ವಿಜಯಪುರ: ಎರಡು ಪ್ರತ್ಯೇಕ ಜಾತ್ರೆಗಳಲ್ಲಿ ಅವಘಡ, ರಥದ ಮೇಲಿಂದ ಬಿದ್ದು ವ್ಯಕ್ತಿ ಸಾವು, ಮತ್ತೋರ್ವನಿಗೆ ಗಂಭೀರ ಗಾಯ

By Girish Goudar  |  First Published Apr 6, 2023, 8:25 PM IST

ಓರ್ವ ವ್ಯಕ್ತಿ ರಥದ ಮೇಲಿದ್ದ ಬಿದ್ದು ಸಾವು, ಇನ್ನೋರ್ವನ ಕಾಲಿನ ಮೇಲೆ ಹರಿದ ಕಲ್ಲಿನ ಚಕ್ರ, ಒಂದೇ ಸಮಯಕ್ಕೆ ಎರಡು ರಥೋತ್ಸವದಲ್ಲಿ ಅವಘಡ, ಭಕ್ತರಲ್ಲಿ ಆತಂಕ 


ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ(ಏ.06):  ಗುಮ್ಮಟನಗರಿ ವಿಜಯಪುರ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ರಥೋತ್ಸವಗಳಲ್ಲಿ ಅವಘಡ ಸಂಭವಿಸಿವೆ.‌ ಸಿಂದಗಿ ತಾಲ್ಲೂಕಿನಲ್ಲಿ ವ್ಯಕ್ತಿ ರಥೋತ್ಸವ ವೇಳೆ ರಥದ ಮೇಲಿಂದ ಬಿದ್ದು ಸಾವನ್ನಪ್ಪಿದರೆ, ಮುದ್ದೇಬಿಹಾಳ ತಾಲೂಕಿನಲ್ಲಿ ಚಲಿಸುತ್ತಿದ್ದ ರಥದ ಕಲ್ಲಿನ ಚಕ್ರಕ್ಕೆ ಯುವಕ ಸಿಲುಕಿ ಗಂಭೀರವಾಗಿ ಗಾಯಗೊಂಡ ಘಟನೆಗಳು ನಡೆದಿದೆ. ಈ ಎರಡು ಘಟನೆಗಳು ಭಕ್ತರಲ್ಲಿ ಆತಂಕ ಮೂಡಿಸಿವೆ..

Latest Videos

undefined

ಗೊಲ್ಲಾಳೇಶ್ವರ ರಥೋತ್ಸವ ವೇಳೆ ಮೇಲಿದ್ದ ಬಿದ್ದ ವ್ಯಕ್ತಿ.!

ಜಿಲ್ಲೆಯ ಸಿಂದಗಿ ತಾಲೂಕಿನ ಗೋಲಗೇರಿಯಲ್ಲಿ ನಡೆದ ಗೋಲ್ಲಾಳೇಶ್ವರ ಜಾತ್ರೆಯ ರಥೋತ್ಸವದಲ್ಲಿ ಅವಘಡವೊಂದು ಸಂಭವಿಸಿದೆ. ಸುಮಾರು 70ಅಡಿ ರಥದ ಮೇಲೆ ಕಳಸವಿಟ್ಟು  ಪೂಜೆ ಕೈಂಕರ್ಯ ನಡೆದು ರಥ ಇನ್ನೇನು ಚಲಿಸಬೇಕು ಎನ್ನುವಾಗ ರಥದ ತುತ್ತ ತುದಿಯಿಂದ ವ್ಯಕ್ತಿಯೊಬ್ಬರು ಆಯ ತಪ್ಪಿ ಬಿದ್ದಿದ್ದಾರೆ.  ಅವರಿಗೆ ಗಂಭೀರ ಗಾಯಗಳಾಗಿದ್ದು ತಕ್ಷಣ ಆಸ್ಪತ್ರೆ ರವಾನಿಸಲಾಗಿದೆ, ಆದ್ರೆ ದಾರಿ ಮಧ್ಯೆಯೆ ಸಾವನ್ನಪ್ಪಿದ್ದಾರೆ. 

KARNATAKA ASSEMBLY ELECTIONS 2023: ಕಾಂಗ್ರೆಸ್‌-ಬಿಜೆಪಿಯಲ್ಲಿ ಟಿಕೆಟ್‌ಗೆ ಹೈವೋಲ್ಟೇಜ್‌ ಫೈಟ್‌..!

ರಥದ‌‌ ತುತ್ತ ತುದಿಯಿಂದ ಬಿದ್ದು ಸಾವು..!

ರಥದ ತುದಿಯಿಂದ ಬಿದ್ದ ವ್ಯಕ್ತಿಯನ್ನ‌ ಸಾಹೇಬ ಪಟೇಲ್ ಕಾಚಾಪುರ ಎನ್ನಲಾಗಿದೆ. ಇವರನ್ನ ಮುದುಕಣ್ಣ ಎಂದಲು ಕರೆಯಲಾಗುತಿತ್ತು. ಬಿದ್ದ ತಕ್ಷಣವೇ ಅಲ್ಲಿದ್ದ ಸ್ಥಳೀಯರು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದ್ರೆ ದಾರಿ ಮಧ್ಯೆಯೆ ವ್ಯಕ್ತಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.. ಇಂದಿನಿಂದ  ಗೋಲ್ಲಾಳೇಶ್ವರ ಜಾತ್ರೆ  ರಥೋತ್ಸವದೊಂದಿಗೆ ಆರಂಭಗಗೊಳ್ಳಬೇಕಾಗಿತ್ತು. ಐದು ದಿನಗಳ‌ ನಂತರ ಕಳಸದ ಮೆರವಣಿಗೆ ಆದ ಮೇಲೆ ಜಾತ್ರೆ ಸಂಪನ್ನಗೊಳ್ಳಲಿತ್ತು.‌ ಆದರೆ ಅಷ್ಟರೊಳಗಾಗಿ ಈ ಅವಘಡ ಸಂಭವಿಸಿದೆ. 

ಜಾತ್ರೆಯ ಸಂಭ್ರಮದ ನಡುವೆ ಆವರಿಸಿದ ಶೋಕ..!

ಗೋಲ್ಲಾಳೇಶ್ವರ ಜಾತ್ರೆಗೆ ಮಹಾರಾಷ್ಟ್ರ, ಆಂದ್ರಪ್ರದೇಶ ಸೇರಿದಂತೆ ಲಕ್ಷಾಂತರ ಭಕ್ತರು ಸೇರುತ್ತಾರೆ. ಧರ್ಮದರ್ಶಿ ವರಪುತ್ರ ಹೊಳೆಪ್ಪನವರ ದೇವರಮನಿ ಈ ವೇಳೆ ಭಕ್ತರಿಗೆ ಮನವಿ ಮಾಡಿದ್ದು, ಸಧ್ಯ ರಥದಿಂದ ಬಿದ್ದಿರುವ ಮುದುಕಣ್ಣ ಕಾಚಾಪುರ ಗೋಲ್ಲಾಳೇಶ್ವರ ದೇವಸ್ಥಾನದಲ್ಲಿ ಹಲವು ವರ್ಷಗಳಿಂದ ಸೇವೆ ಮಾಡುತ್ತಿದ್ದವು. ಭಕ್ತರು ಯಾರು ಧೃತಿಗೇಡಬಾರದು, ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ. ಅವಘಡ ಹಿನ್ನೆಲೆಯಲ್ಲಿ ರಥೋತ್ಸವವನ್ನ ಅರ್ಧಕ್ಕೆ ನಿಲ್ಲಿಸಿದ್ದಾರೆ. 

ಮುದ್ದೇಬಿಹಾಳ ತಾಲೂಕಿನಲ್ಲೂ ರಥೋತ್ಸವ ವೇಳೆ ಅವಘಡ..!

ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದಲ್ಲು ರಥೋತ್ಸವ ನಡೆಯುತ್ತಿತ್ತು. ಈ ವೇಳೆ ಚಲಿಸುತ್ತಿದ್ದ ರಥದ ಚಕ್ರಕ್ಕೆ ಯುವಕನೊಬ್ಬ ಸಿಲುಕಿದ ಘಟನೆ ನಡೆದಿದೆ. ಸುಕ್ಷೇತ್ರ ಶ್ರೀ ಪವಾಡ ಬಸವೇಶ್ವರ ಜಾತ್ರೆಯ ಹಿನ್ನೆಲೆ ಗುರುವಾರ ಸಂಜೆ ನಡೆದ ಮಹಾರಥೋತ್ಸವದಲ್ಲಿ ಅತಿ ಭಾರದ ತೇರಿನ ಚಕ್ರಗಳು ಹರಿದ ಪರಿಣಾಮ ನಾಗರಾಜ್ ಯಲ್ಲಪ್ಪ ವಣಿಕ್ಯಾಳ‌ (25) ಎಂಬ ಯುವಕನ ಕಾಲಿಗೆ ಗಾಯಗಳಾಗಿವೆ. ಸಂಜೆ ತೇರನ್ನು ದೇವಸ್ಥಾನದಿಂದ ಪಾದಗಟ್ಟಿವರೆಗೆ ಭಕ್ತರು ಎಳೆದೊಯ್ದಿದ್ದರು. ಅಲ್ಲಿಂದ ಮರಳಿ ಕೆಳಮುಖವಾಗಿ ದೇವಸ್ಥಾನದತ್ತ ಎಳೆಯುವಾಗ ತೇರಿನ ಮುಂಭಾಗದಲ್ಲಿ ಹಗ್ಗ ಹಿಡಿದು ತೇರು ಜಗ್ಗುತ್ತಿದ್ದ ವ್ಯಕ್ತಿ ನೆಲಕ್ಕೆ ಬಿದ್ದ ಕೂಡಲೇ ಆತನ ಎರಡೂ ಕಾಲುಗಳ ಮೇಲೆ ಟನ್‍ ಭಾರದ ಕಲ್ಲಿನ ಚಕ್ರಗಳು ಹರಿದು ಹೋಗಿವೆ. ಕೂಡಲೇ ಭಕ್ತರು ತೇರು ನಿಲ್ಲಿಸಿ ವ್ಯಕ್ತಿಯನ್ನು ಹೊರಗೆ ಎಳೆದು ಮುದ್ದೇಬಿಹಾಳದಲ್ಲಿರುವ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಿದ್ದಾರೆ.

ವಿಜಯಪುರ ನಗರ ಬಿಜೆಪಿ ಟಿಕೆಟ್‌ಗಾಗಿ ಶುರುವಾಗಿದೆ ಜಟಾಪಟಿ..!

ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆಗೆ ಯುವಕನ ರವಾನೆ..!

ಯುವಕನ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಯುವಕನನ್ನ ಬಾಗಲಕೋಟೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸಧ್ಯ ಯುವಕನಿಗೆ ಅಗತ್ಯ ಚಿಕಿತ್ಸೆಯನ್ನ ನೀಡಲಾಗ್ತಿದ್ದು, ಕಾಲಿನ ಎಲುಬುಗಳು ಪುಡಿಪುಡಿಯಾಗಿವೆ ಎನ್ನಲಾಗ್ತಿದೆ.

ಎರಡು ಕಡೆ ಈ ಹಿಂದೆಯು ನಡೆದಿತ್ತು ಅವಘಡ, ಭಕ್ತರಲ್ಲಿ ಆತಂಕ..!

ಬಸರಕೋಡದ ಶ್ರೀ ಪವಾಡ ಬಸವೇಶ್ವರ ಜಾತ್ರೆ ಹಾಗೂ ಸಿಂದಗಿ ಗೊಲ್ಲಾಳೇಶ್ವರ ಜಾತ್ರೆಯ ರಥೋತ್ಸವ ವೇಳೆ ಈ ಹಿಂದೆಯೂ ಇಂಥದ್ದೇ ಘಟನೆಗಳು ನಡೆದಿದ್ದವು. ಬಸರಕೋಡ ಜಾತ್ರೆಯಲ್ಲಿ ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದ. ಇನ್ನೊಬ್ಬ ವ್ಯಕ್ತಿ ತೀವ್ರ ಗಾಯಗೊಂಡಿದ್ದ ಘಟನೆಗಳು ನಡೆದಿವೆ. ಈಗ ಮತ್ತೇ ಇಂಥ ಅವಘಡ ಸಂಭವಿಸಿದ್ದು ಭಕ್ತರ ಆತಂಕಕ್ಕೆ ಕಾರಣವಾಗಿದೆ.

click me!