ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ಹಿಂಸಾಚಾರದ ವಿರುದ್ಧ ಹಿಂದೂ ಸೇವಾ ಸಮಿತಿ ಮಂಗಳೂರಿನಲ್ಲಿ ಮಾಡಿದ ಪ್ರತಿಭಟನೆಯನ್ನು ಟೀಕಿಸಿರುವ ರಮಾನಾಥ್ ರೈ ಅವರು, ಪ್ಯಾಲೆಸ್ಟೈನ್ ಪರ ಹೋರಾಟವಾದಾಗ ಇಂತಹ ಬುದ್ದಿ ಮಾತು ತಪ್ಪಿಯೂ ಹೇಳಿಲ್ಲ. ವಕ್ಫ್ ಬೋರ್ಡ್ ಸಮಸ್ಯೆ ಗಂಭೀರವಾಗಿದ್ದರೂ ಹಿಂದೂ ಸಮಾಜದ ಪರವಾಗಿ ಮಾತನಾಡಿಲ್ಲ: ಶಾಸಕ ಡಾ.ಭರತ್ ಶೆಟ್ಟಿ ಅವರು,
ಮಂಗಳೂರು(ಡಿ.10): ಹಿಂದೂಗಳಿಗೆ ಮಾತ್ರ ಸದಾ ಬುದ್ದಿ ಹೇಳಲು ಬರುವ ಕಾಂಗ್ರೆಸ್ ಮಾಜಿ ಸಚಿವ ರಮಾನಾಥ ರೈ ಅವರದ್ದು ಮುಸ್ಲಿಂ ಸಮುದಾಯದ ಮೇಲೆ ಕುರುಡು ಪ್ರೇಮ, ಹಿಂದೂ ಸಮಾಜ, ಸಂಘಟನೆ ಎಂದರೆ ಅಲರ್ಜಿ ಎಂದು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಕಿಡಿ ಕಾರಿದ್ದಾರೆ.
ಇಂದು(ಮಂಗಳವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಡಾ.ಭರತ್ ಶೆಟ್ಟಿ ಅವರು, ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ಹಿಂಸಾಚಾರದ ವಿರುದ್ಧ ಹಿಂದೂ ಸೇವಾ ಸಮಿತಿ ಮಂಗಳೂರಿನಲ್ಲಿ ಮಾಡಿದ ಪ್ರತಿಭಟನೆಯನ್ನು ಟೀಕಿಸಿರುವ ರಮಾನಾಥ್ ರೈ ಅವರು, ಪ್ಯಾಲೆಸ್ಟೈನ್ ಪರ ಹೋರಾಟವಾದಾಗ ಇಂತಹ ಬುದ್ದಿ ಮಾತು ತಪ್ಪಿಯೂ ಹೇಳಿಲ್ಲ. ವಕ್ಫ್ ಬೋರ್ಡ್ ಸಮಸ್ಯೆ ಗಂಭೀರವಾಗಿದ್ದರೂ ಹಿಂದೂ ಸಮಾಜದ ಪರವಾಗಿ ಮಾತನಾಡಿಲ್ಲ. ಇದಕ್ಕೆ ಕಾರಣ ಕರ್ತರಾದ ಸಚಿವ ಜಮೀರ್ ಅಹ್ಮದ್ ಅವರಿಗೂ ಬುದ್ದಿವಾದ ಹೇಳಿಲ್ಲ ಎಂದು ಕಿಡಿ ಕಾರಿದ್ದಾರೆ.
ಬಾಂಗ್ಲಾ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಮಂಗಳೂರಲ್ಲಿ ಪ್ರತಿಭಟನೆ ಮಾಡೋದ್ರಲ್ಲಿ ಏನರ್ಥ ಇದೆ? ರಾಮನಾಥ್ ರೈ
ಕೇವಲ ಹಿಂದೂ ಸಮಾಜ ಮಾತ್ರ ಸಹನೆಯಿಂದ ಇರುವವರು ಎಂಬುದನ್ನು ತಿಳಿದು ಉಚಿತವಾಗಿ ಸಲಹೆ, ಬುದ್ದಿವಾದ ಮಾತು ಹೇಳುವುದನ್ನು ಇನ್ನಾದರೂ ರಮಾನಾಥ ರೈ ಅವರು ನಿಲ್ಲಿಸಿ, ಇತರ ಸಮಾಜವನ್ನೂ ತಿದ್ದುವ ಕೆಲಸ ಮಾಡಲಿ ಎಂದು ತಿರುಗೇಟು ಕೊಟ್ಟಿದ್ದಾರೆ.
ಸಂಘ ಪರಿವಾರದ ಪ್ರತಿಭಟನೆ ಖಂಡಿಸಿದ್ದ ರಮಾನಾಥ್ ರೈ!
ಬಾಂಗ್ಲಾದ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ರಸ್ತೆ ತಡೆ ಮಾಡಿ ಹಿಂದೂ ಹಿತ ರಕ್ಷಣಾ ಸಮಿತಿ ನಡೆಸಿದ ಪ್ರತಿಭಟನೆಯನ್ನು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಖಂಡಿಸಿದ್ದರು. ಮಂಗಳೂರಿನಲ್ಲಿ ಮಾತನಾಡಿದ್ದ ಅವರು, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನಾವೆಲ್ಲ ಖಂಡಿಸುತ್ತೇವೆ. ಆದ್ರೆ ಇದ್ರ ಹೆಸರಲ್ಲಿ ಮಂಗಳೂರಿನಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡೋದ್ರಲ್ಲಿ ಅರ್ಥವಿಲ್ಲ. ದ್ವೇಷ ಬಿತ್ತುವ ಕಾರ್ಯಕ್ರಮ ಮಾಡ್ತಾ ಇದ್ದಾರೆ. ಅಲ್ಪಸಂಖ್ಯಾತರ ರಕ್ಷಣೆ ಮಾಡೋದು ಸರ್ಕಾರ ನಡೆಸುವವರ ಜವಾಬ್ದಾರಿ ಹೌದು. ಬಾಂಗ್ಲಾದೇಶದ ತಪ್ಪನ್ನು ಅಂತರಾಷ್ಟ್ರೀಯ ವೇದಿಕೆಯಲ್ಲಿ ಹೇಳುವ ಕೆಲಸ ಕೇಂದ್ರ ಸರ್ಕಾರ ಮಾಡಬೇಕು. ಕೇಂದ್ರ ಸರ್ಕಾರಕ್ಕೆ ಬಿಜೆಪಿ ನಾಯಕರು ಒತ್ತಡ ಹಾಕಬೇಕು. ಬಾಂಗ್ಲಾದೇಶ ದೂರ್ತವಾಸದ ಎದುರು ಪ್ರತಿಭಟನೆ ಮಾಡಬೇಕು ಎಂದಿದ್ದರು.
ಮಂಗಳೂರು ವಿಮಾನ ನಿಲ್ದಾಣಕ್ಕೆ ರಾಮೇಶ್ವರಂ ಕೆಫೆ ಮಾದರಿಯಲ್ಲಿ ಬಾಂಬ್ ಬೆದರಿಕೆ ಸಂದೇಶ
ಆದ್ರೆ ಅದರಲ್ಲೂ ರಾಜಕೀಯ ಲಾಭ ಪಡೆಯುವ ಪ್ರಯತ್ನ ಆಗುತ್ತಿದೆ. ದೇಶದ ಆಡಳಿತ ನಡೆಸುವವರು ರಾಜಧರ್ಮ ಪಾಲನೆ ಮಾಡಬೇಕು. ಮಂಗಳೂರಿನಂತಹ ಸೂಕ್ಷ್ಮ ಪ್ರದೇಶದಲ್ಲಿ ರಸ್ತೆಯಲ್ಲಿ ಪ್ರತಿಭಟನೆ ನಡೆಸೋದು ಸರಿಯಲ್ಲ. ಇದು ಸಿದ್ದರಾಮಯ್ಯ, ಕರ್ನಾಟಕ ಸರ್ಕಾರ, ಮಂಗಳೂರು ಜಿಲ್ಲಾಧಿಕಾರಿ ಮಾಡಬೇಕಾದ ಕೆಲಸವ..? ಕೆಸರು ನೀರಿನಲ್ಲಿ ಮೀನು ಹಿಡಿಯುವ ಪ್ರಯತ್ನವನ್ನು ಇವರು ಮಾಡುತ್ತಿದ್ದಾರೆ. ಯಾವ ದೇಶದಲ್ಲೂ ಅಲ್ಲಿನ ಅಲ್ಪಸಂಖ್ಯಾತ ಮೇಲೆ ದೌರ್ಜನ್ಯ ಆಗುತ್ತೋ ಅದನ್ನು ನಾನೂ ಕೂಡಾ ಖಂಡಿಸುತ್ತೇನೆ. ಬಾಂಗ್ಲಾದೇಶದ ದೌರ್ಜನ್ಯಕ್ಕೂ ನಾನು ಖಂಡಾತುಂಡವಾಗಿ ವಿರೋಧಿಸುತ್ತೇನೆ ಎಂದಿದ್ದರು.