ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಘಟನೆ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆ ಕೇರಳದಿಂದ ಬಂದವರ ಕೈವಾಡವಿತ್ತು ಎನ್ನುವ ಆರೋಪ ಕೇಳಿ ಬಂದಿತ್ತು. ಈಗ ಲೊಕೇಷನ್ ಆಧರಿಸಿ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ.
ಮಂಗಳೂರು(ಜ.19): ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಘಟನೆ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆ ಕೇರಳದಿಂದ ಬಂದವರ ಕೈವಾಡವಿತ್ತು ಎನ್ನುವ ಆರೋಪ ಕೇಳಿ ಬಂದಿತ್ತು. ಈಗ ಲೊಕೇಷನ್ ಆಧರಿಸಿ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ.
ಮಂಗಳೂರು ಗೋಲಿಬಾರ್ ಮತ್ತು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಘಟನೆಯ ಹಿಂದೆ ಕೇರಳದಿಂದ ಬಂದವರ ಕೈವಾಡ ಇದೆ ಎಂಬ ಆರೋಪ ಕೇಳಿ ಬಂದಿತ್ತು. ಗಲಭೆ ಹಿಂದಿನ ಕೇರಳ ಲಿಂಕ್ ಪತ್ತೆಗೆ ಮುಂದಾದ ಮಂಗಳೂರು ಪೊಲೀಸರು ಮೊಬೈಲ್ ಟವರ್ ಲೊಕೇಷನ್‌ಗಳ ಮೂಲಕ ಸುಳಿವು ಪತ್ತೆಗೆ ಮುಂದಾಗಿದ್ದಾರೆ.
undefined
ಮೊಬೈಲ್ ಟವರ್ ಲೊಕೇಷನ್ ಆಧಾರದಲ್ಲಿ ನೋಟೀಸ್ ಜಾರಿ ಮಾಡಿದ ಪೊಲೀಸರು ಡಿ.19ರಂದು ಗಲಭೆ ಪೀಡಿದ ಪ್ರದೇಶದಲ್ಲಿದ್ದ ಕೇರಳಿಗರಿಗೆ ನೋಟೀಸ್ ಜಾರಿ ಮಾಡಿದ್ದಾರೆ. ಕೇರಳದ ಕಾಸರಗೋಡು, ಮಂಜೇಶ್ವರ, ಉಪ್ಪಳ ಸೇರಿ ಕೇರಳದ ಹಲವು ಭಾಗದ ಜನರಿಗೆ ನೋಟಿಸ್ ಕಳುಹಿಸಲಾಗಿದೆ.
ಡಿ.19ರಂದು ಗಲಭೆ ಪೀಡಿತ ಜಾಗದಲ್ಲಿ ಯಾರ್ಯಾರ ಫೋನ್ ಲೊಕೇಷನ್ ಕಂಡು ಬಂದಿದೆಯೂ ಅಂತವರಿಗೆ ನೋಟಿಸ್ ಕಳುಹಿಸಲಾಗಿದೆ. ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಸಾವಿರಾರು ಜನರಿಗೆ ನೋಟೀಸ್ ಕಳುಹಿಸಲಾಗಿದ್ದು, ಮಹಿಳೆಯರಿಗೂ ನೋಟಿಸ್ ಕಳುಹಿಸಲಾಗಿದೆ. ವಿವರಣೆ ಅಥವಾ ಸಮಜಾಯಿಷಿ ವೇಳೆ ಅನುಮಾನ ಬಂದಲ್ಲಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.