ಸ್ತ್ರೀಯರ ಒಳ ಉಡುಪು ಕದ್ದವ್ನು ಸಿಸಿಟಿವಿಯಿಂದ ಸಿಕ್ಕಿಬಿದ್ದ : ಬುದ್ದಿ ಹೇಳಿದವನ ಮೇಲೆ ಹಲ್ಲೆ

By Web Desk  |  First Published Nov 30, 2019, 11:26 AM IST

ಸ್ತ್ರೀಯರ ಒಳ ಉಡುಪುಗಳನ್ನು ವ್ಯಕ್ತಿಯೋರ್ವ ಕದಿಯುತ್ತಿದ್ದು, ಸಿಸಿಟಿವಿ ಮೂಲಕ ಸಿಕ್ಕಿಬಿದ್ದಿದ್ದಾನೆ. ಆದ್ರೆ ಇದಕ್ಕೆ ಬುದ್ದಿ ಹೇಳಿದವರ ಮೇಲೆಯೇ ಹಲ್ಲೆ ಯತ್ನ ನಡೆದಿದೆ. 


ಶಿವಮೊಗ್ಗ [ನ.30]: ಯುವಕನೋರ್ವ ಸ್ತ್ರೀಯರ ಒಳ ಉಡುಪು ಕಡಿಯುತ್ತಿದ್ದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಇದರಿಂದ ಕರೆದು ಬುದ್ದಿ ಹೇಳಿದ ವ್ಯಕ್ತಿ ಮೇಲೆ ಹಲ್ಲೆ ಮಾಡಲಾಗಿದೆ. 

ಭದ್ರವತಿ ತಾಲೂಕಿನ ಮಾರಶೆಟ್ಟಿಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಶಿಕ್ಷಕ ಸತೀಶ್ ಎಂಬುವವರ ಮನೆಯಲ್ಲಿ ಒಂದು ವಾರದಿಂದ ಸ್ತ್ರೀಯರ ಒಳ ಉಡುಪು ಕದಿಯಲಾಗುತಿತ್ತು. 

Tap to resize

Latest Videos

ಈ ವೇಳೆ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಇದೇ ಗ್ರಾಮದ ಕುಮಾರ ಎಂಬ ಯುವಕ ಈ ಕೃತ್ಯ ಎಸಗುತ್ತಿರುವುದು ತಿಳಿದು ಬಂದಿದೆ. ಈ ವಿಚಾರವನ್ನು ಗ್ರಾಮದ ಮುಖಂಡರಿಗೆ ತಿಳಿಸಿ ಪಂಚಾಯಿತಿ ನಡೆಸಿ ಬುದ್ದಿ ಹೇಳಲಾಗಿತ್ತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ ಕೆಲವರು ಕುಮಾರ್ ಪರ ವಹಿಸಿ ಮಾತನಾಡಿ ಸತೀಶ್ ಅವರ ಮೇಲೆ ಹಲ್ಲೆ ಮುಂದಾಗಿದ್ದಲ್ಲೇ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. 

ಸದ್ಯ ಈ ಸಂಬಂಧ ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಕುಮಾರ್ ಕುಟುಂಬಸ್ಥರಿಂದಲೂ ಪ್ರತಿದೂರು ದಾಖಲಾಗಿದೆ. 

click me!