ಹಾಡಹಗಲೇ ಸ್ವಂತ ಮಗನನ್ನು ಕಿಡ್ನ್ಯಾಪ್ ಮಾಡಿದ ತಂದೆ..!

By Suvarna News  |  First Published Feb 5, 2020, 12:21 PM IST

ಮಕ್ಕಳನ್ನು ಕಿಡ್ನ್ಯಾಪ್ ಮಾಡುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಈ ಬಗ್ಗೆ ಪೋಷಕರು ಹೆಚ್ಚು ಜಾಗೃತರಾಗಿಯೂ ಇರುತ್ತಾರೆ. ಆದರೆ ಹೆತ್ತ ತಂದೆಯೇ ಪುತ್ರನನ್ನು ಅಪಹರಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.


ಬೆಂಗಳೂರು(ಫೆ.05): ಮಕ್ಕಳನ್ನು ಕಿಡ್ನ್ಯಾಪ್ ಮಾಡುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಈ ಬಗ್ಗೆ ಪೋಷಕರು ಹೆಚ್ಚು ಜಾಗೃತರಾಗಿಯೂ ಇರುತ್ತಾರೆ. ಆದರೆ ಹೆತ್ತ ತಂದೆಯೇ ಪುತ್ರನನ್ನು ಅಪಹರಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ತಂದೆ ಬೆಂಗಳೂರಿನಲ್ಲಿ ಮಗನನ್ನೇ ಕಿಡ್ನ್ಯಾಪ್ ಮಾಡಿದ್ದು, ಹಾಡಹಗಲಲ್ಲೇ ಕಿಡ್ನ್ಯಾಪ್ ದೃಶ್ಯ ನೋಡಿ ಸಾರ್ವಜನಿಕರು ಹೌಹಾರಿದ್ದಾರೆ. ಮಗನನ್ನ ಸ್ಕೂಟರ್ ಮೇಲೆ ಕೂರಿಸಿ ಅಮಾನುಷವಾಗಿ ಹೊತ್ತೊಯ್ಯಲಾಗಿದೆ.

Tap to resize

Latest Videos

ಸೆಕ್ಸ್‌ಗೆ ಸಹಕರಿಸದ ಚಿಕ್ಕಮ್ಮನನ್ನೇ ಕೊಂದ ಕಾಮುಕ..!

ಕಿಡ್ನ್ಯಾಪ್‌ ನೋಡಿದ ಸಾರ್ವಜನಿಕರು ಬೆಂಗಳೂರು ಪೊಲೀಸ್ ಪೇಜ್‌ಗೆ ಕಿಡ್ನ್ಯಾಪ್ ದೃಶ್ಯದ ಫೋಟೋ ಹಾಕಿದ್ದಾರೆ. ಫೇಸ್‌ಬುಕ್‌ನಲ್ಲಿ ಫೋಟೋ ನೋಡಿ ಆಗ್ನೇಯ ವಿಭಾಗದ ಪೊಲೀಸ್ ಟೀಂ ಫೀಲ್ಡಿಗಿಳಿದಿದ್ದರು. ಫೀಲ್ಡಿಗಿಳಿದ ಪೊಲೀಸರು ಫೋರಂ ಮಾಲ್ ಸಮೀಪ ಸ್ಕೂಟರ್ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ವಂತ ಮಗನನ್ನೇ ಕಿಡ್ನ್ಯಾಪ್ ಮಾಡಿದ್ದೇಕೆ..?

ಮಗನನ್ನೇ ಕಿಡ್ನ್ಯಾಪ್ ಮಾಡೋಕೆ ಇದ್ದ ಅಸಲಿ ಕಾರಣ ತಿಳಿದು ಪೊಲೀಸರೇ ಶಾಕ್ ಆಗಿದ್ದಾರೆ. ಕುಡುಕ ತಂದೆಯನ್ನು ಹಿಡಿದು ಪೊಲೀಸರು ವಿಚಾರಣೆ ನಡೆಸಿದ್ದು, ಈ ಸಂದರ್ಭ ಆರೋಪಿ ಶಾಕಿಂಗ್ ವಿಚಾರ ಬಾಯ್ಬಿಟ್ಟಿದ್ದಾನೆ.

ಪತ್ನಿ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿಕೊಂಡಿದ್ದ ಪತಿರಾಯ ಹೆಂಡತಿ ಮೇಲಿನ ಕೋಪಕ್ಕೆ ಮಗನನ್ನ ಕಿಡ್ನ್ಯಾಪ್ ಮಾಡಿದ್ದ. ಕಂಠ ಪೂರ್ತಿ ಕುಡಿದು ಹೆಂಡತಿ ಜೊತೆ ಜಗಳ ಮಾಡಿದ್ದ ಬೆಳ್ಳಂದೂರು ಮೂಲದ ವ್ಯಕ್ತಿ ಪತ್ನಿಗೆ ಆತಂಕವಾಗಲಿ ಎಂದು ಮಗನನ್ನೇ ಕಿಡ್ನ್ಯಾಪ್ ಮಾಡಿ ಹೈಡ್ರಾಮ ಸೃಷ್ಟಿ ಮಾಡಿದ್ದಾನೆ.

ಮದುವೆ ನಿರಾಕರಿಸಿದ ಅತ್ತೆ ಮಗಳ ಕಿಡ್ನಾಪ್, ಬಲವಂತವಾಗಿ ತಾಳಿ ಕಟ್ಟಿದ!

ಟೂ ವೀಲರ್‌ನ ಫುಟ್ರೆಸ್ಟ್ ಮೇಲೆ ಮಗುವನ್ನ ಮಲಗಿಸಿಕೊಂಡು ಹೊತ್ತೊಯ್ಯಲಾಗಿದ್ದು, ಮೇಲ್ನೋಟಕ್ಕೆ ಆ ದೃಶ್ಯ ಕಿಡ್ನ್ಯಾಪ್ ರೀತಿ ಕಂಡು ಬಂದಿದ್ದರಿಂದ ಕೋರಮಂಗಲ ಮೂಲದ ಯುವತಿ ಪೊಲೀಸ್ರಿಗೆ ಕರೆ ಮಾಡಿ ಘಟನೆ ಬಗ್ಗೆ ವಿವರಿಸಿದ್ದಾರೆ. ಕೋರಮಂಗಲ ಪೊಲೀಸರು ಕುಡುಕ ತಂದೆಗೆ ರಿಮ್ಯಾಂಡ್ ವಿಧಿಸಿದ್ದು, ಇನ್ನೊಮ್ಮೆ ಹೀಗೆಲ್ಲಾ ಮಾಡಿದ್ರೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.

click me!