Mangalore Pub Attack Case : ಯಾವುದೇ ದಾಳಿ ನಡೆದಿಲ್ಲ; ಕಮಿಷನರ್ ಶಶಿಕುಮಾರ್ ಸ್ಪಷ್ಟನೆ

By Ravi Nayak  |  First Published Jul 26, 2022, 10:52 AM IST

ಮಂಗಳೂರು ಪಬ್ ದಾಳಿಗೆ ಸಂಬಂಧಿಸಿದಂತೆ ಕಮಿಷನರ್ ಶಶಿಕುಮಾರ ಪ್ರತಿಕ್ರಿಯಿಸಿದ್ದು, ಅಂಥ ಯಾವುದೇ ದಾಳಿ ನಡೆದಿಲ್ಲ. ದಾಳಿಯಾಗಿದೆ ಎಂಬುದು ಸತ್ಯಕ್ಕೆ ದೂರವಾದುದ್ದು ಎಂದು ಹೇಳಿದ್ದಾರೆ.


ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು (ಜು.26) : ಪಬ್ ನಲ್ಲಿ ಕಾಲೇಜು ವಿದ್ಯಾರ್ಥಿಗಳ ಪಾರ್ಟಿಗೆ ಬಜರಂಗದಳ ತಡೆಯೊಡ್ಡಿದ ಪ್ರಕರಣ ಸಂಬಂಧಿಸಿ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಮಂಗಳೂರು ‌ಕಮಿಷನರ್ ಶಶಿಕುಮಾರ್ ಹೇಳಿಕೆ ನೀಡಿದ್ದು, ಪಬ್ ಮೇಲೆ ದಾಳಿ ಅಂತ ಕೆಲ ಮಾಧ್ಯಮಗಳಲ್ಲಿ ಬಂದಿದೆ. ಆದರೆ ಈ ವರದಿ ಸತ್ಯಕ್ಕೆ ದೂರ, ಯಾವುದೇ ಗ್ರಾಹಕರು ಅಥವಾ ಯಾರ ಮೇಲೂ ದಾಳಿ ನಡೆದಿಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ.

Tap to resize

Latest Videos

ಅಪ್ರಾಪ್ತ ವಿದ್ಯಾರ್ಥಿಗಳಿಗೆ ಮದ್ಯ ಪೂರೈಕೆ(alcohol supply) ಆರೋಪಿಸಿ ಸಂಘಟನೆಯವರು ಬಂದಿದ್ದಾರೆ. ಆದರೆ ಬೌನ್ಸರ್(Bouncer) ಬಳಿ ಹೇಳಿದಾಗ ಮ್ಯಾನೇಜರ್(Manager) ವಿದ್ಯಾರ್ಥಿಗಳ ಐಡಿ(Students ID) ಕೇಳಿದ್ದಾರೆ.‌ ಐಡಿ ಕೇಳಿದಾಗ ಕೆಲ ವಿದ್ಯಾರ್ಥಿಗಳು ಅಲ್ಲಿಂದ ಹೊರಗೆ ಹೋಗಿದ್ದಾರೆ.‌ ಆದರೆ ಯಾವುದೇ ಸಂಘಟನೆ ಕಾರ್ಯಕರ್ತರು ಪಬ್(Pub) ನ ಒಳಗೆ ಬಂದಿಲ್ಲ. ಯಾವುದೇ ನಿಯಮ ಉಲ್ಲಂಘನೆ ಆದರೂ ಸಂಬಂಧಿಸಿದ ಇಲಾಖೆಗೆ ಮಾಹಿತಿ ಕೊಡಬೇಕು. ಅದು ಬಿಟ್ಟು ಸಂಘಟನೆ ಹೆಸರಲ್ಲಿ ಈ ರೀತಿ ಪರಿಶೀಲನೆಗೆ ಅವಕಾಶ ಇಲ್ಲ.‌ ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಮುಂದಿನ ಕಾನೂನು ಕ್ರಮ. ತೆಗೆದುಕೊಳ್ಳಲಾಗುವುದು ಎಂದರು.

ಕರಾವಳಿಯಲ್ಲಿ ಮತ್ತೊಮ್ಮೆ ಪಬ್ ದಾಳಿ: ವಿಹೆಚ್'ಪಿ ಎಚ್ಚರಿಕೆ

 ಕೆಲ ದಿನಗಳ ಹಿಂದಿನ ಕಾಲೇಜು ವಿದ್ಯಾರ್ಥಿಗಳ ವಿಡಿಯೋ ವೈರಲ್(Video Viral) ಪ್ರಕರಣಕ್ಕೆ ಸಂಬಂಧ ಇಲ್ಲ. ಸಾಮಾಜಿಕ ತಾಣಗಳಲ್ಲಿ ಪ್ರಕರಣದ ಆರೋಪಿಗಳು ಮತ್ತು ಇಲ್ಲಿ ಪಾರ್ಟಿ ನಡೆಸ್ತಿದ್ದವರ ಬಗ್ಗೆ ಲಿಂಕ್ ಕಲ್ಪಿಸಲಾಗಿದೆ. ಆದರೆ ಅವರು ಮತ್ತು ಇವರಿಗೆ ಯಾವುದೇ ಸಂಪರ್ಕ ‌ಇಲ್ಲ.‌ ರಾತ್ರಿಯೇ ಯಾವುದೇ ಅನೈತಿಕ ಘಟನೆ ಆಗಬಾರದು ಅಂತ ಪೊಲೀಸರು ಕ್ರಮ ಕೈಗೊಂಡಿದ್ದಾರೆ.‌ ಎಲ್ಲರೂ ವಿದ್ಯಾರ್ಥಿಗಳಾದ ಕಾರಣ ಅವರನ್ನ ಸಂಪರ್ಕಿಸಲಾಗುತ್ತೆ‌. ಡ್ರಗ್ ಮಾಫಿಯಾ(drug mafia) ತಡೆಗೆ ನಾವು ಎಲ್ಲಾ ಕ್ರಮ ಕೈಗೊಂಡಿದ್ದೇವೆ.‌ ಗಾಂಜಾ,(Marijuana) ಎಂಡಿಎಂ(MDM) ಸೇರಿ ಹಲವು ಡ್ರಗ್ ವಶಕ್ಕೆ ಪಡೆದಿದ್ದೇವೆ.‌ ಈ ಭಾಗ ಕೇರಳಕ್ಕೆ ಸಂಪರ್ಕ ಇರೋ ಕಾರಣ ಡ್ರಗ್ ಮೂಮೆಂಟ್ ಇಲ್ಲಿದೆ‌ . ಹೀಗಾಗಿ ಇದನ್ನ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವ ಕೆಲಸ ನಡೆಯುತ್ತಿದೆ ಎಂದು ವಿವರಿಸಿದರು.

 ದೊಡ್ಡ ಮಟ್ಟದಲ್ಲಿ ಎಲ್ಲೂ ಡ್ರಗ್ಸ್ ಪ್ರಕರಣ ನಡೆದಿಲ್ಲ.‌ ಪಬ್, ರೆಸ್ಟೋರೆಂಟ್, ಬಾರ್ ಎಲ್ಲೂ ಅಂಥದ್ದು ವರದಿಯಾಗಿಲ್ಲ ಎಂದಿದ್ದಾರೆ. ಬೌನ್ಸರ್ ಹೇಳಿದ ಪ್ರಕಾರ ಸಂಘಟನೆ ಕಾರ್ಯಕರ್ತರು ಪಬ್ ಒಳಗೆ ಹೋಗಿಲ್ಲ. ಹೊರ ಭಾಗದಲ್ಲೇ ಮಾತನಾಡಿ ಹೋಗಿದ್ದಾರೆ. ಸದ್ಯ ಸಿಸಿಟಿವಿ ವೆರಿಫೈ(CCTV Verify) ಮಾಡಿ ಕಾನೂನು ಕ್ರಮ ತೆಗೋತಿವಿ.‌ ಪಬ್ ಮ್ಯಾನೇಜರ್ ಮತ್ತು ಬೌನ್ಸರ್ ಹೇಳಿಕೆ ಪಡೆಯಲಾಗಿದೆ. ಹೊರಗಿನ ವ್ಯಕ್ತಿಗಳು ಬಂದು ಈ ರೀತಿ ಮಾಡಲು ಅವಕಾಶ ಇಲ್ಲ. ಐಡಿ, ಲೈಸೆನ್ಸ್ ಕೇಳಲು ಬೇರೆಯವರಿಗೆ ಅವಕಾಶ ಇಲ್ಲ. ಈ ಬಗ್ಗೆ ಪರಾಮರ್ಶೆ ಮಾಡಿ ಕಾನೂನು ಕ್ರಮ ತೆಗೋತಿವಿ.‌ಮೊನ್ನೆ ನಡೆದ ಕಾಲೇಜಿನ ವಿದ್ಯಾರ್ಥಿಗಳ ಅಶ್ಲೀಲ ವಿಡಿಯೋ ಪ್ರಕರಣ ಹಿನ್ನೆಲೆಯಲ್ಲೇ ಆಗಿದೆ.‌ಆದರೆ ಪ್ರಕರಣದ ವಿದ್ಯಾರ್ಥಿಗಳು ಮತ್ತು ಈ ಘಟನೆ ವಿದ್ಯಾರ್ಥಿಗಳಿಗೆ ಸಂಬಂಧ ಇಲ್ಲ. ಅಂತಿಮ ಪದವಿ ವಿದ್ಯಾರ್ಥಿಗಳು ಪಬ್ ಗೆ ಬಂದಿದ್ದರು. ಈ ಪಬ್ ನಲ್ಲಿ ಹಾಕಿರೋ ನಿಯಮದ ಪ್ರಕಾರ 21 ವರ್ಷದ ಮೇಲಿನವರು ಬರಬಹುದು.‌ಹೀಗಾಗಿ ಈ ಬಗ್ಗೆ ಮಾಹಿತಿ ಕಲೆ ಹಾಕಿ ಕಾನೂನು ಕ್ರಮ ಎಂದರು

ಮಂಗಳೂರು ಕಿಸ್ಸಿಂಗ್ ವೀಡಿಯೋ: ವೈರಲ್ ಆಗೋ ಮುನ್ನವೇ ಕಾಲೇಜಿನಿಂದ ವಿದ್ಯಾರ್ಥಿ ಸಸ್ಪೆಂಡ್

ಮಂಗಳೂರಿನ ಬಲ್ಮಠದ ರಿ-ಸೈಕಲ್ ದಿ ಲಾಂಜ್ ಪಬ್ ನಲ್ಲಿ ಪಾರ್ಟಿಗೆ ನಿನ್ನೆ ರಾತ್ರಿ ಭಜರಂಗದಳದ ಕಾರ್ಯಕರ್ತರು ಅಡ್ಡಿ ಪಡಿಸಿದ್ದರು. ಮಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿಗಳಿಂದ ಪಾರ್ಟಿ ನಡೆಯುತ್ತಿತ್ತು. ಕುಡಿದು ಯುವಕ-ಯುವತಿಯರಿಂದ ಮೋಜು ಮಸ್ತಿ ಆರೋಪಿಸಿ ಭಜರಂಗದಳ ತಡೆ ಒಡ್ಡಿತ್ತು. ಕಾಲೇಜು ಫೇರ್ ವೆಲ್ ನೆಪದಲ್ಲಿ ಪಬ್ ನಲ್ಲಿ ಪಾರ್ಟಿ ನಡೆಯುತ್ತಿತ್ತು ಎನ್ನಲಾಗಿದೆ. ‌ ಕೆಲ ದಿನಗಳ ಹಿಂದಷ್ಟೇ ಲಿಪ್ ಲಾಕ್ ವಿಡಿಯೋ ಮೂಲಕ ಸುದ್ದಿಯಾಗಿದ್ದ ಕಾಲೇಜಿನ ವಿದ್ಯಾರ್ಥಿಗಳು ಎನ್ನಲಾಗಿದ್ದು, ಪದವಿ ವಿದ್ಯಾರ್ಥಿಗಳಿಂದ ಪಬ್ ನಲ್ಲಿ ಮೋಜು ಮಸ್ತಿ ಹಿನ್ನೆಲೆ ತಡೆ ಒಡ್ಡಲಾಗಿತ್ತು. ಪಾರ್ಟಿ ನಿಲ್ಲಿಸುವಂತೆ ಸೂಚಿಸಿ ಬೈದು ವಿದ್ಯಾರ್ಥಿಗಳನ್ನ ಹೊರ ಕಳುಹಿಸಿದ್ದಾರೆ. ಬಳಿಕ ಮಧ್ಯ ಪ್ರವೇಶಿಸಿ ಬಜರಂಗದಳದ ಕಾರ್ಯಕರ್ತರನ್ನ ಪೊಲೀಸರು ಚದುರಿಸಿದ್ದು, ಸದ್ಯ ಪಾರ್ಟಿ ಅರ್ಧದಲ್ಲೇ ನಿಲ್ಲಿಸಿ ಕಾಲೇಜು ವಿದ್ಯಾರ್ಥಿಗಳು ಕಾಲ್ಕಿತ್ತಿದ್ದಾರೆ.

click me!