ಯಾರೇ ಎದುರಾದರೂ ನಾನು ಹೆದರೋಲ್ಲ: ಗುಡುಗಿದ ಸುಮಲತಾ

Kannadaprabha News   | Asianet News
Published : Feb 24, 2021, 03:09 PM ISTUpdated : Feb 24, 2021, 03:32 PM IST
ಯಾರೇ ಎದುರಾದರೂ ನಾನು ಹೆದರೋಲ್ಲ:  ಗುಡುಗಿದ ಸುಮಲತಾ

ಸಾರಾಂಶ

ನನ್ನ ನಡೆ ಸತ್ಯದ ಕಡೆ ಮಾತ್ರ. ಯಾರೆ ನನ್ನ ಹಾದಿಯಲ್ಲಿ ಎದುರಾದರು ಹೋರಾಟ ಮಾತ್ರ ನಿಲ್ಲದು ಎಂದು ಮಂಡ್ಯದ ಸಂಸದೆ ಸುಮಲತಾ ಅಂಬರೀಶ್ ಅಸಮಾಧಾನ ಹೊರಹಾಕಿದ್ದಾರೆ. 

ಮಂಡ್ಯ (ಫೆ.24): ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ನಾನು ಇಟ್ಟಿರುವ ಹೆಜ್ಜೆಯನ್ನು ಯಾರೇ ಎದುರಾದರೂ ಹಿಂದಿಡುವ ಪ್ರಶ್ನೆಯೇ ಇಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್‌ ಫೇಸ್‌ಬುಕ್‌ನಲ್ಲಿ ಗುಡುಗಿದ್ದಾರೆ.

ಅಕ್ರಮ ಗಣಿಗಾರಿಕೆ ಸಂಬಂಧ ಯಾರೇ ಅಡ್ಡಗಾಲು ಹಾಕಿದರೂ ನಾನು ಹೆದರುವುದಿಲ್ಲ. ನನ್ನ ನಡೆ ಸತ್ಯದ ಕಡೆ ಮಾತ್ರ. ಅದು ಎಷ್ಟೇ ಕಷ್ಟವಾದರೂ ಸರಿ. ನೀವು ನನ್ನನ್ನು ಗೆಲ್ಲಿಸಿ ಕಳಿಸಿದ್ದು ಸತ್ಯದ ಪರವಾಗಿ ಧ್ವನಿ ಎತ್ತಲು. ಪಟ್ಟಭದ್ರ ಹಿತಾಸಕ್ತಿಗಳ ನೂರು ದಾಳಕ್ಕೂ ನಾನು ಹಿಂಜರಿಯೋಲ್ಲ. ಅಕ್ರಮ ಗಣಿಗಾರಿಕೆ ವಿರುದ್ಧ ನನ್ನ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ.

ಗುಡಿಬಂಡೆ ಕ್ರಷರ್ ಜಿಲೆಟಿನ್ ಬ್ಲಾಸ್ಟ್: ಸ್ಥಳಕ್ಕೆ ಸುಧಾಕರ್ ಭೇಟಿ

ಶಿವಮೊಗ್ಗದ ಹುಣಸೋಡು, ಚಿಕ್ಕಬಳ್ಳಾಪುರ ಜಿಲೆಟಿನ್‌ ಸ್ಫೋಟ ಪ್ರಕರಣದ ನಂತರವೂ ಅಕ್ರಮ ಗಣಿಗಾರಿಕೆಯನ್ನು ಬೆಂಬಲಿಸುವ ರಾಜಕಾರಣಿಗಳ ಮನುಷ್ಯತ್ವವನ್ನು ಪ್ರಶ್ನಿಸಬೇಕಾಗುತ್ತದೆ. ಶಿವಮೊಗ್ಗದಲ್ಲಿ ನಡೆದ ಮರೆಯುವ ಮುನ್ನ ಮತ್ತೊಂದು ದುರಂತ ಸಂಭವಿಸಿದೆ. ಅಕ್ರಮ ಗಣಿಗಾರಿಕೆ ಜೀವವಿರೋಧಿ ಎಂದು ಘಟನೆ ಕುರಿತು ಬರೆದುಕೊಂಡಿದ್ದಾರೆ.

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ