ಪುಟಾಣಿಗೆ ತನ್ನ ಕುರ್ಚಿ ಬಿಟ್ಟು ಕೊಟ್ಟ ಮಂಗಳೂರು ಕಮಿಷನರ್, ಕಾರಣವೇ ಒಂದು ಆಸಕ್ತಿಕರ ವಿಷಯ

Published : Oct 22, 2022, 09:22 PM ISTUpdated : Oct 22, 2022, 09:59 PM IST
ಪುಟಾಣಿಗೆ ತನ್ನ ಕುರ್ಚಿ ಬಿಟ್ಟು ಕೊಟ್ಟ ಮಂಗಳೂರು ಕಮಿಷನರ್, ಕಾರಣವೇ ಒಂದು ಆಸಕ್ತಿಕರ ವಿಷಯ

ಸಾರಾಂಶ

ಮಂಗಳೂರು ಕಮಿಷನರ್ ಶಶಿಕುಮಾರ್ ತಮ್ಮ ಸೀಟ್ ಬಿಟ್ಟು ಕೊಟ್ಟ ಈ ಪುಟಾಣಿ ಬೇರಾರೂ ಅಲ್ಲ. ರಾಜ್ಯದಲ್ಲಿ ಲೋಕಾಯುಕ್ತ ಎಸ್ಪಿಯಾಗಿದ್ದ ರವಿಕುಮಾರ್ ಪುತ್ರಿ ಪ್ರಣೀತಾ‌. ಮಂಗಳೂರು ಸೇರಿ ರಾಜ್ಯದ ಹಲವೆಡೆ ಕರ್ತವ್ಯ ನಿರ್ವಹಿಸಿದ್ದ ಪೊಲೀಸ್ ಅಧಿಕಾರಿ ರವಿಕುಮಾರ್ ಐದು ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದರು. 

ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್

ಮಂಗಳೂರು (ಅ.22): ಮುದ್ದಾದ ಪುಟಾಣಿ ಹೆಣ್ಣು ಮಗುವೊಬ್ಬಳು ಇಂದು ಮಂಗಳೂರು ಪೊಲೀಸ್ ಕಮಿಷನರ್ ಸೀಟ್ ನಲ್ಲಿ ಖುಷಿ ಖುಷಿಯಾಗಿ ಕೂತಿದ್ದಳು. ಮಂಗಳೂರು ಕಮಿಷನರ್ ಶಶಿಕುಮಾರ್ ಆ ಪುಟಾಣಿಗೆ ಸೀಟ್ ಬಿಟ್ಟು ಕೊಟ್ಟು ಆ ಹೆಣ್ಣು ಮಗುವಿನ ಪಕ್ಕದಲ್ಲೇ ನಿಂತು ಕೆಲ ಹೊತ್ತು ಕಳೆದರು. ಇಂಥದ್ದೊಂದು ವಿಶೇಷ ಸನ್ನಿವೇಶಕ್ಕೆ ಮಂಗಳೂರು ಪೊಲೀಸ್ ‌ಕಮಿಷನರ್ ಕಚೇರಿ ಸಾಕ್ಷಿಯಾಗಿತ್ತು. ಇವತ್ತು ಮಂಗಳೂರು ಕಮಿಷನರ್ ಕಚೇರಿಗೆ ಆಗಮಿಸಿದ್ದ ಈ ವಿಶೇಷ ಅತಿಥಿಗೆ ಮಂಗಳೂರು ‌ಕಮಿಷನರ್ ಶಶಿಕುಮಾರ್ ಸಲ್ಲಿಸಿದೆ ಗೌರವ ಇದು. ಅಷ್ಟಕ್ಕೂ ಈ ವಿಶೇಷ ಗೌರವ ಸಲ್ಲಿಕೆಗೆ ಒಂದು ಕಾರಣವಿದೆ. ಕಮಿಷನರ್ ತಮ್ಮ ಸೀಟ್ ಬಿಟ್ಟು ಕೊಟ್ಟ ಈ ಪುಟಾಣಿ ಬೇರಾರೂ ಅಲ್ಲ. ರಾಜ್ಯದಲ್ಲಿ ಲೋಕಾಯುಕ್ತ ಎಸ್ಪಿಯಾಗಿದ್ದ ರವಿಕುಮಾರ್ ಪುತ್ರಿ ಪ್ರಣೀತಾ‌. ಮಂಗಳೂರು ಸೇರಿ ರಾಜ್ಯದ ಹಲವೆಡೆ ಕರ್ತವ್ಯ ನಿರ್ವಹಿಸಿದ್ದ ಪೊಲೀಸ್ ಅಧಿಕಾರಿ ರವಿಕುಮಾರ್ ಐದು ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದರು. 

Noise pollution ಮೈಕ್ ಬಳಸುತ್ತಿರುವ ಮಸೀದಿ, ಚರ್ಚ್, ದೇಗುಲ ಸೇರಿ 1001 ಕೇಂದ್ರಕ್ಕೆ ಮಂಗಳೂರು ಕಮಿಷನರ್ ನೋಟಿಸ್!

ಮಂಗಳೂರಿನ ಪಣಂಬೂರು ಉಪ ವಿಭಾಗದಲ್ಲಿ 2016-17 ರಲ್ಲಿ ಎಸಿಪಿ ಆಗಿದ್ದ ರವಿ ಕುಮಾರ್ ರಸ್ತೆ ಅಪಘಾತದಲ್ಲಿ ಮೃತ ಪಟ್ಟಿದ್ದರು. 2017 ರ ಫೆಬ್ರವರಿ 22 ರಂದು ಬೆಂಗಳೂರು ಗ್ರಾಮಾಂತರದ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿತ್ತು. ಮಂಗಳೂರು ಎಸಿಪಿ ಆಗಿದ್ದ ರವಿ ಕುಮಾರ್ ಮೈಸೂರಿಗೆ ಲೋಕಾಯುಕ್ತ ಎಸ್ಪಿ ಆಗಿ ಬಡ್ತಿ ಹೊಂದಿ ವರ್ಗಾವಣೆಗೊಂಡಿದ್ದರು. ಹೀಗಾಗಿ ಬೆಂಗಳೂರಿನ ಲೋಕಾಯುಕ್ತ ಕಛೇರಿಯಲ್ಲಿ ಸಭೆಯಲ್ಲಿ ಪಾಲ್ಗೊಂಡು ಮೈಸೂರಿಗೆ ವಾಪಾಸಾಗುವ ವೇಳೆ ಅವರ ಕಾರಿಗೆ ಲಾರಿ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಡ್ರೈವರ್ ಹಾಗೂ ಎಸ್ಪಿ ರವಿ ಕುಮಾರ್ ಮೃತಪಟ್ಟಿದ್ದರು.  2008ನೇ ಬ್ಯಾಚ್‌ ನ ಕೆಎಸ್ಪಿಎಸ್ ಅಧಿಕಾರಿಯಾಗಿದ್ದ ರವಿ ಕುಮಾರ್ ಪತ್ನಿ ಮತ್ತು ಪುಟಾಣಿ ಪ್ರಣೀತಾ‌ಳನ್ನು ಅಗಲಿದ್ದರು. ಅಪಘಾತ ಸಂಭವಿಸುವ ಕೆಲವೇ ದಿನಗಳ ಮೊದಲು ಮಗುವಿನ ನಾಮಕರಣ ಮಾಡಿದ್ದು, ಮಗುವಿಗೆ ಪ್ರಣೀತಾ ಅನ್ನೋ ಹೆಸರಿಟ್ಟಿದ್ದರು.

ಮಂಗಳೂರು ಕಮಿಷನರ್ ಹಾಡಿಗೆ ಪೊಲೀಸರ ಜೊತೆ ನಟ ಶಿವಣ್ಣ ಮಸ್ತ್ ಡ್ಯಾನ್ಸ್

ಇಂದು ರವಿ ಕುಮಾರ್ ಅವರ ಪತ್ನಿ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಛೇರಿಗೆ ಆಗಮಿಸಿದ್ದರು. ಈ ವೇಳೆ ರವಿ ಕುಮಾರ್ ಅವರ ಪುತ್ರಿ ಪ್ರಣೀತಾರನ್ನು ತಮ್ಮ ಸೀಟ್ ಮೇಲೆ ಕೂರಿಸಿ ಅಗಲಿದ ರವಿ ಕುಮಾರ್ ಅವರಿಗೆ ಕಮಿಷನರ್ ಶಶಿಕುಮಾರ್ ಗೌರವ ಸಲ್ಲಿಸಿದ್ದಾರೆ. ಕೆಲ ಹೊತ್ತು ತಮ್ಮ ಸೀಟ್ ನಲ್ಲೇ ಕೂರಿಸಿ ಮಗುವಿನ ಪಕ್ಕದಲ್ಲೇ ನಿಂತು ಕೆಲ ಹೊತ್ತು ಕಳೆದಿದ್ದಾರೆ. ಮುಂದೆ ಕಲಿತು ತಂದೆಯಂತೆ ಪೊಲೀಸ್ ಹುದ್ದೆ ಅಲಂಕರಿಸಬೇಕು ಎಂದು ಹಾರೈಸಿದ್ದಾರೆ. ತನ್ನ ಪತಿ ಕರ್ತವ್ಯ ನಿರ್ವಹಿಸಿದ ಜಾಗಗಳನ್ನು ‌ಮಗಳಿಗೆ ತೋರಿಸುವ ಉದ್ದೇಶದಿಂದ ರವಿಕುಮಾರ್ ಅವರ ಪತ್ನಿ ಇಂದು ಮಂಗಳೂರಿಗೆ ಆಗಮಿಸಿದ್ದರು.

PREV
Read more Articles on
click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್