Mandya: ಒಂದು ವರ್ಷದಲ್ಲಿ ಡೈರಿಗೆ ಬರೋಬ್ಬರಿ 87 ಸಾವಿರ ಲೀ. ಹಾಲು ಪೂರೈಸಿದ ಕುಟುಂಬ

Published : Sep 26, 2026, 02:13 PM IST
Melukote

ಸಾರಾಂಶ

ಮೇಲುಕೋಟೆ ಡೈರಿಗೆ ವಾರ್ಷಿಕ 87 ಸಾವಿರ ಲೀಟರ್ ಹಾಲು ಸರಬರಾಜು ಮಾಡುವ ಮೂಲಕ ಸಜ್ಜೆಹಟ್ಟಿ ತಿರುನಾರಾಯಣ ಅಯ್ಯಂಗಾರ್‌ ಕುಟುಂಬ ಮಹತ್ತರ ಸಾಧನೆ ಮಾಡಿದೆ. ಸಂಘದ ಮಹಾಸಭೆಯಲ್ಲಿ ಈ ಕುಟುಂಬ ಸೇರಿದಂತೆ ಹೆಚ್ಚು ಹಾಲು ನೀಡಿದವರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಮಂಡ್ಯ: ಡೇರಿಗೆ ವಾರ್ಷಿಕ 87 ಸಾವಿರ ಲೀಟರ್ ಹಾಕುವ ಮೂಲಕ ಚೆಲುವನಾರಾಯಣಸ್ವಾಮಿ ದೇವಾಲಯದ ಸ್ಥಾನೀಕರಾದ ಸಜ್ಜೆಹಟ್ಟಿ ತಿರುನಾರಾಯಣ ಅಯ್ಯಂಗಾರ್‌ ಕುಟುಂಬ ಮಹತ್ತರ ಸಾಧನೆ ಮಾಡಿದೆ ಎಂದು ಅಧ್ಯಕ್ಷ ಕಾಡೇನಹಳ್ಳಿ ರಾಮಚಂದ್ರ ತಿಳಿಸಿದರು.

ಸಂಘದ ಮಹಾಸಭೆಯಲ್ಲಿ ಅಭಿನಂದಿಸಿ ಮಾತನಾಡಿ, ವೃತ್ತಿಯಲ್ಲಿ ಸ್ಥಾನೀಕರಾಗಿರುವ ತಿರುನಾರಾಯಣ ಅಯ್ಯಂಗಾರ್‌ ಮತ್ತು ಅವರ ಪುತ್ರ ಎಸ್.ಟಿ ನರಸಿಂಹನ್ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಹಸುಗಳ ಸೇವೆ ಮಾಡುತ್ತಾ ಕಳೆದ ವರ್ಷ ದಿನದ ಎರಡೂ ಹೊತ್ತಿನ ವೇಳೆ 300 ಲೀಟರ್ ಹಾಲು ಸಂಘಕ್ಕೆ ಹಾಕುವ ಮೂಲಕ ಪಶುಸಂಗೋಪನೆಯಲ್ಲಿ ಸಾಧನೆ ಮಾಡಿದ್ದಾರೆ ಎಂದರು.

9 ಲಕ್ಷ 96 ಸಾವಿರ ರು ಆದಾಯ

ಈ ವರ್ಷವೂ ಹೆಚ್ಚು ಹಾಲು ಹಾಕಿದ 5 ಮಂದಿ ಹಾಲು ಉತ್ಪಾದಕರು ಹಾಗೂ ಹೆಚ್ಚು ಶೈಕ್ಷಣಿಕ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳನ್ನು ಅಭಿನಂದಿಸಲಾಗಿದೆ. ಸಂಘ ಸಾಲಿನಲ್ಲಿ 9 ಲಕ್ಷ 96 ಸಾವಿರ ರು ಆದಾಯಗಳಿಸಿದೆ ಎಂದರು.

ಇದನ್ನೂ ಓದಿ: ಹಾಸ್ಟೆಲ್ ವಾರ್ಡನ್ನೋ ಅಥವಾ ಬಾಟಲ್ ವಾರ್ಡನ್ನೋ? ಮನೆಯನ್ನೇ ಮಿನಿಬಾರ್ ಮಾಡಿಕೊಂಡ ಸರ್ಕಾರಿ ಅಧಿಕಾರಿ!

ಸಭೆಯಲ್ಲಿ ಡೇರಿಗೆ ಹೆಚ್ಚು ಹಾಲು ಸರಬರಾಜು ಮಾಡಿದ ಹಾಲು ಉತ್ಪಾದಕರಾದ ತಿರುನಾರಾಯಣ ಅಯ್ಯಂಗಾರ್, ಎಸ್.ಟಿ ನರಸಿಂಹನ್, ಎಂ.ವೈ ವೆಂಕಟೇಶ್, ಬಿ.ಆರ್ ಪುಟ್ಟರಾಜು, ಪರುಶುರಾಮ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಡೇರಿ ಸದಸ್ಯರ ಮಕ್ಕಳಾದ ದರ್ಶಿನಿ, ಕವಿತ ಎಂ.ಎಸ್, ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ತ್ರಿಶಾ.ಡಿ, ಅಮೂಲ್ಯಎಂ.ಎಂ ರನ್ನು ಗೌರವಿಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷ ಎಂ.ಎನ್‌ಕುಮಾರ್, ನಿರ್ದೇಶಕರಾದ ಎಂ.ವೈ ವೆಂಕಟೇಶ, ಎಂ.ಎಸ್‌.ಈರೇಗೌಡ, ಬಲರಾಮ, ನಟರಾಜು, ಅಣ್ಣಯ್ಯಕೆ.ಎನ್‌.ರಾಮಪ್ರಿಯ, ನಂದಕುಮಾರ್‌ ಎಂ.ಎನ್, ಗೀತಾ, ಮಂಜುಳ, ಸಂಘಮಾಜಿ ನಿರ್ದೇಶಕ ಎಂ.ಬಿ ಯೋಗಾನರಸಿಂಹೇಗೌಡ ಸೇರಿದಂತೆ ಎಲ್ಲಾ ಸದಸ್ಯರು ಭಾಗವಹಿಸಿದ್ದರು.

ಇದನ್ನೂ ಓದಿ: ಸರ್ಕಾರ ಮಾತ್ರವಲ್ಲ, ಮಂಡ್ಯದ ಪುರಸಭೆ ಖಾತೆಯಲ್ಲೂ ₹18,000 ಹಣವಿಲ್ಲ; ಬ್ಯಾಂಕ್‌ಗೆ ಹಾಕಿದ್ದ ಚೆಕ್ ಬೌನ್ಸ್!

PREV
Read more Articles on
click me!

Recommended Stories

Shivamogga: ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್’ಗೆ ಜಡೆ ಗ್ರಾಮದ ಪ್ರತಿಭೆ ವಿರಾಟ್
NWKRTC: 120 ಹೆಚ್ಚುವರಿ ವಿಶೇಷ ಸಾರಿಗೆ ಕಾರ್ಯಾಚರಣೆ: ಹುಬ್ಬಳ್ಳಿ, ಬಾಗಲಕೋಟೆ, ಗದಗ ಹಾವೇರಿ