ಬಸ್ಸಲ್ಲಿ ಪ್ರಯಾಣಿಕ ಸಾವು : ನಡುರಸ್ತೆಯಲ್ಲಿ ಶವ ಇಳಿಸಿ ಚಾಲಕ ಎಸ್ಕೇಪ್‌

Kannadaprabha News   | Asianet News
Published : Mar 23, 2021, 07:17 AM IST
ಬಸ್ಸಲ್ಲಿ ಪ್ರಯಾಣಿಕ ಸಾವು :  ನಡುರಸ್ತೆಯಲ್ಲಿ ಶವ ಇಳಿಸಿ ಚಾಲಕ ಎಸ್ಕೇಪ್‌

ಸಾರಾಂಶ

ಪ್ರಯಾಣಿಕನೋರ್ವ ಸಂಚರಿಸುತ್ತಿದ್ದ ಬಸ್ಸಿನಲ್ಲಿ ಮೃತಪಟ್ಟಿದ್ದು ಶವವನ್ನ ಮಧ್ಯ ರಸ್ತೆಯಲ್ಲಿ ಇಳಿಸಿ ಚಾಲಕ ಪರಾರಿಯಾಗಿದ್ದಾನೆ. 

ನೆಲಮಂಗಲ (ಮಾ.23): ಅನಾರೋಗ್ಯದಿಂದ ಬಳಲುತ್ತಿದ್ದ ಯುವಕನೊಬ್ಬ ಖಾಸಗಿ ಬಸ್‌ನಲ್ಲಿ ಸಾವನ್ನಪ್ಪಿದ್ದು, ನಡುರಸ್ತೆಯಲ್ಲೇ ಶವ ಇಳಿಸಿ ಬಸ್‌ ಚಾಲಕ ಪರಾರಿಯಾಗಿರುವ ಘಟನೆ ನೆಲಮಂಗಲ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿಗೆ ತೆರಳಲು ತುಮಕೂರು ಕಡೆಯಿಂದ ಖಾಸಗಿ ಬಸ್‌ನಲ್ಲಿ ಬಂದ ಯುವಕ ಮಾರ್ಗ ಮಧ್ಯೆ ಅನಾರೋಗ್ಯದಿಂದ ಪ್ರಯಾಣಿಸುತ್ತಿದ್ದ ಬಸ್ಸಿನಲ್ಲಿ ಸಾವನ್ನಪ್ಪಿದ್ದಾನೆ. ಬಸ್ಸಿನಲ್ಲಿ ಸಾವನ್ನಪ್ಪಿದ ಯುವಕನನ್ನು ನೆಲಮಂಗಲದ ನವಯುಗ ಟೋಲ್‌ ಬಳಿ ಶವ ಇಳಿಸಿ ಬಸ್‌ ಚಾಲಕ ಪರಾರಿಯಾಗಿದ್ದಾನೆ.

ಏ.7ರಿಂದ ರಸ್ತೆಗಿಳಿಯಲ್ಲ KSRTC ಬಸ್‌ಗಳು : ಪ್ರಯಾಣಿಕರೆ ಎಚ್ಚರ ...

ಈ ಘಟನೆಯಿಂದ 2ನೇ ಕೊರೋನಾ ನಡುವೆ ಆತಂಕಕ್ಕೊಳಗಾದ ಜನರು, ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವಕನ ಶವ ಸತತವಾಗಿ ಕಳೆದ ಮೂರು ಗಂಟೆಯಿಂದ ಅನಾಥವಾಗಿ ಬಿದ್ದಿದ್ದರೂ ಈ ಬಗ್ಗೆ ಟೋಲ್‌ ಸಿಬ್ಬಂದಿ ಶವದ ಬಗ್ಗೆ ಜಾಗೃತಿ ವಹಿಸದೇ ನಿರ್ಲಕ್ಷಿಸಿದ್ದಾರೆ. ಮೂರು ಗಂಟೆ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ನೆಲಮಂಗಲ ಆಸ್ಪತ್ರೆಗೆ ಸಾಗಿಸಿದ್ದಾರೆ.

PREV
click me!

Recommended Stories

ಬೆಂಗಳೂರು ಜನರಿಗೆ ಹೊಟ್ಟೆತುಂಬಾ ಬಿರಿಯಾನಿ ಬಾಡೂಟ ಕೊಟ್ಟ ಕುಟುಂಬ ಸಾಲದ ಸುಳಿಗೆ ಸಿಲುಕಿ ಆತ್ಮ*ಹತ್ಯೆ!
ಗಡೀಪಾರು ಸಂಕಷ್ಟದಲ್ಲಿ Mahesh Shetty Timarodi: ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ ದೇಗುಲದಲ್ಲಿ ಪ್ರಾರ್ಥನೆ