ರಮೇಶ್ ಜಾರಕಿಹೊಳಿ ಮಂಡ್ಯಕ್ಕೆ ಬರಲಿ : ಸವಾಲ್

Kannadaprabha News   | Asianet News
Published : Mar 30, 2021, 02:58 PM IST
ರಮೇಶ್ ಜಾರಕಿಹೊಳಿ ಮಂಡ್ಯಕ್ಕೆ ಬರಲಿ : ಸವಾಲ್

ಸಾರಾಂಶ

ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣ ದಿನದಿಂದ ದಿನಕ್ಕೆ ತಿರುವುಗಳನ್ನು ಪಡೆಯುತ್ತಲೇ ಇದೆ. ವಿಚಾರಣೆಯೂ ಮುಂದುವರಿದಿದೆ. ಇದೇ ವೇಳೆ ರಮೇಶ್‌ ಜಾರಕಿಹೊಳಿಗೆ ಮಂಡ್ಯಕ್ಕೆ ಬರಲು ಸವಾಲು ಹಾಕಿದ್ದಾರೆ. 

ಮದ್ದೂರು (ಮಾ.30):  ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ತಾಕತ್ತಿದ್ದರೆ ಮಂಡ್ಯ ನೆಲದಲ್ಲಿ ಬಂದು ತಮ್ಮ ಧೈರ್ಯ ಪ್ರದರ್ಶಿಸಲಿ ಎಂದು ಕೆಪಿಸಿಸಿ ಸದಸ್ಯ ಎಸ್‌.ಗುರುಚರಣ್‌ ಸವಾಲು ಹಾಕಿದರು.

ಮಂಡ್ಯದ ಮದ್ದೂರಿನಲ್ಲಿ ಸೀಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಉಪಚುನಾವಣೆ ಪ್ರಚಾರಕ್ಕೆ ತೆರಳಿದ್ದ ಡಿಕೆಶಿ ಅವರ ಕಾರಿಗೆ ಚಪ್ಪಲಿ ತೂರಿ, ಕಪ್ಪು ಬಾವುಟ ಪ್ರದರ್ಶನ ಮಾಡಿರುವುದನ್ನು ತೀವ್ರವಾಗಿ ಖಂಡಿಸಿದರು. 

ರಮೇಶ್ ಜಾರಕಿಹೊಳಿ ಬಳಿ ಯಡಿಯೂರಪ್ಪ ಸೀಡಿ : ಹೊಸ ಬಾಂಬ್ ...

ಡಿ.ಕೆ.ಶಿವಕುಮಾರ್‌ ರಾಜಕೀಯವಾಗಿ ಧೈರ್ಯವಾಗಿದ್ದ ಕಾರಣ ಬೆಳಗಾವಿ ಚುನಾವಣಾ ಪ್ರಚಾರಕ್ಕೆ ಹೋಗಿದ್ದಾರೆ. ಈ ವೇಳೆ ಅವರ ಮೇಲೆ ಜಾರಕಿ ಹೊಳಿ ಬೆಂಬಲಿಗರು ಕಾರಿಗೆ ಚಪ್ಪಲಿ ತೂರಿ ತಮ್ಮ ದರ್ಪತೋರಿದ್ದಾರೆ. ರಮೇಶ್‌ ಜಾರಕಿ ಹೊಳಿ ಮತ್ತು ಬೆಂಬಲಿಗರಿಗೆ ಧೈರ್ಯವಿದ್ದರೆ ಮಂಡ್ಯಕ್ಕೆ ಬರಲಿ ಎಂದು ಸವಾಲು ಹಾಕಿದರು.

PREV
click me!

Recommended Stories

ಏಷ್ಯಾನೆಟ್ ಕನ್ನಡಪ್ರಭ ಸುವರ್ಣ ನ್ಯೂಸ್ ವತಿಯಿಂದ ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ
ಉತ್ತರ ಕನ್ನಡ: ಯುವಜನತೆಯಲ್ಲಿ ಹೆಚ್ಚುತ್ತಿದೆ ಹೆಚ್‌ಐವಿ ಸೋಂಕು, ಜೆನ್ ಝೀ ಕಿಡ್‌ ಗಳಲ್ಲೇ ಅತೀ ಹೆಚ್ಚು!