನಾವಸ್ಥೆಗೆ ಬರುತ್ತಿದ್ದಂತೆಯೇ ಬುದ್ಧಿ ಹೇಳುವುದು ಹೆಚ್ಚಾಗುತ್ತದೆ. ಅವರ ಮಾತನ್ನು ಕೇಳದಿದ್ದರೆ ಹೀಗೆ ಧರ್ಮದೇಟು ತಿನ್ನಬೇಕಾಗುತ್ತದೆ.

Tap to resize

Latest Videos

undefined

ರಾಯಚೂರು: ಮಕ್ಕಳ ಕಳ್ಳಿಯೆಂದು ಮರಕ್ಕೆ ಕಟ್ಟಿಹಾಕಿ ಬಡಪಾಯಿ ಮಹಿಳೆಗೆ ಥಳಿಸಿದ ಪಾಪಿಗಳು!

ಯತ್ನಾಳ್ ಹಿಂದೂ ಸೇನೆ ಎಂಬ ಎಕ್ಸ್ ಖಾತೆಯಿಂದ ಈ ಪೋಸ್ಟ್ ಹಂಚಿಕೊಳ್ಳಲಾಗಿದೆ. ಅದರಲ್ಲಿ, ಇಬ್ಬರು ಮಹಿಳೆಯರು ಹಾಗೂ ಒಬ್ಬ ವ್ಯಕ್ತಿ ಸೇರಿಕೊಂಡು ಅಂಗಡಿಯಲ್ಲಿ ಕೆಲಸ ಮಾಡುವ ಹುಡುಗನಿಗೆ ಕಪಾಳಕ್ಕೆ ಬಾರಿಸುತ್ತಿದ್ದಾರೆ. ಇದರ ನಡುವೆ ಮಹಿಳೆಯರು ನೀನು ಅಷ್ಟು ಚಿಕ್ಕ ಹುಡುಗಿಯ ಹತ್ತಿರ ಮೊಬೈಲ್ ನಂಬರ್ ಇಸ್ಕೊಂಡು ವಿಡಿಯೋ ಕಾಲ್ ಮಾಡ್ತೀಯಾ.? ಹೇಳು ನೀನು ವಿಡಿಯೋ ಕಾಲ್ ಮಾಡಿ ತೊಂದರೆ ಕೊಡಲಿಲ್ಲವಾ ಹೇಳು ಎನ್ನುತ್ತಾ ಮತ್ತೊಂದೆರಡು ಕೆನ್ನೆಗೆ ಬಾರಿಸಿದ್ದಾರೆ. ನಿಂಗೆ ಎಷ್ಟು ಧೈರ್ಯವಾ? ನಿಂಗೆ ನಾಚಿಕೆ ಆಗುವುದಿಲ್ಲವಾ? ಎಂದು ಹೊಡೆದು ಬುದ್ಧಿವಾದ ಹೇಳಿದ್ದಾರೆ. ಇನ್ನು ಅಂಗಡಿ ಮಾಲೀಕರನ್ನು ಕೇಳಿದರೆ ನಮಗೆ ಇದರ ಬಗ್ಗೆ ಏನೂ ಗೊತ್ತಿಲ್ಲ, ಇವನ ವಿಚಾರಕ್ಕೆ ಅಂಗಡಿ ಮುಚ್ಚುವ ಬಗ್ಗೆ ಏಕೆ ಮಾತನಾಡ್ತೀರಿ ಎಂದು ಮಾಲೀಕ ಗ್ರಾಹಕರಲ್ಲಿ ಬೇಡಿಕೊಂಡಿದ್ದಾರೆ.

ಈ ವಿಡಿಯೋ ಹಂಚಿಕೊಂಡಿರುವ ಯತ್ನಾಳ್ ಅಭಿಮಾನಿ ಎಂಬ ಖಾತೆದಾರರು, ಮಂಗಳೂರು ಸಮೀಪ ಕೂಳೂರು ಜನರಲ್ ಸ್ಟೋರಿನ ರಫೀಝ್ ಎಂಬಾತನ ಕೆನ್ನೆಯ ಮೇಲೆ ಬೆರಣಿ ತಟ್ಟುತ್ತಿರುವ ಮಹಿಳೆಯರು... ಮೂಲಗಳ ಪ್ರಕಾರ ಇವನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಎಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮಂಗಳೂರು ಸಮೀಪ ಕೂಳೂರು ಜನರಲ್ ಸ್ಟೋರಿನ ರಫೀಝ್ ಎಂಬಾತನ ಕೆನ್ನೆಯ ಮೇಲೆ ಬೆರಣಿ ತಟ್ಟುತ್ತಿರುವ ಮಹಿಳೆಯರು... ಮೂಲಗಳ ಪ್ರಕಾರ ಇವನು ಕಾಮಗ್ರೆಸ್ ಪಕ್ಷದ ಕಾರ್ಯಕರ್ತ ಅಂತೆ ಏನ್ಲೆ ನಿನ್ನ ಸೀಕ್ರೆಟ್ ಪ್ರೇಮಿ ಇಂಗೆ ಒದೆ ತಿನ್ನಕ್ಕತ್ತಾನೆ 😂😂😂 ಆದ್ರೆ ಹೊಡೆತ ಮಾತ್ರ 🔥🔥🔥🔥 pic.twitter.com/Jcetjw4q1o

— ಯತ್ನಾಳ್ ಹಿಂದೂ ಸೇನೆ 🚩 (@yathnalabhimani)
click me!