ಡ್ಯೂಟಿ ಮುಗೀತು ಅಂತ ಅರ್ಧದಲ್ಲೇ ವಿಮಾನ ಬಿಟ್ಟೋದ ಪೈಲಟ್..!

ಹವಾಮಾನ ವೈಪರೀತ್ಯ ಅಂತ ಅರ್ಧದಲ್ಲೇ ವಿಮಾನ ನಿಲ್ಲಿಸಿದ ಪೈಲಟ್ ಡ್ಯೂಟಿ ಟೈಂ ಮುಗೀತು ಎಂದು ಮತ್ತೆ ವಿಮಾನ ಹೊರಡಿಸಲು ನಿರಾಕಸರಿಸಿದ್ದಾನೆ. ಮಂಗಳೂರಿನಲ್ಲಿ ಇಳಿಯಬೇಕಾಗಿದ್ದ ವಿಮಾನ ಕೊಯಮತ್ತೂರಿನಲ್ಲೇ ಇಳಿದಿತ್ತು. ಆದರೆ ಮತ್ತೆ ವಿಮಾನ ಹೊರಡಿಸಲು ಪೈಲಟ್ ನಿರಾಕಸಿದ್ದಾನೆ.


ಮಂಗಳೂರು(ಆ.09): ದುಬೈನಿಂದ ಮಂಗಳೂರು ಅಂತಾರಾಷ್ಟೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಮುಂಜಾನೆ 4:25ಕ್ಕೆ ಬಂದಿಳಿಯಬೇಕಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ ಇಳಿದಿದೆ. ಹವಾಮಾನ ಸರಿಯಾದ್ರೂ ಪೈಲಟ್ ಮಾತ್ರ ವಿಮಾನ ಹಾರಿಸಿಲ್ಲ. ಡ್ಯೂಟಿ ಟೈಂ ಮುಗೀತು ಅಂತ ಹೇಳಿರೋ ಪೈಲಟ್ ವಿಮಾನ ಬಿಟ್ಟು ಹೊರಟಿದ್ದಾನೆ.

ಮಂಗಳೂರಿನಲ್ಲಿಳಿಯಬೇಕಾಗಿದ್ದ ಪ್ರಯಾಣಿಕರು ಕೊಯಮತ್ತೂರಿನಲ್ಲಿಳಿದು ಸಂಕಷ್ಟಕ್ಕೊಳಗಾಗುವಂತಾಯಿತು. ಏರ್‌ ಇಂಡಿಯಾದ ಐಎಕ್ಸ್‌ 418 ವಿಮಾನವು 180 ಪ್ರಯಾಣಿಕರನ್ನು ಹೊತ್ತು ದುಬೈನಿಂದ ಹೊರಟಿದೆ. ಗುರುವಾರ ನಸುಕಿನ ಜಾವ 4.25ಕ್ಕೆ ಮಂಗಳೂರು ತಲುಪಬೇಕಿತ್ತು. ಆದರೆ ಈ ವಿಮಾನ ಮುಂಜಾನೆ 5 ಗಂಟೆ ಸುಮಾರಿಗೆ ಕೊಯಮುತ್ತೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಇದಕ್ಕೆ ಹವಾಮಾನ ವೈಪರೀತ್ಯ ಕಾರಣ ಎಂದು ಹೇಳಲಾಗಿದೆ.

Latest Videos

ಹವಾಮಾನ ಸಾಧಾರಣ ಸ್ಥಿತಿಗೆ ಬಂದ್ರೂ ಪೈಲಟ್ ಮಾತ್ರ ಡ್ಯೂಟಿ ಮುಗೀತು ಅಂತ ಕಾರಣ ನೀಡಿ ವಿಮಾನ ಹೊರಡಿಸಿಲ್ಲ. ಪಟ್ಟು ಬಿಡದ ಪೈಲಟ್‌ನಿಂದಾಗಿ ಪ್ರಯಾಣಿಕರು ತೊಂದರೆ ಪಡುವಂತಾಯಿತು.

ಮಂಗಳೂರು ತಲುಪಬೇಕಾದವರು ದೂರದ ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ ಗುರುವಾರ ಮುಂಜಾನೆ 5.15ಕ್ಕೆ ಬಂದಿಳಿದರೂ ಪ್ರಯಾಣಿಕರಿಗೆ ಉಳಿದುಕೊಳ್ಳಲು ಯಾವುದೇ ವ್ಯವಸ್ಥೆ ಕಲ್ಪಿಸದೆ ವಿಮಾನದಲ್ಲೇ ಉಳಿಸಿಕೊಳ್ಳಲಾಗಿತ್ತು. ಅಲ್ಲದೆ ವಿಮಾನದಲ್ಲಿದ್ದ ಮಹಿಳೆಯರು, ಮಕ್ಕಳು ಆಹಾರದ ವ್ಯವಸ್ಥೆ ಇಲ್ಲದೆ ತೊಂದರೆಗೊಳಗಾದರು ಎಂದು ಪ್ರಯಾಣಿಕರು ದೂರಿದ್ದಾರೆ.

ವಿಮಾನದಲ್ಲಿ 180 ಪ್ರಯಾಣಿಕರು 7 ಗಂಟೆಗೂ ಹೆಚ್ಚು ಕಾಲ ಬಂಧಿಯಾದಂತಿದ್ದು, ಉಸಿರುಗಟ್ಟಿದಂತಾಗಿತ್ತು ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರು: ಚಾರ್ಮಾಡಿ ಕಣಿವೆ ರಸ್ತೆಯಲ್ಲಿ ಭಾರಿ ಗುಡ್ಡ ಕುಸಿತ

click me!