ಮಂಡ್ಯ : ಕಾಂಗ್ರೆಸ್ ಹಣಿಯಲು ಪುಟ್ಟರಾಜು ಸರ್ಕಸ್

By Web DeskFirst Published Sep 3, 2019, 1:36 PM IST
Highlights

ಕರ್ನಾಟಕ ಹಾಲು ಒಕ್ಕೂಟ ಈಗ ಬಿಜೆಪಿ ಪಾಲಾಗಿದೆ. ಆದರೆ ಮಂಡ್ಯ ಹಾಲು ಒಕ್ಕೂಟವನ್ನು ಜೆಡಿಎಸ್ ತೆಕ್ಕೆಗೆ ತೆಗೆದುಕೊಳ್ಳಲು ಮಾಜಿ ಸಚಿವ ಪುಟ್ಟರಾಜು ಕಾರ್ಯತಂತ್ರ ನಡೆಸಿದ್ದಾರೆ. 

ಮಂಡ್ಯ [ಸೆ.03]:  ಮಂಡ್ಯ ಮನ್ ಮುಲ್ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಜೆಡಿಎಸ್ ತೆಕ್ಕೆಗೆ ತೆಗೆದುಕೊಳ್ಳಲು ಮಾಜಿ ಸಚಿವ ಪುಟ್ಟರಾಜು ಸರ್ಕಸ್ ಮಾಡುತ್ತಿದ್ದಾರೆ. 

ಇದೇ ಸೆಪ್ಟೆಂಬರ್ 8 ರಂದು  ಮನ್ ಮುಲ್ ಚುನಾವಣೆ ನಡೆಯಲಿದ್ದು, ತೀವ್ರ ಪೈಪೋಟಿ ನೀಡುತ್ತಿರುವ ಕಾಂಗ್ರೆಸ್ ಹಣಿಯಲು ಸದಸ್ಯರ ಜೊತೆಗೆ ಖಾಸಗಿ ಸಭೆ ನಡೆಸಿದ ಪುಟ್ಟರಾಜು ಶತ ಪ್ರಯತ್ನ ನಡೆಸಿದ್ದಾರೆ.

ಒಟ್ಟು 12 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಎಲ್ಲಾ ಸ್ಥಾನಗಳನ್ನು ಜೆಡಿಎಸ್ ತೆಕ್ಕೆಗೆ ತೆಗದುಕೊಳ್ಳಲು ಪುಟ್ಟರಾಜು ಯತ್ನಿಸುತ್ತಿದ್ದು, ಕಾಂಗ್ರೆಸಿಗೆ ಪಾಠ ಕಲಿಸಬೇಕು ಎಂದು ಒಳಗೊಳಗೆ ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ.   

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹಲವು ವರ್ಷಗಳಿಂದ ಜೆಡಿಎಸ್ ನಾಯಕ ಎಚ್.ಡಿ ರೇವಣ್ಣ ತೆಕ್ಕೆಯಲ್ಲಿಯೇ ಇದ್ದ KMF ಮೊದಲ ಬಾರಿಗೆ ಅವರ ಕೈ ತಪ್ಪಿದೆ. ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷರಾಗಿದ್ದಾರೆ. ಆದರೆ ಮಂಡ್ಯ ಹಾಲು ಒಕ್ಕೂಟ ಮಾತ್ರ ಜೆಡಿಎಸ್ ಕೈ ತಪ್ಪದಿರಲು ಪುಟ್ಟರಾಜು ಶತ ಪ್ರಯತ್ನ ನಡೆಸಿದ್ದಾರೆ.

click me!