ಶಿವಮೊಗ್ಗ : ದುಬೈನಿಂದ ವಾಟ್ಸ್ ಆ್ಯಪ್‌ ಮೂಲಕ ತಲಾಕ್ ನೀಡಿದ ಪತಿ!

By Kannadaprabha NewsFirst Published Sep 19, 2019, 11:02 AM IST
Highlights

ಶಿವಮೊಗ್ಗದ ಮಹಿಳೆಗೆ ದುಬೈನಿಂದ ಪತಿಯೋರ್ವ ವಾಟ್ಸಾಪ್ ಮೂಲಕವೇ ತ್ರಿವಳಿ ತಲಾಕ್ ನೀಡಿದ ಘಟನೆ ನಡೆದಿದೆ. 

ಶಿವಮೊಗ್ಗ [ಸೆ.19]:  ಭಾರತದಲ್ಲಿ ಟ್ರಿಪಲ್‌ ತಲಾಖ್‌ ವಿರುದ್ಧ ಹೊಸ ಕಾನೂನು ಜಾರಿ ನಡುವೆಯೇ ವಾಟ್ಸ್‌ಆ್ಯಪ್‌ ಮೆಸೇಜ್‌ ಮೂಲಕ ದುಬೈಯಿಂದ ಪತಿರಾಯ ತನ್ನ ಪತ್ನಿಗೆ ತಲಾಖ್‌ ನೀಡಿದ ಘಟನೆ ನಡೆದಿದೆ..

ಶಿವಮೊಗ್ಗ ನಗರದ ಟ್ಯಾಂಕ್‌ ಮೊಹಲ್ಲಾ ನಿವಾಸಿಯಾಗಿರುವ ಮಹಿಳೆ. ಕಳೆದ 20 ವರ್ಷದ ಹಿಂದೆ ಅದೇ ಪ್ರದೇಶದ ಮುಸ್ತಫಾ ಬೇಗ್‌ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರು ಅನ್ಯೋನ್ಯವಾಗಿಯೇ ಸಂಸಾರವನ್ನು ಸಾಗಿಸುತ್ತಿದ್ದರು. ದುಬೈನಲ್ಲಿ ಮುಸ್ತಫಾ ಸಿಸಿ ಕ್ಯಾಮರಾ ಹಾಗೂ ಲ್ಯಾಪ್‌ ಟಾಪ್‌ ಟೆಕ್ನಿಶಿಯನ್‌ ಆಗಿ ಕೆಲಸ ಮಾಡುತ್ತಿದ್ದು, ವರ್ಷಕ್ಕೆ 2 ಬಾರಿ ಭಾರತಕ್ಕೆ ಬಂದು ಕುಂಟುಂಬದೊಂದಿಗೆ ಇರುತ್ತಿದ್ದರು. ತಿಂಗಳಿಗೆ 13 ಸಾವಿರ ಹಣವನ್ನು ಕಳುಹಿಸಿಕೊಡುತ್ತಿದ್ದರು.

ಆದರೆ ಅದೇನಾಯ್ತೋ ಗೊತ್ತಿಲ್ಲ ಜನವರಿಯಲ್ಲಿ ಮನೆಗೆ ಬಂದು ನಂತರ ದುಬೈಗೆ ಹಿಂತಿರುಗಿದ ಮುಸ್ತಫಾ ವಾಟ್ಸ್‌ ಆ್ಯಪ್‌ ಮೂಲಕ ತಲಾಖ್‌ ತಲಾಖ್‌ ತಲಾಖ್‌ ಎಂದು ಮೆಸೇಜ್‌ ಮಾಡುವ ಮೂಲಕ ತಲಾಖ್‌ ನೀಡಿದ್ದಾರೆ. ಪತಿಯನ್ನು ತಲಾಖ್‌ ನೀಡಬೇಡಿ ಎಂದು ಮಹಿಳೆ ಕೇಳಿಕೊಂಡಿದ್ದಾರೆ. ಆದರೂ ಸಹ ಇದಕ್ಕೆ ಒಪ್ಪಿಕೊಳ್ಳದ ಮುಸ್ತಫಾ ತಲಾಖ್‌ ನೀಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಲಾಖ್‌ ಪದ್ಧತಿಗೆ ಭಾರತದಲ್ಲಿ ನಿಷೇಧವಿದ್ದರೂ ಪತಿ ತಲಾಖ್‌ ನೀಡಿದ್ದಾರೆ ಎಂದು ಮಹಿಳೆ ಠಾಣೆಯ ಮೆಟ್ಟಿಲೇರಿದ್ದರೂ ಪೊಲೀಸರು ಮುಸ್ತಾಪನ ಅಣ್ಣನ ಕುಮ್ಮಕ್ಕಿನಿಂದ ಪ್ರಕರಣ ದಾಖಲಿಸಿಕೊಳ್ಳಲು ಆರಂಭದಲ್ಲಿ ಹಿಂದೇಟು ಹಾಕಿದ್ದರು. ಇದೀಗ ದೂರು ದಾಖಲಿಸಿಕೊಂಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!