ಚಿಕಿತ್ಸೆಗೆ ಬಂದವಳ ಗುಪ್ತಾಂಗ ಮುಟ್ಟಿ ಕಿರುಕುಳ ಕೊಟ್ಟ ಕಾಮುಕ ದಂತವೈದ್ಯ

By Suvarna News  |  First Published Jan 30, 2020, 11:37 AM IST

ಹಲ್ಲಿನ ಚಿಕಿತ್ಸೆಗೆಂದು ಬಂದ ಯುವತಿಯ ಗುಪ್ತಾಂಗ ಮುಟ್ಟಿ ಕಿರುಕುಳ ಕೊಟ್ಟಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ದಂತ ವೈದ್ಯನೊಬ್ಬ ತನ್ನ ಬಳಿ ಬಂದ ರೋಗಿಯ ದೇಹ ಮುಟ್ಟಿ ಕಿರುಕುಳ ನೀಡಿದ್ದಾನೆ.


ಮಂಗಳೂರು(ಜ.30): ಹಲ್ಲಿನ ಚಿಕಿತ್ಸೆಗೆಂದು ಬಂದ ಯುವತಿಯ ಗುಪ್ತಾಂಗ ಮುಟ್ಟಿ ಕಿರುಕುಳ ಕೊಟ್ಟಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ದಂತ ವೈದ್ಯನೊಬ್ಬ ತನ್ನ ಬಳಿ ಬಂದ ರೋಗಿಯ ದೇಹ ಮುಟ್ಟಿ ಕಿರುಕುಳ ನೀಡಿದ್ದಾನೆ.

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಯುವತಿಗೆ ಲೈಂಗಿಕ ಕಿರುಕುಳ‌ ನೀಡಲಾಗಿದೆ. ದಂತ ವೈದ್ಯ ಡಾ‌.ಸುಧಾಕರ್ ಮೇಲೆ ಕಿರುಕುಳ ಆರೋಪ ಕೇಳಿ ಬಂದಿದೆ. 23 ವರ್ಷದ ಯುವತಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ.

Tap to resize

Latest Videos

ಸ್ಪೆಷಲ್ ಕ್ಲಾಸ್ ನೆಪದಲ್ಲಿ ಮೈ, ಕೈ ಮುಟ್ಟೋ ಮುಖ್ಯ ಶಿಕ್ಷಕ, ಸೆಲ್ಫೀ ತೆಗೆದು ಅಪ್ಲೋಡ್

ಬುಧವಾರ ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಾಗ ಲೈಂಗಿಕ ಕಿರುಕುಳ ನೀಡಿದ್ದು, ಟ್ರೀಟ್ಮೆಂಟ್ ಕೊಡೋ ನೆಪದಲ್ಲಿ ಗುಪ್ತಾಂಗಗಳನ್ನು ಮುಟ್ಟಿ ಕಿರುಕುಳ‌ ನೀಡಿದ್ದಾನೆ. ಈ ಸಂಬಂಧ ಯುವತಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪೊಲೀಸರು ಆರೋಪಿ ಡಾ.ಸುಧಾಕರ್‌ನನ್ನು ಬಂಧಿಸಿದ್ದು, ಡಾಕ್ಟರ್ ಮೇಲೆ ಇದೆ ರೀತಿಯ ದೂರುಗಳು ಮೊದಲೂ ಕೇಳಿಬಂದಿತ್ತು‌‌.

ಮದುವೆಗೆ ಒಂದು ದಿನವಿದ್ದಾಗಲೇ ಬಾವನಿಂದಲೇ ವರನ ಹತ್ಯೆಗೆ ಯತ್ನ

click me!