ಮಂಡ್ಯ: ಮನೆ, ಜಮೀನಿಗೆ ನುಗ್ಗಿದಳು ಹೇಮೆ

By Kannadaprabha NewsFirst Published Aug 11, 2019, 9:59 AM IST
Highlights

ಕಿಕ್ಕೇರಿಯಲ್ಲಿ ಹೇಮಾವತಿ ನದಿಗೆ ಲಕ್ಷಗಟ್ಟಲೆ ಕ್ಯುಸೆಕ್‌ ನೀರು ಬಿಟ್ಟಿರುವ ಪರಿಣಾಮ ಸಮೀಪದ ಮಂದಗೆರೆ ಸೇರಿ ಆಸು-ಪಾಸಿನ ಗ್ರಾಮಗಳ ಮನೆ, ಜಮೀನುಗಳಿಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಬೇವಿನಹಳ್ಳಿ ಗ್ರಾಮದಲ್ಲಿ ಅಂಕನಾಥೇಶ್ವರ ದೇವಾಲಯ ಮುಳುಗಡೆಯಾಗಿದೆ. ಮಂದಗೆರೆಯಲ್ಲಿರುವ ಅಕ್ಕಿಹೆಬ್ಬಾಳು, ಹೊಳೆನರಸೀಪುರ ಮೊದಲಾದ ಹತ್ತಾರು ಗ್ರಾಮಗಳಿಗೆ ಸಂಪರ್ಕಿಸುತ್ತಿದ್ದ ಸೇತುವೆ ಮೇಲೆ ನಿರು ಹರಿಯುತ್ತಿದೆ. ಇದರಿಂದ ಸಾರ್ವಜನಿಕ ಸಂಪರ್ಕ ತಾತ್ಕಾಲಿಕವಾಗಿ ಸ್ಥಗಿತವಾಗಿದೆ.

ಮಂಡ್ಯ(ಆ.11): ಕಿಕ್ಕೇರಿಯಲ್ಲಿ ಹೇಮಾವತಿ ನದಿಗೆ ಲಕ್ಷಗಟ್ಟಲೆ ಕ್ಯುಸೆಕ್‌ ನೀರು ಬಿಟ್ಟಿರುವ ಪರಿಣಾಮ ಸಮೀಪದ ಮಂದಗೆರೆ ಸೇರಿ ಆಸು-ಪಾಸಿನ ಗ್ರಾಮಗಳ ಮನೆ, ಜಮೀನುಗಳಿಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ.

ಶನಿವಾರ 1.25 ಲಕ್ಷ ಕ್ಯುಸೆಕ್‌ ನೀರನ್ನು ಗೊರೂರು ಅಣೆಕಟ್ಟೆಯಿಂದ ಬಿಡಲಾಗಿದೆ. ನದಿಪಾತ್ರದ ರೈತರ ಜಮೀನುಗಳು ಮುಳುಗಡೆಯಾಗಿವೆ. ಬೇವಿನಹಳ್ಳಿಯ ರೈತ ಬಿ.ವಿ. ನಾಗರಾಜು ಜಮೀನಿನಲ್ಲಿದ್ದ ತೆಂಗಿನಕಾಯಿ, ಜಾನುವಾರುಗಳಿಗಾಗಿ ಸಂಗ್ರಹಿಸಿಟ್ಟಿದ್ದ ಮೇವು ನೀರಿನಲ್ಲಿ ಕೊಚ್ಚಿ ಹೋಗಿದೆ. ವಾಸವಾಗಿದ್ದ ಮಣ್ಣಿನ ಮನೆ ಭಾಗಶಃ ಕುಸಿದಿದೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಚಿಕ್ಕಮಂದಗೆರೆಯಲ್ಲಿನ ರೈತ ದೊಡ್ಡೇಗೌಡ, ಅಣ್ಣೇಗೌಡ, ಪುಟ್ಟತಮ್ಮೇಗೌಡ, ಕಳಸೇಗೌಡ, ಕಿಕ್ಕೇರಿಗೌಡ, ಕೃಷ್ಣನಾಯಕ, ಮಂಜೇಗೌಡ, ಲೋಕೇಶ… ಅವರ ಜಮೀನಿಗೆ ನುಗ್ಗಿ ಬೆಳೆದಿದ್ದ ಹಲಸಂದೆ, ಜೋಳ, ಕಬ್ಬಿನ ಬೆಳೆ ನಾಶಮಾಡಿದೆ.

ಸೇತುವೆ ಮುಳುಗಡೆ:

ಬೇವಿನಹಳ್ಳಿ ಗ್ರಾಮದಲ್ಲಿ ಅಂಕನಾಥೇಶ್ವರ ದೇವಾಲಯ ಮುಳುಗಡೆಯಾಗಿದೆ. ಮಂದಗೆರೆಯಲ್ಲಿರುವ ಅಕ್ಕಿಹೆಬ್ಬಾಳು, ಹೊಳೆನರಸೀಪುರ ಮೊದಲಾದ ಹತ್ತಾರು ಗ್ರಾಮಗಳಿಗೆ ಸಂಪರ್ಕಿಸುತ್ತಿದ್ದ ಸೇತುವೆ ಮೇಲೆ ನಿರು ಹರಿಯುತ್ತಿದೆ. ಇದರಿಂದ ಸಾರ್ವಜನಿಕ ಸಂಪರ್ಕ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಇದೇ ರೀತಿ 1991ರಲ್ಲಿ ಮಂದಗೆರೆಯಲ್ಲಿ ಪ್ರವಾಹ ಬಂದಿತ್ತು. ಆಗ 1.50ಲಕ್ಷ ಕ್ಯುಸೆಕ್‌ ನೀರು ಗೊರೂರು ಅಣೆಕಟ್ಟಿನಿಂದ ಬಿಡಲಾಗಿತ್ತು. ಇಂದು 1.25ಲಕ್ಷ ಕ್ಯೂಸೆಕ್‌ ನೀರು ಬರುತ್ತಿದೆ.

ಜಿಲ್ಲಾಧಿಕಾರಿ ಡಾ. ವೆಂಕಟೇಶ್‌ ನೆರೆ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ತಹಸೀಲ್ದಾರ್‌ ಎಂ. ಶಿವಮೂರ್ತಿ, ಡಿವೈಎಸ್ಪಿ ವಿಶ್ವನಾಥ್‌, ಸಿಪಿಐ ಸುಧಾಕರ್‌, ಪಿಎಸ್‌ಐ ಚಂದ್ರಶೇಖರ್‌ ಸ್ಥಳದಲ್ಲಿದ್ದರು.

115 ಅಡಿ ತಲುಪಿದ KRS: 60 ಸಾವಿರ ಕ್ಯುಸೆಕ್ ನೀರು ಬಿಡುಗಡೆ

click me!