'ಸಿಂಗಲ್ ಹ್ಯಾಂಡ್ ಆಪರೇಷನ್ ಏರ್ಪೋರ್ಟ್', ಬಾಂಬ್ ತಯಾರಿಕೆಗೆ ಬಳಸಿದ್ದು 100 ಸಾಮಾಗ್ರಿ

By Suvarna News  |  First Published Jan 23, 2020, 10:15 AM IST

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇರಿಸಿದರ ಹಿಂದೆ ಆದಿತ್ಯ ರಾವ್ ಒಬ್ಬನೇ ಇದ್ದನೇ ಅಥವಾ ಯಾರದೋ ಕೈವಾಡ ಇದೆ ಎಂಬ ಸಂಶಯ ವ್ಯಕ್ತವಾಗಿತ್ತು. ಬುಧವಾರ ರಾತ್ರಿ ನಡೆದಿರುವ ವಿಚಾರಣೆಯಲ್ಲಿ ಈ ಕುರಿತು ಆದಿತ್ಯ ರಾವ್ ಬಾಯ್ಬಿಟ್ಟಿದ್ದಾನೆ.


ಮಂಗಳೂರು(ಜ.23): ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇರಿಸಿದರ ಹಿಂದೆ ಆದಿತ್ಯ ರಾವ್ ಒಬ್ಬನೇ ಇದ್ದನೇ ಅಥವಾ ಯಾರದೋ ಕೈವಾಡ ಇದೆ ಎಂಬ ಸಂಶಯ ವ್ಯಕ್ತವಾಗಿತ್ತು. ಬುಧವಾರ ರಾತ್ರಿ ನಡೆದಿರುವ ವಿಚಾರಣೆಯಲ್ಲಿ ಈ ಕುರಿತು ಆದಿತ್ಯ ರಾವ್ ಬಾಯ್ಬಿಟ್ಟಿದ್ದಾನೆ.

"

Tap to resize

Latest Videos

ಆದಿತ್ಯ ರಾವ್ ಮಿಸ್ಟರ್ ಬಗ್ಗೆ ಕಂಪ್ಲೀಟ್ ಮಾಹಿತಿ ಕಲೆ ಹಾಕಲಾಗಿದ್ದು, ಪ್ರಕರಣಕ್ಕೆ 'ಸಿಂಗಲ್ ಹ್ಯಾಂಡ್ ಆಪರೇಷನ್ ಏರ್ಪೋರ್ಟ್' ಎಂದು ಹೆಸರಿಡಲಾಗಿದೆ. ಈ ಬಗ್ಗೆ ತನಿಖೆ ವೇಳೆ ಕಂಪ್ಲೀಟ್ ಡೀಟೇಲ್ಸ್ ಲಭ್ಯವಾಗಿದ್ದು, ಬಾಂಬ್‌ನ ಮಾಸ್ಟರ್ ಮೈಂಡ್ ಈತ ಒಬ್ಬನೆ ಎಂಬುದನ್ನು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಬಾಂಬ್ ತಯಾರಿಕೆಗೆ 100ಕ್ಕೂ ಹೆಚ್ಚು ಸಾಮಾಗ್ರಿ

ಬಾಂಬ್ ಇಡುವ ಬಗ್ಗೆ ಆದಿತ್ಯ ರಾವ್ ಎರಡನೇ ವ್ಯಕ್ತಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಆದಿತ್ಯ ರಾವ್ ಬಾಂಬ್ ತಯಾರಿಸಲು 100 ಕ್ಕೂ ಹೆಚ್ಚು ಬಗೆಯ ಸಾಮಾಗ್ರಿ ಖರೀದಿಸಿದ್ದ. ವೆಬ್ ಸೈಟ್‌ನಲ್ಲಿ ಬಾಂಬ್ ತಯಾರಿ ಬಗ್ಗೆ ಮಾಹಿತಿ ಕಲೆ ಹಾಕಿದ್ದ. ಆದಿತ್ಯ ರಾವ್ ಬುದ್ಧಿವಂತಿಕೆ ನೋಡಿ ತನಿಖಾಧಿಕಾರಿಗಳೇ ಶಾಕ್ ಆಗಿದ್ದರು. ತಾನೊಬ್ಬನೇ ಇದರ ಮಾಸ್ಟರ್ ಮೈಂಡ್ ಎಂದು ಆದಿತ್ಯ ತನಿಖೆ ವೇಳೆ ಸ್ಪಷ್ಟಪಡಿಸಿದ್ದಾನೆ. ಪೊಲೀಸರು ಕಲೆ ಹಾಕಿದ ಸಾಕ್ಷಿಗೂ ಈತನ ಹೇಳಿಕೆಗೂ ಸಾಮ್ಯತೆ ಕಂಡುಬಂದಿದೆ.

ರಾತ್ರಿ 2 ಗಂಟೆಯ ತನಕ ನಡೆದಿದ್ದ ಆದಿತ್ಯ ರಾವ್ ವಿಚಾರಣೆ

click me!