ಸಂಸದೆ ಸುಮಲತಾ ಅಂಬರೀಶ್ ಬೆಂಬಲಿಗರಿಗೆ ಕಾಂಗ್ರೆಸ್ ಮಣೆ

By Web Desk  |  First Published Sep 27, 2019, 7:26 PM IST

ಸಂಸದೆ ಸುಮಲತಾ ಅಂಬರೀಶ್ ಬೆಂಬಲಿಗರಿಗೆ ಕಾಂಗ್ರೆಸ್ ಮಣೆ | ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಉಚ್ಚಾಟಿತರಾಗಿದ್ದ ಮುಖಂಡರುಗಳು ಪಕ್ಷಕ್ಕೆ ವಾಪಸ್| KPCC ಆದೇಶದನ್ವಯ ಉಚ್ಚಾಟನೆಗೊಂಡಿದ್ದ ಮುಖಂಡರು ಪಕ್ಷಕ್ಕೆ ವಾಪಸ್.


ಮಂಡ್ಯ, [ಸೆ.27]: ಮಂಡ್ಯ ಲೋಕಸಭಾ ಚುನಾವಣೆ ವೇಳೆ ಪಕ್ಷೇತರ ಅಭ್ಯರ್ಥಿ  ಸುಮಲತಾ ಅಂಬರೀಶ್ ಪರ ಬಹಿರಂಗವಾಗಿ ಗುರುತಿಸಿಕೊಂಡು ಉಚ್ಚಾಟಿತರಾಗಿದ್ದ ಮುಖಂಡರುಗಳು ಕಾಂಗ್ರೆಸ್ ಗೆ ವಾಪಸ್ ಆಗಿದ್ದಾರೆ.

ಮಂಡ್ಯದ ಕೆ.ಆರ್.ಪೇಟೆ ಗಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರವೀಂದ್ರ ಬಾಬು ಅವರ ಉಚ್ಚಾಟನೆ ಆದೇಶವನ್ನು ಕೆಪಿಸಿಸಿ ವಾಪಸ್ ಪಡೆದುಕೊಂಡಿದೆ. 

Tap to resize

Latest Videos

undefined

2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಮಂಡ್ಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲಾಗಿತ್ತು. ಆದ್ರೆ ಕೆಲ ಕಾಂಗ್ರೆಸ್ ಮುಖಂಡರು ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಅಂಬರೀಶ್ ಅವರ ಪರ ಪ್ರಚಾರದಲ್ಲಿ ತೊಡಗಿದ್ದರು.ಈ ಹಿನ್ನೆಲೆಯಲ್ಲಿ ಕೆಲವರುನ್ನು ಕೆಪಿಸಿಸಿ ಉಚ್ಚಾಟನೆ ಮಾಡಿತ್ತು.

ಆದ್ರೆ ಇದೀಗ ಕೆ.ಆರ್.ಪೇಟೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ಕಾರಣದಿಂದ  ರವೀಂದ್ರ ಬಾಬು ಅವರನ್ನು ಕೆ.ಆರ್.ಪೇಟೆ ಗಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಸುವಂತೆ ಕೆಪಿಸಿಸಿ ಇಂದು [ಶುಕ್ರವಾರ] ಆದೇಶ ಹೊರಡಿಸಿದೆ. ಇನ್ನು ಮಂಡ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಅರವಿಂದ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.

click me!