ಕಬಿನಿ ಖಾಲಿಯಾದ ಬೆನ್ನಲ್ಲೇ ಕೆಆರ್‌ಎಸ್‌ನಿಂದಲೂ ತಮಿಳುನಾಡಿಗೆ ಕಾವೇರಿ ನೀರು! ರೈತರಿಂದ ಹೆಚ್ಚಾದ ಆಕ್ರೋಶ

Published : Aug 31, 2026, 09:47 AM IST
KRS Dam Water

ಸಾರಾಂಶ

ಕಡಿಮೆ ಒಳಹರಿವಿನ ನಡುವೆಯೂ ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದ್ದು, ಇದು ಮಂಡ್ಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ತಮ್ಮ ಬೆಳೆಗಳಿಗೆ ನೀರಿಲ್ಲದಿದ್ದರೂ, ಸರ್ಕಾರ ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ರೈತರು ಖಂಡಿಸಿದ್ದಾರೆ. ಜಲಾಶಯದ ಒಳಹರಿವಿಗಿಂತ ಹೊರಹರಿವು ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಮಂಡ್ಯ (ಆ.31): ರಾಜ್ಯದಲ್ಲಿ ಕಾವೇರಿ ನೀರು ಹಂಚಿಕೆ ವಿವಾದ ಮತ್ತೊಮ್ಮೆ ಉಲ್ಬಣಗೊಳ್ಳುವ ಲಕ್ಷಣಗಳು ಕಾಣಿಸಿಕೊಂಡಿವೆ. ಇಷ್ಟು ದಿನ ಕಬಿನಿ ಜಲಾಶಯದಿಂದ ತಮಿಳುನಾಡಿಗೆ ಹರಿಯುತ್ತಿದ್ದ ಕಾವೇರಿ ನೀರು, ಇದೀಗ ಮಂಡ್ಯ ಜಿಲ್ಲೆಯ ಜೀವನಾಡಿ ಕೃಷ್ಣರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟೆಯಿಂದಲೂ ತಮಿಳುನಾಡಿಗೆ ಹರಿಯಲು ಆರಂಭಿಸಿದೆ. ಇದು ಸ್ಥಳೀಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಒಳಹರಿವಿಗಿಂತ ಹೊರಹರಿವೇ ಹೆಚ್ಚು:

ಕೆಆರ್‌ಎಸ್ ಜಲಾಶಯಕ್ಕೆ ಬರುವ ನೀರಿಗಿಂತ ಹೊರಹೋಗುವ ನೀರಿನ ಪ್ರಮಾಣವೇ ಹೆಚ್ಚಾಗಿದೆ. ಜಲಾಶಯದ ಇಂದಿನ ಒಳಹರಿವು ಕೇವಲ 5,426 ಕ್ಯೂಸೆಕ್ ಇದ್ದರೆ, ತಮಿಳುನಾಡಿಗೆ ಹರಿಸುತ್ತಿರುವ ಹೊರಹರಿವು ಬರೋಬ್ಬರಿ 7,170 ಕ್ಯೂಸೆಕ್ ತಲುಪಿದೆ. ದಿನದಿಂದ ದಿನಕ್ಕೆ ಕಾವೇರಿ ನಡಿಗೆ ನೀರು ಹರಿಸುವ ಪ್ರಮಾಣ ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.

ಸರ್ಕಾರದ ಧೋರಣೆಗೆ ರೈತರ ತೀವ್ರ ಖಂಡನೆ:

ಮಂಡ್ಯ ಭಾಗದ ನಮ್ಮದೇ ರೈತರ ಕೃಷಿ ಬೆಳಗಳಿಗೆ ನೀರು ಕೊಡುವುದಿಲ್ಲ ಎಂದು ಹೇಳುತ್ತಿರುವ ರಾಜ್ಯ ಸರ್ಕಾರ, ಮತ್ತೊಂದೆಡೆ ತಮಿಳುನಾಡಿನ ಕೃಷಿಗೆ ಮಾತ್ರ ಯಾವುದೇ ಅಡೆತಡೆಯಿಲ್ಲದೆ ನಿರಂತರವಾಗಿ ಕಾವೇರಿ ನೀರು ಹರಿಸುತ್ತಿರುವುದಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದೆ. 'ಒಂದೆಡೆ ನಮ್ಮ ರೈತರಿಗೆ ನೀರನ್ನೇ ಬಿಡುವುದಿಲ್ಲ ಎಂದು ಹೇಳುವ ಸರ್ಕಾರ, ಮತ್ತೊಂದೆಡೆ ಕದ್ದುಮುಚ್ಚಿ ಹೆಚ್ಚುವರಿಯಾಗಿ ನೀರು ಹರಿಸುತ್ತಿರುವುದು ರೈತದ್ರೋಹಿ ನೀತಿಯಾಗಿದೆ' ಎಂದು ಕೃಷಿಕರು ಆಕ್ರೋಶ ಹೊರಹಾಕಿದ್ದಾರೆ.

ಕೆಆರ್‌ಎಸ್ ಜಲಾಶಯದ ಇಂದಿನ ನೀರಿನ ವಿವರ:

ಗರಿಷ್ಠ ಮಟ್ಟ: 124.80 ಅಡಿ

ಇಂದಿನ ಮಟ್ಟ: 110.04 ಅಡಿ (110.20 ಅಡಿ)

ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ

ಇಂದಿನ ನೀರಿನ ಸಂಗ್ರಹ: 31.381 ಟಿಎಂಸಿ

ಒಳಹರಿವು (Inflow): 5,426 ಕ್ಯೂಸೆಕ್

ಹೊರಹರಿವು (Outflow): 7,170 ಕ್ಯೂಸೆಕ್

ಕಬಿನಿ ಜಲಾಶಯ

ಗರಿಷ್ಠ ನೀರಿನ ಮಟ್ಟ (FRL): 2284 ಅಡಿ

ಪ್ರಸ್ತುತ ನೀರಿನ ಮಟ್ಟ (PRL): 2270.65 ಅಡಿ

ಇಂದಿನ ನೀರಿನ ಸಂಗ್ರಹ: 12 / 19.52 ಟಿಎಂಸಿ

ಒಳಹರಿವು (Inflow): 4,480 ಕ್ಯೂಸೆಕ್

ಹೊರಹರಿವು (Outflow): 8,260 ಕ್ಯೂಸೆಕ್

PREV
Read more Articles on
click me!

Recommended Stories

ಪ್ರಚೋದನೆ ಕೊಟ್ಟಿದ್ದು ಇನ್ಸ್‌ಪೆಕ್ಟರ್, ಗೃಹ ಸಚಿವರ ಒತ್ತಡದಿಂದ ನನ್ನ ಮೇಲೆ ಕ್ರಮ ಎಂದ ಪ್ರತಾಪ್ ಸಿಂಹ
ಕೃಷಿ ಮಾಡುತ್ತಿದ್ದ 39 ವರ್ಷದ ಯುವಕನಿಗೆ ಸಿಗದ ಕನ್ಯೆ?: ಮನನೊಂದು ವಿಷ ಸೇವಿಸಿ ಆತ್ಮ*ತ್ಯೆ!